Rain shower as they leave for their work on Kengeri ring road in Bengaluru
ಸೋಮವಾರ ಬೆಂಗಳೂರಿನಲ್ಲಿ ಸುರಿದ ಮಳೆ

Bengaluru: ಮೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆ ಮಳೆ; 307.9 ಮಿ.ಮೀ ವರ್ಷಧಾರೆ!

2025ರ ಮೇ 1 ರಿಂದ ಮೇ 26ರ ವರೆಗೆ ಸುರಿದಿರುವ 307.9 ಮಿ.ಮೀ.ನಷ್ಟು ಮಳೆಯು ಬೆಂಗಳೂರಿನ ಮೇ ಮಾಸದಲ್ಲಿ ಸುರಿದಿರುವ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮೇ 1ರಿಂದ ಮೇ 26ರ ವರೆಗೆ 307.9 ಮಿ.ಮೀ.ನಷ್ಟು ಮಳೆಯಾಗಿದ್ದು, ಇದು ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ.

2023ರಲ್ಲಿ ಬೆಂಗಳೂರಿನಲ್ಲಿ ಸುರಿದ 305.4 ಮಿ.ಮೀ ಮಳೆಯು ಸರ್ವಕಾಲಿಕ ದಾಖಲೆ ಮಳೆಯಾಗಿತ್ತು. ಆದರೆ, 2025ರ ಮೇ 1 ರಿಂದ ಮೇ 26ರ ವರೆಗೆ ಸುರಿದಿರುವ 307.9 ಮಿ.ಮೀ.ನಷ್ಟು ಮಳೆಯು ಬೆಂಗಳೂರಿನ ಮೇ ಮಾಸದಲ್ಲಿ ಸುರಿದಿರುವ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ. ಮುಂಗಾರು ಪ್ರವೇಶಕ್ಕೂ ಮುನ್ನ ಬೆಂಗಳೂರಿನಲ್ಲಿ ಇದುವರೆಗೆ ಸಾಧಾರಣ ಹಗುರದಿಂದ ಕೂಡಿದ ಮಳೆಯಾಗುತ್ತಿತ್ತು.

ಮುಂಗಾರು ಶುರುವಾದ ಬಳಿಕ ಜೂನ್‌ ನಂತರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿಯು ಬೆಂಗಳೂರಿಗೆ ಮುಂಗಾರು ವಾಡಿಕೆಗಿಂತ ಬೇಗ ಪ್ರವೇಶಿಸಿದೆ. ಇದಲ್ಲದೇ, ಮೇ ತಿಂಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಟ್ರಫ್ ಇದ್ದ ಹಿನ್ನೆಲೆಯಲ್ಲಿ ದಾಖಲೆಯ ಮಳೆ ಸುರಿದಿದೆ. ಇನ್ನು ಈ ಬಾರಿ ಬೆಂಗಳೂರಿನಲ್ಲಿ ಮಾರ್ಚ್‌ 1 ರಿಂದ ಮೇ 26ರ ವರೆಗೆ 340.6 ಮಿ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ 2 ತಿಂಗಳಲ್ಲಿ 133.5 ಮಿ.ಮೀ ವಾಡಿಕೆ ಮಳೆಯಾಗಿದೆ. ಆದರೆ, ವಾಡಿಕೆಗಿಂತ 155 ಮಿ.ಮೀ ಹೆಚ್ಚುವರಿ ಮಳೆ ಸುರಿದಿದೆ ಎಂದು ಐಎಂಡಿ ಬೆಂಗಳೂರು ಉಸ್ತುವಾರಿ ನಿರ್ದೇಶಕ ಎನ್ ಪುವಿಯರಸನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಐಎಂಡಿ ಪ್ರಕಾರ, ನಗರವು ಮೇ 2024 ರಲ್ಲಿ 181.5 ಮಿಮೀ ಮಳೆಯನ್ನು ದಾಖಲಿಸಿದೆ. ಮೇ 2022 ರಲ್ಲಿ, ಈ ಸಂಖ್ಯೆ 270.2 ಮಿಮೀ. ಸೋಮವಾರ ಸಂಜೆ 5.30 ರವರೆಗೆ, ಬೆಂಗಳೂರು ನಗರದಲ್ಲಿ 5 ಮಿಮೀ ಮಳೆಯಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 3.6 ಮಿ.ಮೀ., ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹವಾಮಾನ ಕೇಂದ್ರದಲ್ಲಿ 0.4 ಮಿ.ಮೀ. ಮಳೆ ದಾಖಲಾಗಿದೆ.

Rain shower as they leave for their work on Kengeri ring road in Bengaluru
ಮೇ 28ರಂದು ಕರ್ನಾಟಕಕ್ಕೆ ಮುಂಗಾರು ಆಗಮನ: ಈ ಬಾರಿ ದಾಖಲೆ ಮಳೆ ಸಾಧ್ಯತೆ..!

ಬೆಂಗಳೂರಿನಲ್ಲಿ ಸೋಮವಾರ ಗರಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ಕುಸಿತ ದಾಖಲಾಗಿದೆ. ನಗರದಲ್ಲಿ ಸಾಮಾನ್ಯ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ ಗರಿಷ್ಠ 26.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಏತನ್ಮಧ್ಯೆ, ಮೇ 26 ರಂದು ಬೀದರ್ ಹೊರತುಪಡಿಸಿ ಇಡೀ ಕರ್ನಾಟಕದಾದ್ಯಂತ ನೈಋತ್ಯ ಮಾನ್ಸೂನ್ ಆವರಿಸಿದೆ. ಮೇ 24 ರಂದು ಮಾನ್ಸೂನ್ ಏಕಕಾಲದಲ್ಲಿ ಕೇರಳ ಮತ್ತು ಕರ್ನಾಟಕವನ್ನು ಪ್ರವೇಶಿಸಿತು.

ಭಾರೀ ಮಳೆಯ ಮುನ್ಸೂಚನೆಯ ಬಗ್ಗೆ ಒಂದು ವಾರ ಮುಂಚಿತವಾಗಿ ಎಚ್ಚರಿಕೆ ನೀಡಲಾಗಿದೆ" ಎಂದು ಪುವಿಯರಸನ್ ಹೇಳಿದರು. ಏತನ್ಮಧ್ಯೆ, ಮುಂದಿನ 4-5 ದಿನಗಳವರೆಗೆ ಕರಾವಳಿ ಕರ್ನಾಟಕ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಐಎಮ್‌ಡಿ ರೆಡ್ ಅಲರ್ಟ್, ಉತ್ತರ ಒಳನಾಡಿಗೆ ಆರೆಂಜ್ ಅಲರ್ಟ್ ಮತ್ತು ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜೊತೆಗೆ ಘಾಟ್ ಪ್ರದೇಶಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ ಎಂದು ಪುವಿಯರಸನ್ ಹೇಳಿದ್ದಾರೆ.

ಕರ್ನಾಟಕದ ಉಳಿದ ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ನಿರಂತರ ಮಳೆಯ ಜೊತೆಗೆ, ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಅಲ್ಪಾವಧಿಯ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

X
Open in App

Advertisement

X
Kannada Prabha
www.kannadaprabha.com