ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; 28 ವರ್ಷದ ನೃತ್ಯ ಶಿಕ್ಷಕನ ಬಂಧನ

ಸಂತ್ರಸ್ತೆ ಕಾರು ಹತ್ತುತ್ತಿದ್ದಂತೆ, ಆರೋಪಿ ಬಾಗಿಲುಗಳನ್ನು ಲಾಕ್ ಮಾಡಿ ಸ್ವಲ್ಪ ದೂರ ಹೋಗಿದ್ದಾನೆ. ಈ ಸಮಯದಲ್ಲಿ, ಅವನು ಹುಡುಗಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bharathi kannan
ಬಂಧಿತ ಆರೋಪಿ ಭಾರತಿ ಕಣ್ಣನ್
Updated on

ಬೆಂಗಳೂರು: ತನ್ನ ಕಾರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 28 ವರ್ಷದ ನೃತ್ಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೇ 24 ರಂದು ಕಾಡುಗೋಡಿ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಭಾರತಿ ಕಣ್ಣನ್ ಬಂಧಿತ ಆರೋಪಿ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತ್ರಸ್ತೆಯ ಬಳಿ ಕಾರು ನಿಲ್ಲಿಸಿದ್ದಾನೆ, ನಂತರ ತಾನು ನೃತ್ಯ ಶಿಕ್ಷಕ ಎಂದು ಪರಿಚಯಿಸಿಕೊಂಡು ನೃತ್ಯ ತರಗತಿಗಳ ಬಗ್ಗೆ ವಿವರಗಳನ್ನು ವಿವರಿಸುವ ನೆಪದಲ್ಲಿ ಆಕೆಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ.

ಸಂತ್ರಸ್ತೆ ಕಾರು ಹತ್ತುತ್ತಿದ್ದಂತೆ, ಆರೋಪಿ ಬಾಗಿಲುಗಳನ್ನು ಲಾಕ್ ಮಾಡಿ ಸ್ವಲ್ಪ ದೂರ ಹೋಗಿದ್ದಾನೆ. ಈ ಸಮಯದಲ್ಲಿ, ಅವನು ಹುಡುಗಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಕಣ್ಣನ್, ಸಂತ್ರಸ್ತೆಯನ್ನು ತಾನು ಕರೆದುಕೊಂಡು ಹೋದ ಸ್ಥಳದಲ್ಲೇ ಇಳಿಸಿದ್ದಾನೆ. ಸಂತ್ರಸ್ತೆ ಮನೆಗೆ ತಲುಪಿದ ನಂತರ, ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಅದಾದ ಮೇಲೆ ಅವರು ದೂರು ದಾಖಲಿಸಿದ್ದರು, ನಂತರ, ಕಣ್ಣನ್ ನನ್ನು ಬಂಧಿಸಲಾಯಿತು ಎಂದು ವಿವರಿಸಿದ್ದಾರೆ.

Bharathi kannan
'ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ': ಅತ್ಯಾಚಾರ ಆರೋಪಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com