

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ (The New Indian express newspaper) ಬೆಂಗಳೂರು ಆವೃತ್ತಿಯಲ್ಲಿ ವರದಿ ಬಳಿಕ ಎಚ್‌ಬಿಆರ್ ಮತ್ತು ಕಮ್ಮನಹಳ್ಳಿಯ ಚರಂಡಿ ಸಮಸ್ಯೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ದೂರಾಗಿಸಿದೆ.
October 28 ರಂದು "Delay in completing whitetopping work in HBR, Kammanahalli troubles residents" ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಿದ್ದು, ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.
ವೈಟ್‌ಟಾಪಿಂಗ್ ಮತ್ತು ಇತರೆ ಕಾಮಗಾರಿ ಕೆಲಸಗಳಿಂದ ಸೃಷ್ಟಿಯಾದ ತ್ಯಾಜ್ಯ ಚರಂಡಿ ಸೇರಿ ಎಚ್‌ಬಿಆರ್ ಮತ್ತು ಕಮ್ಮನಹಳ್ಳಿ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದರು. ಚರಂಡಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಮಸ್ಯೆ ಎದುರಾಗಿತ್ತು. ಹಿರಿಯ ನಾಗರೀಕರು ಮನೆಗಳ ಒಳಗೆ ಹಾಗೂ ಹೊರಗೆ ಹೋಗಲು ಸಂಕಷ್ಟ ಪಡುತ್ತಿದ್ದರು.
ಜನರ ಸಮಸ್ಯೆಯ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಧ್ವನಿ ಎತ್ತಿದ್ದು, ಈ ಕುರಿತು ವರದಿ ಪ್ರಕಟಿಸಿತ್ತು. ಈ ವರದಿಗೆ ಇದೀಗ ಅಧಿಕಾರಿಗಳು ಸ್ಪಂದಿಸಿದ್ದಾರೆ.
ತಿಂಗಳುಗಳಿಂದ ಬಗೆಹರಿಯದೆ ಉಳಿದಿದ್ದ ಸಮಸ್ಯೆಯನ್ನು ಮಾಧ್ಯಮಗಳ ವರದಿಯಿಂದ ಬಗೆಹರಿಯುವಂತಾಗಿದೆ. ಮಾಧ್ಯಮದ ಬೆಂಬಲಕ್ಕೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಪಾಲಿಕೆಕ ಸಿಬ್ಬಂದಿ ಈಗ ಪಕ್ಕದ ಚರಂಡಿಗಳು ಮತ್ತು ರಾಜಕಾಲುವೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು HBR ನಿವಾಸಿ ಕಲ್ಯಾಣ ಸಂಘದ ದಯಾಳು ಅರಸಪ್ಪ ಅವರು ಹೇಳಿದ್ದಾರೆ.
Advertisement