TNIE ವರದಿ ಫಲಶ್ರುತಿ: ಶಿಳ್ಳೆಕ್ಯಾತ ಸಮುದಾಯಕ್ಕೆ ಸ್ಮಶಾನ ಭೂಮಿ ನಿರಾಕರಣೆ ಕುರಿತು ಲೋಕಾಯುಕ್ತ ಪರಿಶೀಲನೆ; ಸ್ವಯಂಪ್ರೇರಿತ ಪ್ರಕರಣ ದಾಖಲು

ಆಗಸ್ಟ್.29 ರಂದು ‘No place to bury the dead, an islet the final resting place’ ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು.
A body being ferried to the islet on a coracle in the Bhadra backwaters
ಭದ್ರಾ ಹಿನ್ನೀರಿನಲ್ಲಿ ದ್ವೀಪಕ್ಕೆ ಶವ ಸಾಗಿಸಲಾಗುತ್ತಿರುವುದು
Updated on

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ (The New Indian express newspaper) ಬೆಂಗಳೂರು ಆವೃತ್ತಿಯಲ್ಲಿ ವರದಿ ಬಳಿಕ ಶಿಳ್ಳೆಕ್ಯಾತ ಸಮುದಾಯಕ್ಕೆ ಸ್ಮಶಾನ ಭೂಮಿ ನಿರಾಕರಣೆ ಕುರಿತು ಪರಿಶೀಲೆ ನಡೆಸಿದ್ದು, ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಆಗಸ್ಟ್.29 ರಂದು ‘No place to bury the dead, an islet the final resting place’ ಶೀರ್ಷಿಕೆ ಅಡಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸೋಮವಾರ ಎನ್ಆರ್ ಪುರ ತಾಲ್ಲೂಕಿನ ತಹಶೀಲ್ದಾರ್ ನೂರುಲ್ ಹುಡಾ ಮತ್ತು ಚಿಕ್ಕಮಗಳೂರು ಜಿಲ್ಲೆಯ ರಾವೂರು ಶಿಬಿರದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್‌ನ ಉಪ ಆಯುಕ್ತರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಕ್ಟೋಬರ್ 4 ರೊಳಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಆಗಸ್ಟ್ 29ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ನ್.ಆರ್.ಪುರ ತಾಲ್ಲೂಕಿನ ಮೆಣಸೂರು ರಾವೂರು ಶಿಬಿರದಲ್ಲಿ ವಾಸಿಸುವ ಶಿಳ್ಳೆಕ್ಯಾತ ಮೀನುಗಾರಿಕಾ ಸಮುದಾಯದ (ಪರಿಶಿಷ್ಟ ಜಾತಿ) ಸುಮಾರು 150 ಕುಟುಂಬಗಳಿಗೆ ತಮ್ಮ ಸಂಬಂಧಿಕರನ್ನು ಹೂಳಲು ತುಂಡು ಭೂಮಿಯಿಲ್ಲದೆ ಪರದಾಡುತ್ತಿದ್ದಾರೆಂದು ವರದಿ ಮಾಡಿತ್ತು.

A body being ferried to the islet on a coracle in the Bhadra backwaters
ಚಿಕ್ಕಮಗಳೂರು: 2 ದಶಕಗಳಿಂದ ಸಿಕ್ಕಿಲ್ಲ ಸ್ಮಶಾನ ಭೂಮಿ; ಅಂತ್ಯ ಸಂಸ್ಕಾರಕ್ಕೆ ಶಿಳ್ಳೆಕ್ಯಾತ ಸಮುದಾಯದ 'ಹೆಣ'ಗಾಟ!

ಸುಮಾರು ಎರಡು ದಶಕಗಳಿಂದ ಭದ್ರಾ ನದಿಯ ಹಿನ್ನೀರಿನ ಬಳಿಯ ಶಿಬಿರದಲ್ಲಿ ವಾಸಿಸುತ್ತಿದ್ದರೂ, ಸ್ಮಶಾನ ಸ್ಥಳದಿಂದ ವಂಚಿತರಾಗಿದ್ದಾರೆ. ಸಮುದಾಯದ ಸದಸ್ಯರು ತಮ್ಮ ಶಿಬಿರದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕಿರು ದ್ವೀಪದಲ್ಲಿ ಸತ್ತವರನ್ನು ಹೂಳಬೇಕಾಗಿದೆ ಎಂದು ತಿಳಿಸಿತ್ತು.

ಅಲ್ಲದೆ, ಭಾನುವಾರ ನಿಧನರಾದ ವೃದ್ಧ ವ್ಯಕ್ತಿಯ ಶವವನ್ನು ಅಂತಿಮ ವಿಧಿವಿಧಾನಗಳನ್ನು ಮಾಡಲು ಹಳ್ಳದ ಮೇಲೆ ದ್ವೀಪಕ್ಕೆ ಕೊಂಡೊಯ್ದಿರುವ ವಿಚಾರ ಕುರಿತು ಬೆಳಕು ಚೆಲ್ಲಿತ್ತು.

ವರದಿ ಬೆನ್ನಲ್ಲೇ ಉಪ ಲೋಕಾಯುಕ್ತ ಫಣೀಂದ್ರ ಅವರು, ಅಂತಿಮ ವಿಧಿಗಳನ್ನು ನಿರ್ವಹಿಸುವಾಗ ಅಗಲಿದ ಆತ್ಮಗಳಿಗೆ ಘನತೆ ಮತ್ತು ಗೌರವವನ್ನು ಖಚಿತಪಡಿಸಿಕೊಳ್ಳಬೇಕು ಎಂಬ ಸುಪ್ರೀಂಕೋರ್ಟ್'ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿಸಿದರು. ಎಲ್ಲಾ ಹಳ್ಳಿಗಳು ಮತ್ತು ಪಟ್ಟಣಗಳಿಗೆ ಸ್ಮಶಾನ ಸ್ಥಳಗಳನ್ನು ಒದಗಿಸಲು ರಾಜ್ಯ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದ ಹೈಕೋರ್ಟ್ ಆದೇಶವನ್ನೂ ಅವರು ಉಲ್ಲೇಖಿಸಿದರು.

ಶಿಳ್ಳೆಕ್ಯಾತ ಸಮುದಾಯಕ್ಕೆ ಸ್ಮಶಾನ ಸ್ಥಳ ಒದಗಿಸುವುದು ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಕರ್ತವ್ಯ ನಿರ್ವಹಿಸದಿರುವುದು ಲೋಪಕ್ಕೆ ಸಮನಾಗಿರುತ್ತದೆ. ಇದನ್ನು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 2(10) ರ ಅಡಿಯಲ್ಲಿ ದುರಾಡಳಿತವೆಂದು ಪರಿಗಣಿಸಬೇಕಾಗುತ್ತದೆ. ಆದೇಶದ ಪ್ರತಿಯನ್ನು ಚಿಕ್ಕಮಗಳೂರು ಜಿಲ್ಲಾ ಸಚಿವ ಕೆ.ಜೆ. ಜಾರ್ಜ್ ಅವರಿಗೂ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com