

ಬೆಂಗಳೂರು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಸ್ಪೂರ್ತಿದಾಯಕ ಮಹಿಳಾ ಸಾಧಕಿಯರಿಗೆ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ಕೊಡಮಾಡುವ 'ದೇವಿ ಅವಾರ್ಡ್ಸ್' 2025 ಸಮಾರಂಭ ಬೆಂಗಳೂರಿನಲ್ಲಿ ಶನಿವಾರ ಸಂಜೆ ನಡೆಯಿತು.
ತನ್ನ 33 ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಆಕ್ಸಿಲರ್ ವೆಂಚರ್ಸ್‌ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೊಂಥಾಲಿಯಾ, ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ ಮತ್ತು ಸಿಇಒ ಲಕ್ಷ್ಮಿ ಮೆನನ್, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಡೈರೆಕ್ಟರ್ ನೇಹಾ ಸಂತಾಲಿಯಾ ಉಪಸ್ಥಿತರಿದ್ದರು.
ಮಾಜಿ ಭಾರತೀಯ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಸೇರಿದಂತೆ ಕ್ರೀಡೆ, ವ್ಯಾಪಾರ, ಆಡಳಿತ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಿಗೆ ಸನ್ಮಾನದೊಂದಿಗೆ ಗೌರವಿಸಲಾಯಿತು.
ಹೇಮಾ ಚೌಧರಿ, ಮಯೂರ ಬಾಲಸುಬ್ರಮಣ್ಯಂ, ಮಾಜಿ ಭಾರತೀಯ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ, ನೂರೈನ್ ಫಜಲ್, ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್, ಸಹಾರ್ ಮನ್ಸೂರ್, ದಿ ರಾಮೇಶ್ವರಂ ಕೆಫೆ ಸಹ- ಸಂಸ್ಥಾಪಕಿ ದಿವ್ಯಾ ರಾವ್, ಪ್ರಗತಿ ಮಥೂರ್, ಛಾಯಾ ನಂಜಪ್ಪ,ಅನಿತಾ ನಾಯ್ಯರ್, ದೀಪ್ತಿ ಬೋಪಯ್ಯ ಅವರು ಪ್ರಶಸ್ತಿ ಪ್ರಡೆದ ಮಹಿಳಾ ಸಾಧಕಿಯರು.
Advertisement