

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ (ಜಿಬಿಎ) ರಚಿಸಲಾಗಿರುವ ಐದು ಹೊಸ ನಗರ ಪಾಲಿಕೆಗಳ ವಾರ್ಡ್‌ಗಳನ್ನು ಅಂತಿಮಗೊಳಿಸಿ, ನವೆಂಬರ್ 15ರೊಳಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ (63 ವಾರ್ಡ್‌ಗಳು), ಬೆಂಗಳೂರು ಉತ್ತರ ನಗರ ಪಾಲಿಕೆ (72), ಬೆಂಗಳೂರು ದಕ್ಷಿಣ ನಗರ ಪಾಲಿಕೆ (72), ಬೆಂಗಳೂರು ಪಶ್ಚಿಮ ನಗರ ಪಾಲಿಕೆ (111), ಮತ್ತು ಬೆಂಗಳೂರು ಪೂರ್ವ ನಗರ ಪಾಲಿಕೆ (50) ಒಟ್ಟು ಐದು ಹೊಸ ಪಾಲಿಕೆಗಳ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಲಿದೆ.
ಕರಡು ಅಧಿಸೂಚನೆಯಲ್ಲಿ ಸರ್ಕಾರವು ಈ ಒಟ್ಟು 368 ವಾರ್ಡ್‌ಗಳನ್ನು ಘೋಷಿಸಿದ್ದು, ನವೆಂಬರ್ 1 ರೊಳಗೆ ಸಾರ್ವಜನಿಕರು ಮತ್ತು ಚುನಾಯಿತ ಪ್ರತಿನಿಧಿಗಳಿಂದ ಆಕ್ಷೇಪಣೆಗಳು/ಸಲಹೆಗಳನ್ನು ಆಹ್ವಾನಿಸಿದೆ.
ವಾರ್ಡ್‌ಗಳ ವಿಂಗಡಣೆ ಮತ್ತು ಮೀಸಲಾತಿ ಮಾದರಿಯ ವಿರುದ್ಧ ಸಾರ್ವಜನಿಕರು ಅಥವಾ ಚುನಾಯಿತ ಪ್ರತಿನಿಧಿಗಳು ನ್ಯಾಯಾಲಯವನ್ನು ಸಂಪರ್ಕಿಸಲು ಕರಡು ಅಧಿಸೂಚನೆಯಲ್ಲಿ ಅವಕಾಶವಿದೆ, ನಂತರ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಬಿಎಂಪಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಗೋವಿಂದರಾಜ್ ನಗರದ ಬಿಜೆಪಿ ನಾಯಕ ಉಮೇಶ್ ಶೆಟ್ಟಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರವು ಸೆಪ್ಟೆಂಬರ್ 10, 2020 ರಿಂದ ಚುನಾಯಿತ ಸಂಸ್ಥೆಯಿಲ್ಲದೆ ಬೆಂಗಳೂರಿನಲ್ಲಿ ಹೊಸ ನಿಗಮಗಳಿಗೆ ಚುನಾವಣೆ ನಡೆಸುವ ಕಡೆಗೆ ಈ ಕಸರತ್ತುಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿಕೊಂಡಿದೆ. ಆದರೆ, ಸರ್ಕಾರ ಚುನಾವಣೆ ನಡೆಸುವ ಮನಸ್ಥಿತಿಯಲ್ಲಿಲ್ಲ. ವಾರ್ಡ್‌ಗಳ ಮೀಸಲಾತಿಯನ್ನು ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿಯಂತಹ ಪಕ್ಷಗಳ ಆಕಾಂಕ್ಷಿ ನಾಯಕರಿಗೆ ಅವಕಾಶವನ್ನು ನಿರಾಕರಿಸಲು ಅದು ಬಯಸುತ್ತಿದೆ. ಉದಾಹರಣೆಗೆ ಒಂದು ವಾರ್ಡ್ ನಲ್ಲಿ ಗೆಲ್ಲುವ ಅವಕಾಶವಿದ್ದರೂ ಆತನಿಗೆ ಮತ್ತೊಂದು ವಾರ್ಡ್ ಆಯ್ಕೆ ಮಾಡುವಂತೆ ಒತ್ತಾಯಿಸಲಾಗುತ್ತದೆ. ಏಕೆಂದರೆ ಆತ ಜನಪ್ರಿಯವಾಗಿರುವ ವಾರ್ಡ್ ಮಹಿಳೆಯರಿಗೆ ಅಥವಾ ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ವರ್ಗಗಳ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತದೆ ಎಂದು ಹೇಳಿದ್ದಾರೆ.
Advertisement