ಮದಗಜಗಳ ಕಾದಾಟ: ಕ್ಯಾಪ್ಟನ್ ಜೊತೆ ಭೀಕರ ಸಂಘರ್ಷ; ಕಾಡಾನೆ ಭೀಮನ ದಂತ ಮುರಿತ!

ಹಾಸನ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ ಕಾಡಾನೆಗಳ ಕಾಳಗದಲ್ಲಿ ಕಾಡಾನೆ ಭೀಮನ ದಂತ ಮುರಿದಿದೆ ಎಂದು ತಿಳಿದುಬಂದಿದೆ.
ಮದಗಜಗಳ ಕಾದಾಟ: ಕ್ಯಾಪ್ಟನ್ ಜೊತೆ ಭೀಕರ ಸಂಘರ್ಷ; ಕಾಡಾನೆ ಭೀಮನ ದಂತ ಮುರಿತ!
Updated on

ಹಾಸನ: ಮಲೆನಾಡು ಭಾಗದ ಜನರ ಅಚ್ಚುಮೆಚ್ಚಿನ ಕಾಡಾನೆ ಭೀಮ ಮತ್ತೊಂದು ಕಾಡಾನೆ ಜೊತೆ ಕಾಳಗ ನಡೆಸುತ್ತಿದ್ದಾಗ ತನ್ನ ದಂತ ಮುರಿದುಕೊಂಡಿದೆ.

ಹೌದು.. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಹಾಸನ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ ಕಾಡಾನೆಗಳ ಕಾಳಗದಲ್ಲಿ ಕಾಡಾನೆ ಭೀಮನ ದಂತ ಮುರಿದಿದೆ ಎಂದು ತಿಳಿದುಬಂದಿದೆ.

ಕಳೆದ ಒಂದು ವಾರದಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳ ಮುಖ್ಯಬೀದಿಯಲ್ಲಿ ಓಡಾಡುತ್ತಿದ್ದ ಕಾಡಾನೆ ಭೀಮ ಇತ್ತೀಚೆಗೆ ಮತ್ತೊಂದು ಕಾಡಾನೆ ಕ್ಯಾಪ್ಟನ್ ಜೊತೆ ಕಾಣಿಸಿಕೊಂಡಿತ್ತು.

ಇಂದು ಬೆಳಿಗ್ಗೆ ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಕಾಡಾನೆ ಭೀಮ ಮತ್ತು ಕ್ಯಾಪ್ಟನ್ ಆನೆಗಳು ಕಾದಾಡಿದ್ದು ಈ ವೇಳೆ ಭೀಮ ಆನೆಯ ಬಲಭಾಗದ ದಂತ ಮುರಿದಿದೆ.

ಮದಗಜಗಳ ಕಾದಾಟ: ಕ್ಯಾಪ್ಟನ್ ಜೊತೆ ಭೀಕರ ಸಂಘರ್ಷ; ಕಾಡಾನೆ ಭೀಮನ ದಂತ ಮುರಿತ!
ಬೆಂಗಳೂರು ದಕ್ಷಿಣ: ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ 2 ಕಾಡಾನೆ ಸಾವು

ಭೀತಿ ಸೃಷ್ಟಿಸಿದ್ದ ಕ್ಯಾಪ್ಟನ್ ಮತ್ತು ಭೀಮ

ಕಳೆದ ಐದಾರು ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ವಿವಿದೆಡೆ ಸಂಚಾರ ಮಾಡುತ್ತಾ, ಶಾಂತವಾಗಿ ಓಡಾಡುತ್ತಿದ್ದ ಭೀಮ ಇದೀಗ ಆತಂಕ ಸೃಷ್ಟಿಸಿದೆ. ಕಳೆದ ಒಂದು ವಾರದಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳ ಮುಖ್ಯಬೀದಿಯಲ್ಲೇ ನಡೆದು ಹೋಗಿದ್ದ ಭೀಮ, ಇಂದು ಮತ್ತೊಂದು ದೈತ್ಯಾಕಾರದ ಕ್ಯಾಫ್ಟನ್ ಹೆಸರಿನ ಕಾಡಾನೆ ಜೊತೆಗೆ ಓಡಾಡುತ್ತಾ ಭೀತಿ ಸೃಷ್ಟಿಸಿತ್ತು.

ಇಂದು ಬೆಳಿಗ್ಗೆ ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಎರಡೂ ಆನೆಗಳು ಕಾಳಗ ಶುರುಮಾಡಿದ್ದು, ರೋಷಾವೇಶದಿಂದ ಗ್ರಾಮದೊಳಗೆ ಎಂಟ್ರಿಯಾದ ಭೀಮ, ನೀರಿನ ಟ್ಯಾಂಕರ್ ಪುಡಿಗಟ್ಟಿ, ಎತ್ತಿನ ಗಾಡಿ ಎತ್ತಿ ಬಿಸಾಡಿ ರೌದ್ರಾವತಾರ ಪ್ರದರ್ಶನ ಮಾಡಿತ್ತು.

ಭೀಕರ ಕಾಳಗ

ಇನ್ನು ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಭೀಮ ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಕ್ಯಾಪ್ಟನ್ ಜೊತೆ ಕಾಳಗಕ್ಕೆ ಇಳಿದಿತ್ತು. ಕ್ಯಾಫ್ಟನ್ ಜೊತೆಗಿನ ಕಾದಾಟದಲ್ಲಿ ಭೀಮನ ಬಲಬಾಗದ ದಂತ ಸಂಪೂರ್ಣ ಮುರಿದು ಬಿದ್ದಿದ್ದು, ಮತ್ತೊಂದು ಆನೆಗೂ ಗಾಯಗಳಾಗಿವೆ. ಸದ್ಯ ದಂತ ಮುರಿದುಕೊಂಡು ಕಾಫಿತೋಟದಲ್ಲಿ ಸೇರಿಕೊಂಡಿರುವ ಸಲಗ ನರಳಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಬೆನ್ನಟ್ಟಿ ಜನರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿದ್ದಾರೆ.

ಮದಗಜಗಳ ಕಾದಾಟ: ಕ್ಯಾಪ್ಟನ್ ಜೊತೆ ಭೀಕರ ಸಂಘರ್ಷ; ಕಾಡಾನೆ ಭೀಮನ ದಂತ ಮುರಿತ!
ಕೃಷಿ ಜಮೀನುಗಳಲ್ಲಿ ಪುಂಡಾಟ: ಖಾನಾಪುರ ರೈತರ ನಿದ್ದೆಗೆಡಿಸಿದ ಕಾಡಾನೆ

ಪರದಾಡಿದ ಅರಣ್ಯ ಸಿಬ್ಬಂದಿ

ಕಾಡಾನೆ ಗ್ರಾಮದೊಳಗೆ ಬಂದಾಗ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಹಿಂಬಾಲಿಸಿದರೂ ಸಹ ಪಟಾಕಿ ಇಲ್ಲದೆ ಆನೆಯನ್ನು ಓಡಿಸಲು ಪರದಾಡಬೇಕಾಯಿತು.

ಶಾರ್ಪ್ ಶೂಟರ್ ವೆಂಕಟೇಶ್ ಕೊಂದಿದ್ದ ಭೀಮ

2023ರ ಆಗಸ್ಟ್ ತಿಂಗಳಲ್ಲಿ ಬೆನ್ನಿನ ಕೆಳಬಾಗದಲ್ಲಿ ದೊಡ್ಡ ಗಾಯವಾಗಿ ನರಳಾಡಿದ್ದ ಭೀಮನಿಗೆ ಸೆಪ್ಟೆಂಬರ್ 25ರಂದು ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದರು. ಆದರೆ ಅದು ಪರಿಣಾಮಕಾರಿಯಾಗದ್ದರಿಂದ ಆಗಸ್ಟ್ 31ರಂದು ಭೀಮನಿಗೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಲಾಗಿತ್ತು. ಆಪರೇಷನ್ ನಡೆಸುತ್ತಿದ್ದ ವೇಳೆ ಮದವೇರಿದ್ದ ಭೀಮ ಏಕಾ ಏಕಿ ಅಂದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ಮಾಡಿ ಕೊಂದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com