ಬೆಂಗಳೂರು: ಪರಪ್ಪನ ಅಗ್ರಹಾರ ಜೈಲನ್ನು ರೆಸಾರ್ಟ್ ಆಗಿ ಪರಿವರ್ತಿಸಿರುವ ರಾಜ್ಯ ಸರ್ಕಾರ, ಅಲ್ಲಿನ ಖೈದಿಗಳಿಗೆ ಐಷಾರಾಮಿ ಜೀವನ, ಐಟಂ ಸಾಂಗ್ ಭಾಗ್ಯ ದಯಪಾಲಿಸಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಜೈಲಿನ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ರೇಪಿಸ್ಟ್ ಗಳು, ಸ್ಮಗ್ಲರ್ ಗಳು ಹಾಗೂ ಉಗ್ರರಿಗೆ ಮಾದಕ ವಸ್ತು, ಟಿವಿ, ಮೊಬೈಲು, ಇಂಟರ್‌ನೆಟ್, ಮದ್ಯ ಸರಬರಾಜು ಆಗುತ್ತಿದೆ. ಹಾಗೇ ಸಮಾಜಘಾತುಕರ ಮೋಜು-ಮಸ್ತಿ ಎಗ್ಗಿಲ್ಲದೆ ನಡೆಯುತ್ತಿದ್ದರೂ ʼಗೊತ್ತಿಲ್ಲʼ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಗಾಢ ನಿದ್ರೆಗೆ ಜಾರಿದ್ದಾರೆ ಎಂದು ಆರೋಪಿಸಿದೆ.
ಜೈಲಿನಲ್ಲಿರುವ ಅಪರಾಧಿಗಳು, ಭಯೋತ್ಪಾದಕರಿಗಾಗಿ ಸರ್ಕಾರ ಆರನೇ ಗ್ಯಾರಂಟಿ ಜಾರಿಗೊಳಿಸಿದೆ. ಅಸಮರ್ಥ ಸಿಎಂ ಹಾಗೂ ನಿಷ್ಪ್ರಯೋಜಕ ಗೃಹಮಂತ್ರಿ ಪರಮೇಶ್ವರ್ ಅವರ ವಿಫಲ ಕಾರ್ಯವೈಖರಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದೆ.
ರಾಜ್ಯ ಸರ್ಕಾರಕ್ಕೆ ಯಾವುದರಲ್ಲೂ ನಿಯಂತ್ರಣವಿಲ್ಲ. ನ್ಯಾಯಾಲಯಗಳು, ಶಿಕ್ಷೆ ವಿಧಿಸಿ ಜೈಲಿಗೆ ಹಾಕುವುದು ಮನಃಪರಿವರ್ತನೆಗಾಗಿ ಎನ್ನುವುದು ಇಲ್ಲಿ ಸುಳ್ಳಾಗುತ್ತಿದೆ. ಐಸಿಸ್ ಉಗ್ರಗಾಮಿಯಿಂದ ಹಿಡಿದು, ಸರಣಿ ರೇಪಿಸ್ಟ್‌ಗಳವರೆಗೂ ರಾಜ್ಯದ ಬಂಧಿಖಾನೆಯಲ್ಲಿ ಸ್ವಚ್ಛಂದವಾಗಿ ಜೀವನ ನಡೆಸುತ್ತಿದ್ದಾರೆ. ಮದ್ಯ, ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಆರೋಪಿಗಳಿಗೆ ಲಭ್ಯವಾಗುವುದಾದರೆ ಅವರನ್ನು ಜೈಲಿನಲ್ಲಿ ಇರಿಸಿದ್ದು ಏಕೆ? ಎಂದು ಪ್ರಶ್ನಿಸಿದೆ.

Advertisement