

ಬೆಂಗಳೂರು: ಸಫಾರಿ ಮಾಡುವ ವೇಳೆ ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು. ಎಷ್ಟೇ ಭದ್ರತೆ ಇದ್ದರೂ ಸಫಾರಿ ವಾಹನಗಳಲ್ಲಿ ಕುಳಿತಾಗ ಎಚ್ಚರ ತಪ್ಪಿದರೆ ಅನಾಹುತ ಆಗುತ್ತದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಚೆನ್ನೈ ಮೂಲದ 50 ವರ್ಷದ ವಹಿತ ಬಾನು ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಬನ್ನೇರುಘಟ್ಟ ಸಫಾರಿಗೆ ವಹಿತ ಬಾನು ಪತಿ ಮತ್ತು ಮಗನ ಜತೆ ಬಂದಿದ್ದರು. KSTDC ವಾಹನದಲ್ಲಿ ಸಫಾರಿಗೆ ತೆರಳಿದ ವಾಹನದ ಗ್ಲಾಸ್ ಓಪನ್ ಮಾಡಿ ನೋಡುತ್ತಿದ್ದರು. ಈ ವೇಳೆ ವಾಹನದ ಮೇಲೆ ಎಗರಿದ ಚಿರತೆ ವಹಿತ ಬಾನು ಕೈಗೆ ಪರಚಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement