

ಮೈಸೂರು: ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ಪರಿಹರಿಸುವ ಪ್ರಯತ್ನದಲ್ಲಿ, ಅರಣ್ಯ ಅಧಿಕಾರಿಗಳು ಮೈಸೂರಿನ ಎಚ್‌ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ 13 ಕಿ.ಮೀ. ಉದ್ದಕ್ಕೂ ಚೈನ್ ಲಿಂಕ್ ಮೆಶ್ ಅಳವಡಿಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
ಈ ತಡೆಗೋಡೆಯನ್ನು ಪ್ರಸ್ತುತ ಪ್ರಾಯೋಗಿಕವಾಗಿ ನಿರ್ಮಿಸಲಾಗುತ್ತಿದ್ದು, ಈ ಪ್ರಯೋಗ ಯಶಸ್ವಿಯಾದರೆ, ಮತ್ತಷ್ಟು ವಿಸ್ತರಿಸಿ 10 ಅಡಿ ಎತ್ತರಕ್ಕೆ ಏರಿಸಿ ಅಳವಡಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯು ಆರಂಭಿಕ ಹಂತದಲ್ಲಿದ್ದರೂ, ಜಾಲರಿ ಬೇಲಿ ಬಲವಾದ ಭೌತಿಕ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಕಾಡು ಪ್ರಾಣಿಗಳು ಜನರು ಮತ್ತು ಜಾನುವಾರುಗಳ ಸಂಪರ್ಕಕ್ಕೆ ಬರದಂತೆ ತಡೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ಸಂಘರ್ಷ ನಿರ್ವಹಣಾ ತಂತ್ರದ ಭಾಗವಾಗಿದ್ಜು. ಈ ಪ್ರಾಯೋಗಿಕ ಹಂತವು ತಡೆಗೋಡೆಯ ಕುರಿತು ಭವಿಷ್ಯದ ನಿರ್ಧಾರಗಳನ್ನು ಮಾರ್ಗದರ್ಶನ ನೀಡುತ್ತದೆ ಎಂದು ಆರ್‌ಎಫ್‌ಒ ಸಿದ್ದರಾಜು ಅವರು ತಿಳಿಸಿದರು.
ಚೈನ್-ಲಿಂಕ್ ಮೆಶ್ ಅಳವಡಿಕೆ ಸಮಾರಂಭದಲ್ಲಿ ಭಾಗವಹಿಸಿದ್ದ ಎಚ್‌ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಈ ಕ್ರಮವು ಮನುಷ್ಯ-ಪ್ರಾಣಿ ಸಂಘರ್ಷವನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
Advertisement