

ಬೆಂಗಳೂರು: ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್) 2018–19ರಲ್ಲಿ ಸಿದ್ಧಪಡಿಸಿದ್ದು, 2025-26ರ ದರ ಪಟ್ಟಿಯನ್ನು ಆಧರಿಸಿ ಪರಿಷ್ಕೃತ ಡಿಪಿಆರ್ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಾಧ್ಯಮಗಳ ವರದಿ ಬೆನ್ನಲ್ಲೇ ಜಲಸಂಪನ್ಮೂಲ ಇಲಾಖೆ ಸ್ಪಷ್ಟನೆ ನೀಡಿದೆ. ಇದು ಹೊಸ ಡಿಪಿಆರ್ ಅಲ್ಲ ಎಂಗು ಇಲಾಖೆ ಹೇಳಿದ್ದು, 2025-26ರ ದರ ಪಟ್ಟಿಯನ್ನು ಆಧರಿಸಿ ಪರಿಷ್ಕೃತ ಡಿಪಿಆರ್ ಸಲ್ಲಿಸಲಾಗುವುದು ಎಂದು ಹೇಳಿದೆ.
ಹಿಂದೆ ಸಿದ್ಧಪಡಿಸಿದ್ದ ಡಿಪಿಆರ್ ಅನ್ನು 2019ರ ಜನವರಿಯಲ್ಲಿ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯುಸಿ) ಸಲ್ಲಿಸಲಾಗಿತ್ತು. ಆಡಳಿತಾತ್ಮಕ ಮತ್ತು ಕಾನೂನು ನಿರ್ಬಂಧಗಳಿಂದಾಗಿ ಸಿಡಬ್ಲ್ಯುಸಿ ಅದನ್ನು ಪರಿಶೀಲನೆಗೆ ತೆಗೆದುಕೊಂಡಿರಲಿಲ್ಲ. ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ, 2025-26ರ ದರ ಪಟ್ಟಿಯನ್ನು ಆಧರಿಸಿ ಪರಿಷ್ಕೃತ ಡಿಪಿಆರ್ ಸಲ್ಲಿಸಲಾಗುವುದು ಎಂದು ತಿಳಿಸಿದೆ.
Advertisement