

ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಗಾಂಜಾ ಪತ್ತೆಯಾಗಿದ್ದು, ಜೈಲು ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಜೈಲಿನೊಳಗೆ ಶೋಧ ಕಾರ್ಯಾಚರಣೆಯ ನಂತರ ಎಫ್‌ಡಿಎ (ಫಸ್ಟ್ ಡಿವಿಷನ್ ಅಸಿಸ್ಟೆಂಟ್) ಆಗಿ ಕೆಲಸ ಮಾಡುತ್ತಿರುವ ಸಾತ್ವಿಕ್ (25) ಅವರನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಸಾತ್ವಿಕ್ ಕರ್ತವ್ಯಕ್ಕೆ ಬಂದಾಗ, ಶೋಧ ನಡೆಸಲಾಯಿತು. ಆಗ ಅವರ ಒಳ ಉಡುಪುಗಳಲ್ಲಿ ಡಕ್ಟ್ ಟೇಪ್‌ನಿಂದ ಸುತ್ತಿದ ವಸ್ತುವೊಂದು ಪತ್ತೆಯಾಗಿತ್ತು. ಅದನ್ನು ಪರಿಶೀಲಿಸಿದಾಗ, 170 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಷಯವನ್ನು ಜೈಲು ಅಧೀಕ್ಷಕರ ಗಮನಕ್ಕೆ ತರಲಾಗಿದ್ದು, ನಂತರ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement