
ಕಾರವಾರ: ಸೆಲ್ಫೀ ತೆಗೆಯಲು ಹೋಗಿ ಸಮುದ್ರದಲ್ಲಿ ಮುಳುಗಿ ಶಿವಮೊಗ್ಗ ಮೂಲದ ಪ್ರವಾಸಿಗ ದಾರುಣ ಸಾವನ್ನಪಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಕಡಲ ತೀರದಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಅಸ್ಲಾಂ (45) ಮೃತ ವ್ಯಕ್ತಿ. ಅಸ್ಲಾಂ ಶಿವಮೊಗ್ಗ ದಿಂದ 10ಜನರ ಜೊತೆಯಲ್ಲಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಓಂ ಬೀಚ್ ನಲ್ಲಿ ಕಲ್ಲುಬಂಡೆಯ ಮೇಲೆ ಸೆಲ್ಫೀ ತೆಗೆಯುವಾಗ ಕಾಲುಜಾರಿ ಬಿದ್ದು ಸಮುದ್ರಪಾಲಾಗಿದ್ದಾರೆ.
ಮೃತದೇಹವನ್ನು ಗೋಕರ್ಣದ ಪೊಲೀಸರು ಹಾಗೂ ಲೈಫ್ ಗಾರ್ಡ ಸಿಬ್ಬಂದಿ ಸಮುದ್ರದ ಮೇಲೆ ತಂದಿದ್ದು, ಶವವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement