ನವಜಾತ ಶಿಶು ಹೊಟ್ಟೆಯಲ್ಲಿ ಭ್ರೂಣ ಪತ್ತೆ: ಹುಬ್ಬಳ್ಳಿ ಕಿಮ್ಸ್​ನಲ್ಲಿ ಅಚ್ಚರಿಯ ಘಟನೆ...!

ಕಳೆದ‌ ಸೆಪ್ಟಂಬರ್ 23ರಂದು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಮಗುವಿನ ದೇಹದಲ್ಲಿ ಕೆಲ ಬದಲಾವಣೆಗಳು ಕಂಡು ಬಂದ ಹಿನ್ನಲೆಯಲ್ಲಿ ನವಜಾತ ಶಿಶುವಿಗೆ ಆಲ್ಟ್ರಾಸೌಂಡ್ ಮಾಡಿಸಲಾಗಿದೆ. ಈ ವೇಳೆ ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರುವ ಭ್ರೂಣ ಪತ್ತೆಯಾಗಿದೆ.
File photo
ಸಂಗ್ರಹ ಚಿತ್ರ
Updated on

ಹುಬ್ಬಳ್ಳಿ: ಆಗ ತಾನೇ ಜನಿಸಿದ ನವಜಾತ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿರುವ ಅಪರೂಪದ ಘಟನೆಗೆ ಹುಬ್ಬಳ್ಳಿಯ ಕಿಮ್ಸ್ ಸಾಕ್ಷಿಯಾಗಿದೆ.

ಎರಡನೇ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯು ಜನ್ಮ ನೀಡಿದ ಮಗುವಿನೊಳಗೊಂದು ಭ್ರೂಣ ಇರುವುದು ಪತ್ತೆಯಾಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗರ್ಭಿಣಿಯೊಬ್ಬರು ಎರಡನೇ ಹೆರಿಗೆಗೆಂದು ಕಿಮ್ಸ್ ನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದರು.

ಕಳೆದ‌ ಸೆಪ್ಟಂಬರ್ 23ರಂದು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಮಗುವಿನ ದೇಹದಲ್ಲಿ ಕೆಲ ಬದಲಾವಣೆಗಳು ಕಂಡು ಬಂದ ಹಿನ್ನಲೆಯಲ್ಲಿ ನವಜಾತ ಶಿಶುವಿಗೆ ಆಲ್ಟ್ರಾಸೌಂಡ್ ಮಾಡಿಸಲಾಗಿದೆ. ಈ ವೇಳೆ ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರುವ ಭ್ರೂಣ ಪತ್ತೆಯಾಗಿದೆ.

File photo
ತಾಯಿ-ನವಜಾತ ಶಿಶು ಸಾವಿನ ಪ್ರಮಾಣ ತಗ್ಗಿಸಲು ತಾಲ್ಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ: ದಿನೇಶ್ ಗುಂಡೂರಾವ್

ಹುಟ್ಟುವಾಗಲೇ ನವಜಾತ ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣದ ಬೆಳವಣಿಗೆ ಆಗುವುದನ್ನ ವೈದ್ಯಕೀಯ ಭಾಷೆಯಲ್ಲಿ Fetus in fetu ಎಂದು ಕರೆಯಲಾಗುತ್ತದೆ. ಈ ಅಪರೂಪದ ಘಟನೆ ವಿಶ್ವದಾದ್ಯಂತ 200 ಪ್ರಕರಣಗಳು ಮಾತ್ರ ವರದಿಯಾಗಿದೆ. ಆದರೆ, ಇಲ್ಲಿ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ.

ಭ್ರೂಣದ ಅಂಗಗಳು ಜೀವಂತವಾಗಿಲ್ಲ. ಅಂತಹ ಭಾಗಗಳು ಮಗುವಿನ ದೇಹದಲ್ಲಿ ಬೇರೆಡೆ ಇರುವ ಸಾಧ್ಯತೆಯಿದೆ. ನವಜಾತ ಶಿಶುವಿನ ದೇಹದೊಳಗೆ ಅಸಹಜ ದ್ರವ್ಯರಾಶಿ ಬೆಳೆಯುವ ಅಪರೂಪದ ಸ್ಥಿತಿಯಾಗಿದೆ. ಈ ದ್ರವ್ಯರಾಶಿಯು ತಲೆಬುರುಡೆ, ಬೆನ್ನು, ಬಾಯಿಯ ಒಳಭಾಗದಂತಹ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಹುದು. ಆದರೆ, ಇವು ಎಂದಿಗೂ ಸಂಪೂರ್ಣವಾಗಿ ಬೆಳವಣಿಗೆಯಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com