"ಹುಚ್ಚು ಕಟ್ಟಿದವರನ್ನ ಹುಚ್ಚು ಹಿಡಿಸುತ್ತೇನೆ": ದೈವದ ಎಚ್ಚರಿಕೆಯ ನುಡಿಯ ಬಗ್ಗೆ Kantara ಡೈಲಾಗ್ ಬಳಸಿ ವ್ಯಂಗ್ಯ, ಅಪಹಾಸ್ಯ!

ಕೆಲವರು ದೈವದ ನುಡಿ ಬಗ್ಗೆಯೇ ಅಪಹಾಸ್ಯ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದ ಡೈಲಾಗ್‌ಗಳನ್ನು ಬಳಸಿಕೊಂಡು ದೈವ ವಾಕ್ಯದ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ.
image of daivaradhane (to left) and image of Kantara movie (to right)
ದೈವಾರಾಧನೆಯ ದೃಶ್ಯ, ಕಾಂತಾರಾ ಸಿನಿಮಾ ದೃಶ್ಯ online desk
Updated on

ಬೆಂಗಳೂರು: ಕಾಂತಾರಾ ಸಿನಿಮಾ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ದೈವಾರಾಧಕರ ಆಕ್ಷೇಪ ತೀವ್ರಗೊಳ್ಳುತ್ತಿದ್ದು, ದೈವಾರಾಧನೆಯ ಅನುಕರಣೆ ವಿರುದ್ಧ ಎಚ್ಚರಿಕೆ ನೀಡಿದ್ದ ದೈವದ ಬಗ್ಗೆಯೇ ಈಗ ಅಪಹಾಸ್ಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸಿನಿಮಾ ನೀಡಿದ ಅಭಿಮಾನಿಗಳು ಕಂಡಕಂಡಲ್ಲಿ ದೈವದ ಅನುಕರಣೆ ಮಾಡುತ್ತಿರುವುದರ ಬಗ್ಗೆ ಬೇಸತ್ತ ದೈವನರ್ತಕರು ದೈವಕ್ಷೇತ್ರದ ಮೊರೆ ಹೋಗಿದ್ದು ನೊಂದು ದೂರು ನೀಡಿದ್ದರು. ದೂರಿಗೆ ದೈವ ಪ್ರತಿಕ್ರಿಯೆ ನೀಡಿದ್ದು, ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ‌ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ದಿ ಕಲಿಸುತ್ತೇನೆ ಎಂದು ಎಚ್ಚರಿಕೆ ನೀಡಿತ್ತು.

image of daivaradhane (to left) and image of Kantara movie (to right)
Kantara: ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನೋಡ್ಕೊತೀನಿ; ಹಣವೆಲ್ಲ‌ ಆಸ್ಪತ್ರೆ ಸೇರುವಂತೆ ಮಾಡ್ತೀನಿ; ಅನುಕರಣೆಗೆ ಆಕ್ರೋಶಗೊಂಡ ದೈವದ ಎಚ್ಚರಿಕೆ!

ಬಜಪೆಯ ಪೆರಾರದ ಪಿಲ್ಚಂಡಿ ದೈವವು 'ಹುಚ್ಚು ಕಟ್ಟಿದವರನ್ನ ಹುಚ್ಚು ಹಿಡಿಸುತ್ತೇನೆ' ಮತ್ತು 'ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನು ಆಸ್ಪತ್ರೆಗೆ ಸುರಿಸುತ್ತೇನೆ' ಎಂದು ನುಡಿದಿದ್ದು, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವರು ದೈವದ ನುಡಿ ಬಗ್ಗೆಯೇ ಅಪಹಾಸ್ಯ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದ ಡೈಲಾಗ್‌ಗಳನ್ನು ಬಳಸಿಕೊಂಡು ಇದನ್ನು 'ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ?' ಎಂದು ಪ್ರಶ್ನಿಸುವ ಮೂಲಕ ದೈವ ವಾಕ್ಯವನ್ನೇ ಅಪಹಾಸ್ಯ ಮಾಡುತ್ತಿದ್ದಾರೆ.

ಕಾಂತಾರ ಅಭಿಮಾನಿಗಳು ರಿಷಬ್ ಶೆಟ್ಟಿ ದೈವದ ಒಪ್ಪಿಗೆ ಪಡೆದೇ ಸಿನಿಮಾ ಮಾಡಿದ್ದಾರೆ ಎಂದು ವಾದಿಸುತ್ತಿದ್ದರೆ, ದೈವಾರಾಧಕರು ದೈವದ ಕುರಿತು ಅಪಹಾಸ್ಯ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯ ಕರಾವಳಿಯಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com