'ಗಂಡಾಂತರ..ಈ ವರ್ಷವೇ ಕೊನೆ, ಹಾಸನಾಂಬೆ ಸಾನಿಧ್ಯವೇ ಇರಲ್ಲ..': ಬ್ರಹ್ಮಾಂಡ ಗುರೂಜಿ 'ಭಯಾನಕ ಭವಿಷ್ಯ'

ಈ ವರ್ಷ ಹಾಸನಾಂಬೆಗೆ ಕೊನೆಯ ವರ್ಷವಾಗಿದ್ದು, ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರಲ್ಲ' ಎಂದು ಹೇಳಿದ್ದಾರೆ.
Brahmanda Guruji-Hasanamba Temple
ಬ್ರಹ್ಮಾಂಡ ಗುರೂಜಿ ಮತ್ತು ಹಾಸನಾಂಬೆ ದೇಗುಲ
Updated on

ಹಾಸನ: ಮುಂಬರುವ ದಿನಗಳಲ್ಲಿ ಹಾಸನಂಬೆ ಸಾನಿಧ್ಯವೇ ಇರುವುದಿಲ್ಲ ಎಂದು ಬ್ರಹ್ಮಾಂಡ ಗುರೂಜಿ 'ಭಯಾನಕ ಭವಿಷ್ಯ' ನುಡಿದಿದ್ದಾರೆ.

ಇಂದು ಹಾಸನದಲ್ಲಿ ಹಾಸನಾಂಬೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, 'ಈ ವರ್ಷ ಹಾಸನಾಂಬೆಗೆ ಕೊನೆಯ ವರ್ಷವಾಗಿದ್ದು, ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರಲ್ಲ' ಎಂದು ಹೇಳಿದ್ದಾರೆ.

'ಹಾಸನಾಂಬೆ ದರ್ಶನಕ್ಕೆ ಮುಂದಿನ ದಿನಗಳಲ್ಲಿ ಅವಕಾಶಗಳು ಅಡಚಣೆಯಾಗುವ ಸಾಧ್ಯತೆಯಿದೆ. 2025 ರಿಂದ 2032ರ ಅವಧಿಯಲ್ಲಿ ಸಿದ್ದೇಶ್ವರನ ಕೃಪೆಯಿಂದ ‘‘ಘಟಪ್ರಭ ಪರಿವರ್ತನೆ’’ ಆಗಲಿದೆ. ಈ ಸಮಯದಲ್ಲಿ ಏಳು ಜನ ಅಕ್ಕ-ತಂಗಿಯರು ಸೇರಲಿದ್ದಾರೆ. ಈ ಕೊನೆಯ ಅವಧಿಯಲ್ಲಿ ದರ್ಶನ ಪಡೆದವರು ಸಂತೋಷ ಪಡುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

'ಸಿದ್ದೇಶ್ವರನ ಕೃಪಾಶೀರ್ವಾದದಿಂದ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳು ನಡೆಯಲಿವೆ. ರೇವಣ ಸಿದ್ದೇಶ್ವರ, ಹಾಸನದ ಸಿದ್ದೇಶ್ವರ, ಜೇನುಕಲ್ ಸಿದ್ದೇಶ್ವರ ಸೇರಿದಂತೆ ವಿವಿಧ ಸಿದ್ದೇಶ್ವರರ ಶಿವನ ಶಕ್ತಿ ಒಂದು ಕಡೆ ಸೇರಲಿದೆ. ವಿಶೇಷವಾಗಿ 2025 ರಿಂದ 2032 ರ ಅವಧಿಯಲ್ಲಿ ಈ ಬದಲಾವಣೆಗಳು ಘಟಿಸಲಿವೆ. ಸಿದ್ದೇಶ್ವರ ಸಾನಿಧ್ಯ ತೆಗೆದಾಗ, ಇಲ್ಲಿ ಸೇರಿರುವ ಏಳು ಜನ ಅಕ್ಕ-ತಂಗಿಯರು ಸೇರಿ ‘‘ಘಟಪ್ರಭ ಪರಿವರ್ತನೆ’’ ಎಂಬ ದೊಡ್ಡ ಬದಲಾವಣೆ ಆಗಲಿದೆ ಎಂದರು.

Brahmanda Guruji-Hasanamba Temple
ಹಾಸನಾಂಬ ದರ್ಶನಕ್ಕೆ ಗಲಾಟೆ: VVIP ಪಾಸ್ ರದ್ದು, ಧರ್ಮ ದರ್ಶನಕ್ಕಷ್ಟೇ ಅವಕಾಶ

ಈ ವರ್ಷವೇ ಕೊನೆ. ಹಾಸನಾಂಬೆ ಸಾನಿಧ್ಯ ಇರಲ್ಲ

ಅಂತೆಯೇ, 'ಈ ಜಗತ್ಪ್ರಸಿದ್ದ ಹಾಸನಾಂಬೆಯ ವೈಶಿಷ್ಟ್ಯತೆಯನ್ನು ಈ ಕೊನೆಯ ಅವಧಿಯಲ್ಲಿ ನಾವು ದರ್ಶನ ಮಾಡಿದೆವಲ್ಲ ಎಂದು ಸಂತೋಷ ಪಡುತ್ತೇವೆ. ಮುಂದಿನ ಅವಕಾಶಗಳು ನಮಗಲ್ಲ. ಯಾವ ಜನರಿಗೂ ಹಾಸನಾಂಬೆ ದರ್ಶನ ಆಗುವ ಅವಕಾಶಗಳು ಕಡಿಮೆ, ಅಡಚಣೆಗಳು ಎಷ್ಟು ಬರುತ್ತವೆ ಎಂಬುದನ್ನು ನೀವೇ ಮುಂದೆ ನೋಡುತ್ತೀರಿ' ಎಂದು ಬ್ರಹ್ಮಾಂಡ ಗುರೂಜಿ ಹೇಳಿದರು.

ಮಹಿಳೆಯರು ಖರ್ಚು ಕಡಿಮೆ ಮಾಡಿ, ಜಗತ್ತಿಗೆ ಮತ್ತೊಂದು ಗಂಡಾಂತರ ಕಾದಿದೆ

ಇದೇ ವೇಳೆ ಮಹಿಳೆಯರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ ಬ್ರಹ್ಮಾಂಡ ಗುರೂಜಿ, ಜಗತ್ತಿಗೆ ಮತ್ತೊಂದು ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದರು. 'ಈ ವರ್ಷದಿಂದ ಮಹಿಳೆಯರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದರು. ಅಲ್ಲದೆ ಕೊನೆಯದಾಗಿ ಎಲ್ಲರಿಗೂ ಹಾಸನಾಂಬೆ ಆಯುರಾರೋಗ್ಯ, ಐಶ್ವರ್ಯವನ್ನು ನೀಡಿ ಕಾಪಾಡಲಿ ಎಂದು ಹಾರೈಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com