ನೀರಿನ ಟಬ್'ಗೆ ಬಿದ್ದು 11 ತಿಂಗಳ ಮಗು ದುರಂತ ಸಾವು: ಚನ್ನಪಟ್ಟಣದಲ್ಲೊಂದು ಮನಕಲಕುವ ಘಟನೆ

ಮುಸ್ಕಾನ್ ಪತಿಗಾಗಿ ನೀರು ತರಲು ಹೋಗಿ ಬರುವಷ್ಟರಲ್ಲಿ ಮಗು ನೀರು ತುಂಬಿದ್ದ ಟಬ್ ಒಳಗೆ ಬಿದ್ದಿದೆ. ಟಬ್​ಗೆ ಬಿದ್ದ ತಕ್ಷಣವೇ ಮಗುವಿಗೆ ಪ್ರಜ್ಞೆ ಕಳೆದುಕೊಂಡಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ನೀರಿನ ಟಬ್'ಗೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿರುವ ಘಟನೆಯೊಂದು ಚನ್ನಪಟ್ಟಣ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಪುರದಲ್ಲಿ ಸೋಮವಾರ ನಡೆದಿದೆ.

ಶಂಷಾದ್ ಪಠಾಣ್ ಮತ್ತು ಮುಸ್ಕಾನ್ ದಂಪತಿಗಳ ನಾಲ್ಕನೇ ಪುತ್ರಿ ಖುಷಿ ಮೃತ ದುರ್ದೈವಿ. ಮನೆ ಒರೆಸುವ ಸಲುವಾಗಿ ಮುಸ್ಕಾನ್ ಅವರು ಟಬ್​ಗೆ ನೀರನ್ನು ತುಂಬಿಸಿ ಇಟ್ಟಿದ್ದಾರೆ. ಈ ನಡುವೆ ಮಗು ಅಲ್ಲೇ ಆಟವಾಡಿಕೊಂಡಿತ್ತು.

ಚನ್ನಪಟ್ಟಣದ ಖಾಸಗಿ ಹೋಟಲ್ ವೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಮಗುವಿನ ತಂದೆ ಶಂಷಾದ್ ಕೆಲಸ ಮುಗಿಸುಕೊಂಡು ಮನೆಗೆ ಬಂದಿದ್ದಾರೆ. ತೀವ್ರ ಬಾಯಾರಿಕೆಯಿಂದ ಹೆಂಡತಿ ಬಳಿ ಕುಡಿಯಲು ನೀರು ಕೇಳಿದ್ದಾರೆ.

ಮುಸ್ಕಾನ್ ಪತಿಗಾಗಿ ನೀರು ತರಲು ಹೋಗಿ ಬರುವಷ್ಟರಲ್ಲಿ ಮಗು ನೀರು ತುಂಬಿದ್ದ ಟಬ್ ಒಳಗೆ ಬಿದ್ದಿದೆ. ಟಬ್​ಗೆ ಬಿದ್ದ ತಕ್ಷಣವೇ ಮಗುವಿಗೆ ಪ್ರಜ್ಞೆ ಕಳೆದುಕೊಂಡಿದೆ. ಇದರಿಂದ ಭಯಗೊಂಡ ಪೋಷಕರು ಕೂಡಲೇ ಹತ್ತಿರದ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲೇ ಖುಷಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಘಟನೆ ಸಂಬಂಧ ಚನ್ನಪಟ್ಟಣದ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

File photo
ಹೊನ್ನಾವರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ದಂಪತಿ ದಾರುಣ ಸಾವು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com