
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬುಧವಾರ 2.9 ತೀವ್ರತೆಯ ಭೂಕಂಪ ದಾಖಲಾಗಿದೆ. ಕಡಿಮೆ ತೀವ್ರತೆ ಇರುವುದರಿಂದ ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಬೆಳಿಗ್ಗೆ 07.43ಕ್ಕೆ ಭೂಕಂಪ ಸಂಭವಿಸಿದ್ದು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಯರನಾಳ್ ಗ್ರಾಮ ಪಂಚಾಯಿತಿಯ ಹತ್ತರ್ಕಿಹಾಳ್ ಗ್ರಾಮದ ವಾಯುವ್ಯಕ್ಕೆ 2.5 ಕಿ.ಮೀ ದೂರದಲ್ಲಿ ಮತ್ತು 05 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ.
'ಭೂಕಂಪದ ತೀವ್ರತೆ ಕಡಿಮೆಯಾಗಿದ್ದು, ಭೂಕಂಪನದ ಕೇಂದ್ರಬಿಂದುದಿಂದ 50-60 ಕಿ.ಮೀ. ದೂರದವರೆಗೆ ಕಂಪನದ ಅನುಭವ ಆಗಿರಬಹುದು ಎಂದು ಅದು ಹೇಳಿದೆ.
ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಏಕೆಂದರೆ, ತೀವ್ರತೆ ಕಡಿಮೆ ಇರುತ್ತದೆ. ಆದರೆ, ಭೂಮಿ ಕಂಪಿಸಿದ ಅನುಭವವಾಗಬಹುದು. ಭೂಕಂಪದ ಕೇಂದ್ರಬಿಂದುವು ಭೂಕಂಪನ ವಲಯ III ರಲ್ಲಿ ಬರುತ್ತದೆ ಮತ್ತು ಟೆಕ್ಟೋನಿಕ್ ನಕ್ಷೆಯ ಪ್ರಕಾರ, ಈ ಪ್ರದೇಶವು ಯಾವುದೇ ರಚನಾತ್ಮಕ ಸ್ಥಗಿತಗಳಿಂದ ಮುಕ್ತವಾಗಿದೆ ಎಂದು ಅದು ಹೇಳಿದೆ.
Advertisement