ದೀಪಾವಳಿ ಹಬ್ಬಕ್ಕೆ ವರುಣನ ಸಿಂಚನ: ಮಳೆ-ಚಳಿಯ ಜುಗಲ್ಬಂದಿ

ದೀಪಾವಳಿ ಹಬ್ಬದ ಆಚರಣೆ ಮಧ್ಯೆ ಬೆಂಗಳೂರಿನ ಜನತೆಗೆ ಇಂದು ಬೆಳ್ಳಂಬೆಳಗ್ಗೆಯೇ ವರುಣನ ದರ್ಶನವಾಗಿದೆ.
Rain
ಮಳೆ
Updated on: 

ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆ ಮಧ್ಯೆ ಬೆಂಗಳೂರಿನ ಜನತೆಗೆ ಇಂದು ಬೆಳ್ಳಂಬೆಳಗ್ಗೆಯೇ ವರುಣನ ದರ್ಶನವಾಗಿದೆ. ಬೆಂಗಳೂರು ನಗರದ ಬಹುತೇಕ ಕಡೆ ಶೀತ ಗಾಳಿಯೊಂದಿಗೆ ತುಂತುರು ಮಳೆ ಸುರಿದಿದೆ. ಚುಮುಚುಮು ಚಳಿ ಮಧ್ಯೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಸದ್ಯ ಕೊಂಚ ವಿಶ್ರಾಂತಿ ಕಂಡು ಮೋಡ ಕವಿದ ವಾತಾವರಣವಿದೆ.

ದೀಪಾವಳಿಗೆ ಮಳೆಯ ಸಿಂಚನ

ದೀಪಾವಳಿ ಹಬ್ಬದ ಆಚರಣೆಯಲ್ಲಿರುವವರಿಗೆ ವರುಣ ತಂಪೆರಿದಿದ್ದಾನೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಬೆಂಗಳೂರು ಜನತೆ ಹೊರಗೆ ಹೋಗುವಾಗ ಕೊಡೆ, ರೈನ್ ಕೋಟ್ ತೆಗೆದುಕೊಂಡು ಹೋಗುವುದು ಒಳ್ಳೆಯದು.

Rain
Karnataka Weather: ಬೆಂಗಳೂರಿನಲ್ಲಿ ಇಂದು ವರ್ಷಧಾರೆ; ಅಕ್ಟೋಬರ್ 29ರವರೆಗೆ ಮಳೆ ಸೂಚನೆ; 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com