

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್‌ಸಿ ಮಹದೇವಪ್ಪ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ನಡುವೆ ಭಾರೀ ಜಟಾಪಟಿ ನಡೆದಿರುವುದಾಗಿ ವರದಿಯಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ ಟಿಎಸ್ಪಿ ಅನುದಾನದ ಬಗ್ಗೆ ನಡೆಯುತ್ತಿದ್ದ ಚರ್ಚೆ ವೇಳೆ ಮಾತಿನ ಸಮರ ನಡೆದಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಕೊಳವೆಬಾವಿಗಳನ್ನು ಕೊರೆಯಲು ಪಂಪ್ ಸೆಟ್‌ಗಳನ್ನು ಸರಬರಾಜು ಮಾಡುವ ಯೋಜನೆ ಬಗ್ಗೆ ಚರ್ಚಿಸುವಾಗ ಉಭಯ ಸಚಿವರ ನಡುವೆ ವಾಕ್ಸಮರ ನಡೆದಿದೆ.
ಸಭೆಯಲ್ಲಿ ಹೆಚ್‌ಸಿ ಮಹದೇವಪ್ಪ ಏರುಧ್ವನಿಯಲ್ಲೇ ಕೂಗಾಡಿದ್ದು, ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ವೆಲ್ ಹಾಕಲಾಗಿದೆ. ಆದರೆ ಇಲ್ಲಿಯವರೆಗೆ ಪವರ್ ಕನೆಕ್ಶನ್ ಕೊಟ್ಟಿಲ್ಲ. ಬಡವರಿಗೆ ಕೊರೆದಿರುವ ಬೋರ್ ವೆಲ್ ಅದು. ಪವರ್ ಕೊಡದಿದ್ರೆ ಅವರು ನೀರು ಎತ್ತೋದು ಹೇಗೆ? ಅಂತ ಇಂಧನ ಸಚಿವರ ಜಾರ್ಜ್ ವಿರುದ್ಧ ಕಿಡಿಕಾರಿದ್ದಾರೆ.
ಮತ್ತೊಂದೆಡೆ ಬೋರ್‌ವೆಲ್ ಕರೆಂಟ್ ಸಂಪರ್ಕ ವಿಚಾರವಾಗಿ ಸಚಿವರ ನಡುವಿನ ಜಟಾಪಟಿ ವಿಚಾರವನ್ನು ಸಚಿವ ಹೆಚ್‌ಕೆ ಪಾಟೀಲ್ ತಳ್ಳಿಹಾಕಿದ್ದಾರೆ. ಸೌಹಾರ್ದಯುತ ಮಾತುಕತೆ ಆಗಿದೆ. ನೀವು ಕೇಳಿದ ರೀತಿಯಲ್ಲಿ ಯಾವುದೇ ಮಾತುಕತೆ ಆಗಿಲ್ಲ, ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದಿದ್ದಾರೆ.
Advertisement