
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ರಾಜಾಜಿನಗರದ 4ನೇ ಬ್ಲಾಕ್ನಲ್ಲಿ ಎರಡು ಮನೆಗಳ ಮೇಲೆ ಮರ ಬಿದ್ದಿದೆ. ಚಂದ್ರಮ್ಮ, ಪೀಟರ್ ಎಂಬುವರ ಮನೆಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಪ್ರಾಣಹಾನಿ ಉಂಟಾಗಿಲ್ಲ.
ತೀವ್ರ ಮಳೆ ಗಾಳಿಗೆ ಮರ ಬಿದ್ದು 5 ಕಾರು, ಟಾಟಾ ಏಸ್ ವಾಹನ, 3-4 ಬೈಕ್ಗಳು ಜಖಂಗೊಂಡಿವೆ. ಮನೆಗಳ ಮೇಲೆ ಮರ ಬಿದ್ದ ಪರಿಣಾಮ 2 ಕುಟುಂಬಗಳ ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಉಂಟಾಗಿದೆ.
ರಾತ್ರಿ ಸುಮಾರು 2 ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದೆ. ಕೆಲವೆಡೆ ಬೃಹತ್ ಮರಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಅಲ್ಲಲ್ಲಿ ನಿಧಾನಗತಿಯ ಸಂಚಾರವಾಗಿದೆ.
Advertisement