ಮಂಗಳೂರು: ಸಾಮರಸ್ಯ ಉತ್ತೇಜಿಸಲು 'ಮಸೀದಿ ದರ್ಶನ'; ಎಲ್ಲರಿಗೂ ಮುಕ್ತ ಪ್ರವೇಶ

ನಿನ್ನೆ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ನಡೆದ “ಸಾರ್ವಜನಿಕ ಮಸೀದಿ ದರ್ಶನ” ಕಾರ್ಯಕ್ರಮವು ಸರ್ವಧರ್ಮೀಯರನ್ನು ಒಟ್ಟುಗೂಡಿಸಿ ಗಮನ ಸೆಳೆಯಿತು.
Kudroli Jamia Masjid
ಕುದ್ರೋಳಿ ಜಾಮಿಯಾ ಮಸೀದಿ
Updated on

ಮಂಗಳೂರು: ಸದಾ ಕೋಮು ಗಲಭೆಗಳಿಂದ ಸುದ್ದಿಯಾಗುವ ದಕ್ಷಿಣ ಕನ್ನಡ ಜಿಲ್ಲೆಯ ಕುದ್ರೋಳಿ ಜಾಮಿಯಾ ಮಸೀದಿಯು ಸರ್ವಧರ್ಮ ಸಾಮರಸ್ಯವನ್ನು ಉತ್ತೇಜಿಸುವ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಭಾನುವಾರ ವಿಭಿನ್ನ ಕಾರ್ಯಕ್ರಮವೊಂದನ್ನು ನಡೆಸುವ ಮೂಲಕ ಗಮನ ಸೆಳೆಯಿತು.

ನಿನ್ನೆ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ನಡೆದ “ಸಾರ್ವಜನಿಕ ಮಸೀದಿ ದರ್ಶನ” ಕಾರ್ಯಕ್ರಮವು ಸರ್ವಧರ್ಮೀಯರನ್ನು ಒಟ್ಟುಗೂಡಿಸಿ ಗಮನ ಸೆಳೆಯಿತು.

ಕುದ್ರೋಳಿ ಮಸೀದಿ ನಿರ್ವಹಣಾ ಸಮಿತಿಯು ಮುಸ್ಲಿಂ ಐಖ್ಯಾತ ವೇದಿಕೆ(MAV), ಕುದ್ರೋಳಿ ಮತ್ತು ಜಮಾತೆ-ಇ-ಇಸ್ಲಾಮಿ ಹಿಂದ್(JIH) ಸಹಯೋಗದೊಂದಿಗೆ ಮಂಗಳೂರಿನಲ್ಲಿ ಈ ವಿಶೇಷ ಕಾರ್ಯಕ್ರಮನ್ನು ಆಯೋಜಿಸಿತ್ತು. ವಿವಿಧ ಧಾರ್ಮಿಕ ಹಿನ್ನೆಲೆಯ ಮುಖಂಡರು, ಸಂದರ್ಶಕರು ಮಸೀದಿಗೆ ಭೇಟಿ ನೀಡಿದರು.

2013 ರಲ್ಲಿ ನವೀಕರಿಸಲಾದ ಶತಮಾನಗಳಷ್ಟು ಹಳೆಯದಾದ ಈ ಮಸೀದಿಗೆ ವೈವಿಧ್ಯಮಯ ಧಾರ್ಮಿಕ ಹಿನ್ನೆಲೆಯ ಪ್ರವಾಸಿಗರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಮಸೀದಿಗೆ ಬಂದ ಸರ್ವ ಧರ್ಮೀಯರನ್ನು ಖರ್ಜೂರ, ಕಲ್ಲಂಗಡಿ ರಸ, ತಿಂಡಿಗಳು, ಚಹಾ, ಊಟ, ಇಸ್ಲಾಮಿಕ್ ಸಾಹಿತ್ಯ ಮತ್ತು ಸುಗಂಧ ದ್ರವ್ಯ ಉಡುಗೊರೆಗಳನ್ನು ಒಳಗೊಂಡ ಆತಿಥ್ಯದೊಂದಿಗೆ ಸ್ವಾಗತಿಸಲಾಯಿತು.

Kudroli Jamia Masjid
ಸಾಮರಸ್ಯದ ಸಂದೇಶ ಸಾರಿದ ಗಣೇಶ: ಮುಸ್ಲಿಂ ಯುವಕರಿಂದ ಹಬ್ಬ ಆಚರಣೆ; ಮಸೀದಿಯಲ್ಲಿ ಗಣಪತಿ ಪ್ರತಿಷ್ಠಾಪನೆ

ಹಾಜರಿದ್ದವರಿಗೆ ಮಸೀದಿಯ ಆವರಣವನ್ನು, ಅದರ ಪ್ರಾರ್ಥನಾ ಪ್ರದೇಶಗಳು, ಮೇಲಿನ ಮಹಡಿಗಳು ಮತ್ತು ಪರಂಪರೆಯ ವಿಭಾಗಗಳನ್ನು ಮುಕ್ತವಾಗಿ ಅನ್ವೇಷಿಸಲು ಅವಕಾಶ ನೀಡಲಾಯಿತು. ಫೋಟೋಗಳನ್ನು ಸೆರೆಹಿಡಿಯುವುದು ಮತ್ತು ಚಿಂತನಶೀಲ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಲ್ಪಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕುರಾನ್ ಸಂದೇಶಗಳು, ಪ್ರವಾದಿಯ ಬೋಧನೆಗಳು, ವಿವಿಧ ಭಾಷೆಗಳಲ್ಲಿ ಕುರಾನ್‌ನ ಅನುವಾದಗಳು ಮತ್ತು ಮಸೀದಿಯ ಇತಿಹಾಸ ಹಾಗೂ ವಾಸ್ತುಶಿಲ್ಪವನ್ನು ಎತ್ತಿ ತೋರಿಸುವ ವಿಡಿಯೋ ಪ್ರಸ್ತುತಿ ಮಾಡಲಾಯಿತು. ಸ್ವಯಂಸೇವಕರು ಮತ್ತು ಧಾರ್ಮಿಕ ವಿದ್ವಾಂಸರು ನಮಾಜ್(ಪ್ರಾರ್ಥನೆ), ಅಜಾನ್(ಪ್ರಾರ್ಥನೆಗೆ ಕರೆ), ಮಸೀದಿ ಶಿಷ್ಟಾಚಾರ ಮತ್ತು ವಿವಿಧ ಜಮಾಅತ್‌ಗಳ(ಸಭೆಗಳು) ಪಾತ್ರಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದರು.

ಮುಕ್ತತೆ, ಶಿಕ್ಷಣ ಮತ್ತು ಪರಸ್ಪರ ಗೌರವದ ಮೂಲಕ ಸಮುದಾಯಗಳ ನಡುವೆ ಸೇತುವೆಗಳನ್ನು ನಿರ್ಮಿಸುವತ್ತ ಒಂದು ಪ್ರಬಲ ಹೆಜ್ಜೆಯಾಗಿ ಈ ಕಾರ್ಯಕ್ರಮ ನೆರವೇರಿದೆ ಎಂದು ಸಂದರ್ಶಕರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com