
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಐದು ಹೊಸ ಮಹಾನಗರ ಪಾಲಿಕೆಗಳಿಗೆ ವಾರ್ಡ್ ವಿಂಗಡನೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಸರ್ಕಾರ ಐದು ಹೊಸ ಮಹಾನಗರ ಪಾಲಿಕೆಗಳಿಗೆ ಬರೋಬ್ಬರಿ 368 ವಾರ್ಡ್ ಗಳನ್ನು ರಚನೆ ಮಾಡಿದೆ. ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್ ಗಳಿದ್ದವು. ಈಗ ವಾರ್ಡ್ ಗಳ ಸಂಖ್ಯೆಯನ್ನು ಹತ್ತಿರ ಹತ್ತಿರ ಎರಡು ಪಟ್ಟು ಹೆಚ್ಚಿಸಲಾಗಿದೆ.
ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 111 ವಾರ್ಡ್ ರಚನೆ ಮಾಡಲಾಗಿದೆ. ಇದು ಅತಿ ಹೆಚ್ಚು ವಾರ್ಡ್ ಹೊಂದಿರುವ ದೊಡ್ಡ ಪಾಲಿಕೆಯಾಗಲಿದೆ.
ಇನ್ನೂ ಬೆಂಗಳೂರು ಪೂರ್ವ ಪಾಲಿಕೆಯು 50 ವಾರ್ಡ್ ಹೊಂದಿದ್ದು, ಇದು ಅತಿ ಕಡಿಮೆ ವಾರ್ಡ್ ಹೊಂದಿರುವ ಪಾಲಿಕೆಯಾಗಲಿದೆ.
ಬೆಂಗಳೂರು ಕೇಂದ್ರ ಪಾಲಿಕೆಯ ವ್ಯಾಪ್ತಿಯಲ್ಲಿ 63 ವಾರ್ಡ್ ಗಳಿದ್ದರೇ, ಉತ್ತರ ಪಾಲಿಕೆಯ ವ್ಯಾಪ್ತಿಯಲ್ಲಿ 72 ವಾರ್ಡ್ ಗಳು ಮತ್ತು ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 72 ವಾರ್ಡ್ ಗಳನ್ನು ರಚನೆ ಮಾಡಲಾಗಿದೆ.
ರಾಜ್ಯ ಸರ್ಕಾರ ಇಂದು ಐದು ಹೊಸ ಮಹಾನಗರ ಪಾಲಿಕೆಗಳ ಕರಡು ವಾಡ್೯ ವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗದಿ ಮಾಡಿದೆ. 15-10-2025 ರಂದು ಅಪರಾಹ್ನ 5-00 ಗಂಟೆಯ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ನಿಗದಿತ ಅವಧಿಯಲ್ಲಿ ಸ್ವೀಕೃತಗೊಂಡ ಆಕ್ಷೇಪಣೆ / ಸಲಹೆಗಳನ್ನು ಪರಿಶೀಲಿಸಿ ನಗರಪಾಲಿಕೆಗಳ ವಾಡ್೯ ವಾರು ಕ್ಷೇತ್ರ ಪುನರ್ ವಿಂಗಡನೆಯನ್ನು ಅಂತಿಮಗೊಳಿಸಲಾಗುವುದು ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Advertisement