ಬಾಗಲಕೋಟೆ ಉಪ ಚುನಾವಣೆ: ಈವರೆಗೂ ಶೇ. 43.69ರಷ್ಟು ಮತದಾನ

ಭಾರತೀಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮಧ್ಯಾಹ್ನ 1 ಗಂಟೆಯವರೆಗೆ ಒಟ್ಟು ಶೇ.43.69ರಷ್ಟು ಮತದಾನ ದಾಖಲಾಗಿದೆ.
Women standing in queue to cast their vote in Bagalkot on Thursday.
ಬಾಗಲಕೋಟೆಯಲ್ಲಿ ಮತ ಚಲಾಯಿಸಲು ಸರದಿಯಲ್ಲಿ ನಿಂತ ಮಹಿಳೆಯರು.
Updated on

ಬಾಗಲಕೋಟೆ: ಮತದಾರರ ಹೆಸರುಗಳ ಕುರಿತು ಸಣ್ಣಪುಟ್ಟ ಗೊಂದಲಗಳು ಮತ್ತು ಕೆಲವು ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವ ಘಟನೆಗಳನ್ನು ಹೊರತುಪಡಿಸಿದರೆ ಬಾಗಲಕೋಟೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯುತ್ತಿದ್ದು, ಈ ವರೆಗೂ 43.69 ರಷ್ಟು ಮತದಾನವಾಗಿದೆ.

ಭಾರತೀಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮಧ್ಯಾಹ್ನ 1 ಗಂಟೆಯವರೆಗೆ ಒಟ್ಟು ಶೇ.43.69ರಷ್ಟು ಮತದಾನ ದಾಖಲಾಗಿದೆ. ಒಂದು ಘಟನೆಯಲ್ಲಿ ಬಾಗಲಕೋಟೆಯ ಮತಗಟ್ಟೆಯೊಂದಕ್ಕೆ ಬಂದಿರುವ ವೃದ್ಧ ವ್ಯಕ್ತಿಯೊಬ್ಬ ತಾನು ಮತ ಚಲಾಯಿಸಿದ್ದೇನೆಂದು ನಮೂದಿಸಲಾಗಿದೆ ಎಂದು ತಿಳಿಸಿದ್ದು, ಇದರಿಂದ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲವುಂಟಾಯಿತು.

ಚುನಾವಣಾ ಪಟ್ಟಿ ಪರಿಶೀಲನೆ ಮಾಡಿದ ಬಳಿಕ, ಅವರ ಪುತ್ರ ಮೊದಲು ಬಂದಿದ್ದು, ಹೆಸರನ್ನು ತಪ್ಪಾಗಿ ಗುರುತಿಸಲಾಗಿದೆ ಎಂದು ಸ್ಪಷ್ಟಪಡಿಸಲಾಯಿತು. ನಂತರ ವ್ಯಕ್ತಿಗೆ ಮತಹಕ್ಕು ಚಲಾಯಿಸುವ ಅವಕಾಶ ನೀಡಲಾಯಿತು.

ಅಮೀನಗಡದ ಒಂದು ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ವೈದ್ಯಕೀಯ ಪರಿಶೀಲನೆಗೆ ಕಳುಹಿಸಲಾಯಿತು.

ಘಟನೆ ವೇಳೆ ಮತಗಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲದಿರುವುದಕ್ಕೆ ಜಿಲ್ಲಾಡಳಿತ ಮಂಡಳಿ ವಿರುದ್ಧ ಕೆಲವರು ಬೇಸರ ವ್ಯಕ್ತಪಡಿಸಿದರು.

Women standing in queue to cast their vote in Bagalkot on Thursday.
ಬಾಗಲಕೋಟೆ ಉಪ ಚುನಾವಣೆ: ಅನುಭವಿ v/s ಅನನುಭವಿ; ಮತದಾರ ಪ್ರಭುವಿನ ಒಲವು ಅನುಕಂಪಕ್ಕೋ? ಬಿಜೆಪಿಯ ಹಿಂದುತ್ವದ ಪರವೋ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com