Video: ಹಾಸನದಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಘಟನೆ; ಪತಿ, ಮಗು ತೊರೆದು ಕಾರಿನಲ್ಲೇ ಪ್ರಿಯಕರನ ಜತೆ ಮಹಿಳೆ ಮದುವೆ!

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಎಂಬ ಮಹಿಳೆ 2017ರಲ್ಲಿ ಹಾಸನ ತಾಲೂಕಿನ ಮುಕಂದರೂ ಗ್ರಾಮದ ಪ್ರಕಾಶ್ ಎಂಬುವವರೊಂದಿಗೆ ಮದುವೆಯಾಗಿದ್ದರು.
Hassan: Woman married with lover in car, Video goes viral
ಕಾರಿನಲ್ಲೇ ಪ್ರಿಯಕರನ ಜತೆ ಮಹಿಳೆ ಮದುವೆ
Updated on

ಹಾಸನ: ಎಂಟು ವರ್ಷಗಳ ಕಾಲ ಸಂಸಾರ ಮಾಡಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ತೊರೆದು ತನ್ನ ಪ್ರಿಯಕರನ ಜೊತೆ ಕಾರಿನಲ್ಲೇ ಮದೆಯಾಗಿರುವ ಸಿನಿಮೀಯ ಶೈಲಿಯ ವಿಚಿತ್ರ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಎಂಬ ಮಹಿಳೆ 2017ರಲ್ಲಿ ಹಾಸನ ತಾಲೂಕಿನ ಮುಕಂದರೂ ಗ್ರಾಮದ ಪ್ರಕಾಶ್ ಎಂಬುವವರೊಂದಿಗೆ ಮದುವೆಯಾಗಿದ್ದರು. ಈ ದಂಪತಿಗೆ ಏಳು ವರ್ಷದ ಮಗನಿದ್ದಾನೆ.

ಹರ್ಷಿತಾ ಈ ಹಿಂದೆ ಒಬ್ಬ ಪರಪುರುಷನೊಂದಿಗೆ ಸಂಬಂಧದ ಹಿನ್ನೆಲೆಯಲ್ಲಿ ಒಮ್ಮೆ ಮನೆ ಬಿಟ್ಟು ಹೋಗಿದ್ದರು. ಆಗ ಪತಿ ಪ್ರಕಾಶ್ ರಾಜಿ ಪಂಚಾಯಿತಿ ನಡೆಸಿ ಆಕೆಯನ್ನು ಮತ್ತೆ ಮನೆಗೆ ಕರೆತಂದಿದ್ದರು. ಆದರೆ, ಇತ್ತೀಚೆಗೆ 'ಆರೋಗ್ಯ ಸರಿಯಿಲ್ಲ ಎಂದು ಆಸ್ಪತ್ರೆಗೆ ಹೋಗಿ ಬರುತ್ತೇನೆ' ಎಂದು ಹೇಳಿ ಹೋದವರು ಮರಳಿ ಬಂದಿರಲಿಲ್ಲ.

Hassan: Woman married with lover in car, Video goes viral
ದೆಹಲಿ: ಲಿವ್-ಇನ್ ಪಾರ್ಟನರ್ ಕೊಂದು, ಕಾರಿನಲ್ಲೇ ಶವದೊಂದಿಗೆ ಮಲಗಿದ ವ್ಯಕ್ತಿ!

ಪತಿ ಹುಡುಕಾಟ ನಡೆಸಿದಾಗ ಆಕೆ ತನ್ನ ಪ್ರಿಯಕರನ ಜೊತೆ ಕಾರಿನಲ್ಲಿ ಓಡಿಹೋಗಿರುವುದು ಬೆಳಕಿಗೆ ಬಂದಿದೆ. ಅಚ್ಚರಿಯೆಂದರೆ, ಪ್ರಿಯಕರನ ಜೊತೆ ಕಾರಿನಲ್ಲೇ ಈಕೆ ಮದುವೆಯಾಗಿದ್ದಾಳೆ. ಕಾರಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಆತ ಈಕೆಗೆ ತಾಳಿ ಕಟ್ಟಿ, ಕಾಲುಂಗರ ತೊಡಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತ್ನಿಯ ಈ ದ್ರೋಹದಿಂದ ಕಂಗೆಟ್ಟ ಪ್ರಕಾಶ್ ಅವರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಟ್ರ್ಯಾಕಿಂಗ್ ಮೂಲಕ ಮಹಿಳೆಯನ್ನು ಪತ್ತೆಹಚ್ಚಿದ್ದು, ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಪತಿ ಪ್ರಕಾಶ್ ಜೊತೆ ಹೋಗಲು ಹರ್ಷಿತಾ ನಿರಾಕರಿಸಿದ್ದು, ತನ್ನ ಪ್ರಿಯಕರ ಸಚಿನ್ ಜತೆ ಹೋಗುವುದಾಗಿ ಹಠ ಹಿಡಿದಿದ್ದಳು. ಪೊಲೀಸರು ಮಾತುಕತೆ ನಡೆಸಿ ಹರ್ಷಿತಾಳನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com