

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಲ್ಲಿ 101 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೈಕೋರ್ಟ್ ನಿಂದ 2026 ರ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದ್ದು, ಗ್ರೂಪ್-ಡಿ ಉದ್ಯೋಗಗಳು ಭರ್ತಿಯಾಗಲಿವೆ.
ಉದ್ಯೋಗಗಳ ವಿವರ:
ಪಿಯೂನ್/ ವಾಚ್‌ಮನ್/ ಸ್ವೀಪರ್ ಸೇರಿ 90ಕ್ಕೂ ಹೆಚ್ಚು ಉದ್ಯೋಗಗಳಿವೆ. ಇನ್ನು ಲಿಫ್ಟ್ ಅಟೆಂಡರ್- 5, ಅಸಿಸ್ಟಂಟ್ ಬೈಂಡರ್– 1, ಟೈಲರ್ – 1, ಧೋಬಿ ಸೇರಿ ಒಟ್ಟು 101 ಹುದ್ದೆಗಳು ಖಾಲಿ ಇದ್ದು, ರಾಜ್ಯದ ವಿವಿಧ ನ್ಯಾಯಾಂಗ ಕಚೇರಿಗಳಲ್ಲಿ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ವಿದ್ಯಾಭ್ಯಾಸ ಮಾಡಿರಬೇಕಿದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.19,900 ರಿಂದ ರೂ.69,100 ವರೆಗೆ ನಿಗದಿಪಡಿಸಲಾಗಿದೆ. ವೇತನದ ಮೊತ್ತ ಶ್ರೇಣಿಯ ಪ್ರಕಾರ ಬದಲಾಗಲಿದೆ.
ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 40 ವರ್ಷದೊಳಗಿರಬೇಕು. ನಿಯಮಾನುಸಾರ SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಸಾಮಾನ್ಯ ಹಾಗೂ OBC ಅಭ್ಯರ್ಥಿಗಳಿಗೆ ₹200 ರೂ.,ಗಳಿದ್ದು, SC/ST / ವರ್ಗ-1ರ ಅಭ್ಯರ್ಥಿಗಳಿಗೆ ₹100 ರೂ.,ಗಳ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು ಆನ್‌ಲೈನ್ ಮೂಲಕವೇ ಪಾವತಿಸಬೇಕಾಗಿದೆ.
ಅಭ್ಯರ್ಥಿಗಳು https://judiciary.karnataka.gov.in/recruitment/hck/gdl/home.php ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಎದುರಿಸಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಂದರ್ಶನ ಎದುರಿಸಬೇಕಾಗುತ್ತದೆ. ಅಂತಿಮವಾಗಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತೆಗೆದುಕೊಂಡ ಅಂಕಗಳ ಆಧಾರಿತವಾಗಿ ನೇಮಕಾತಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏ.22ರಿಂದಲೇ ಪ್ರಾರಂಭವಾಗಿದ್ದು, ಮೇ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 10ನೇ ತರಗತಿ ಅಂಕಪಟ್ಟಿ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ), ಆದಾಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿರಬೇಕಾದ ಪ್ರಾಥಮಿಕ ದಾಖಲೆಗಳಾಗಿವೆ.
Advertisement