ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ: ಅಪಮೃತ್ಯು ಹೆಚ್ಚಳ ಎಲ್ಲವೂ ಅತಂತ್ರ; ಮುಂದೆ ಕಾದಿದೆ ಘನ ಘೋರ ವಿಪತ್ತು; ಕೋಡಿ ಶ್ರೀ

ತಮ್ಮ ನಿಖರ ಭವಿಷ್ಯವಾಣಿಗಳಿಗೆ ಹೆಸರಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಇದೀಗ ದೇಶದ ಭವಿಷ್ಯದ ಕುರಿತು ಭಯಾನಕ ಮುನ್ಸೂಚನೆ ನೀಡಿದ್ದಾರೆ.
Kodi mutt swamiji
ಕೋಡಿ ಮಠದ ಸ್ವಾಮೀಜಿ
Updated on

ಮಂಡ್ಯ: ಹವಾಮಾನ ವೈಪರಿತ್ಯದಿಂದ ಪ್ರಕೃತಿಯಲ್ಲಿ ಭಾರೀ ಏರುಪೇರು ಉಂಟಾಗಲಿದ್ದು, ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಅನ್ನ-ನೀರಿಗೂ ಹಾಹಾಕಾರ ಉಂಟಾಗಲಿದೆ ಎಂದು ಕೋಡಿಮಠ ಶ್ರೀಗಳು ಭಯಾನಕ ಭವಿಷ್ಯ ನುಡಿದಿದ್ದಾರೆ.

ತಮ್ಮ ನಿಖರ ಭವಿಷ್ಯವಾಣಿಗಳಿಗೆ ಹೆಸರಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಇದೀಗ ದೇಶದ ಭವಿಷ್ಯದ ಕುರಿತು ಭಯಾನಕ ಮುನ್ಸೂಚನೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಶ್ರೀಗಳು, ಹವಾಮಾನ ವೈಪರಿತ್ಯದಿಂದ ಪ್ರಕೃತಿಯಲ್ಲಿ ಭಾರಿ ಏರುಪೇರು ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಹವಾಮಾನ ಬದಲಾವಣೆಯು ದೇಶದ ಹಲವು ಭಾಗಗಳಲ್ಲಿ ಅನ್ನ ಮತ್ತು ನೀರಿಗಾಗಿ ತೀವ್ರ ಹಾಹಾಕಾರ ಸೃಷ್ಟಿಸಲಿದ್ದು, ಅಪಮೃತ್ಯುಗಳ (ಅಕಾಲಿಕ ಮರಣ) ಸಂಖ್ಯೆ ಹೆಚ್ಚಾಗಲಿದೆ ಎಂಬ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.

ಹವಾಮಾನ ವೈಪರಿತ್ಯ ಹಿನ್ನಲೆ ಅಪಮೃತ್ಯುವಿನ‌ ಸಂಖ್ಯೆ ಹೆಚ್ಚಳವಾಗುತ್ತೆ. ಹೀಗಾಗಿ, ಮುಂದಿನ ದಿನಗಳಲ್ಲಿ ದೇಶದ ಕೆಲ ಭಾಗಗಳಲ್ಲಿ ಅನ್ನ, ನೀರಿನ ಹಾಹಾಕಾರದ ಸಮಸ್ಯೆ ಎದುರಾಗಲಿದೆ. ಆದರೆ ಕರ್ನಾಟಕಕ್ಕೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಎಂದಿದ್ದಾರೆ.

Kodi mutt swamiji
ಯುಗಾದಿ ನಂತರ ಸಿಎಂ ಬದಲಾವಣೆಯಾಗುತ್ತದೆಯೇ, ಈ ವರ್ಷದ ಭವಿಷ್ಯ ಹೇಗಿದೆ: ಕೋಡಿ ಶ್ರೀಗಳು ಹೇಳಿದ್ದೇನು?

ಪ್ರತಿಯೊಬ್ಬ ಮನುಷ್ಯನಿಗೂ ಗುರು ಸ್ಥಾನದಲ್ಲಿದ್ದು, ಸರಿ ತಪ್ಪುಗಳನ್ನು ತಿದ್ದಿ ಬುದ್ಧಿ ಸನ್ಮಾರ್ಗದಲ್ಲಿ ನಡೆಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ದೈವಾರಾಧನೆಗಳು ಹೆಚ್ಚಿದ ಪರಿಣಾಮ ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿರಲಿದೆ. ರಾಜ್ಯದ ಜನರು ದೈವಾರಾಧನೆಯ ಮೂಲಕ ಸಮೃದ್ಧಿ ಜೀವನ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿಯೂ ಭಾರಿ ಅಪಾಯಗಳು ಸಂಭವಿಸುವ ಲಕ್ಷಣಗಳಿವೆ ಎಂದು ಹೇಳಿರುವ ಶ್ರೀಗಳು, 2026ರ ಸಾಲಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಜಗತ್ತಿನಾದ್ಯಂತ ಜಲಪ್ರಳಯ ಹಾಗೂ ಅಗ್ನಿ ಅವಘಡಗಳಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ, ಆದರೆ ಅತೃಪ್ತ ಆತ್ಮಗಳಿಗೆ ಸರಿಯಾದ ಸಂಸ್ಕಾರ ನಡೆಯದ ಕಾರಣ ಅವು ಮನುಕುಲಕ್ಕೆ ಕಂಟಕವಾಗಲಿವೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com