7000 ಕಾಲೇಜು ವಿದ್ಯಾರ್ಥಿಗಳಿಗೆ HIV- ವರದಿ ಸುಳ್ಳು: ನ್ಯಾಕೋ ಸಂಸ್ಥೆ ಮಾಹಿತಿ ಒಪ್ಪಲ್ಲ; ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿದೆ; ಯು.ಟಿ. ಖಾದರ್‌

ಕರ್ನಾಟಕದ ಹೆಚ್‌ಐವಿ ಕೇಸ್ ವಿಚಾರದಲ್ಲಿ ನ್ಯಾಕ್ ಸಂಸ್ಥೆ ನೀಡಿರುವ ಮಾಹಿತಿಯನ್ನು ನಾನು ಒಪ್ಪಲ್ಲ ಎಂದು ಖಾದರ್‌ ತಿಳಿಸಿದ್ದಾರೆ. 56 ಸಾವಿರ ಕೇಸ್ ಇವೆ ಎಂದು ಸಂಸ್ಥೆ ತಿಳಿಸಿದೆ. ಆ ವಿಚಾರಕ್ಕೆ ಸಂಬಂದಿಸಿದಂತೆ ಕ್ಲಾರಿಟಿ ನೀಡಿ ಎಂದು ಪತ್ರ ಬರೆಯಲು ಆರೋಗ್ಯ ಇಲಾಖೆ ಸಿದ್ಧವಾಗಿದೆ.
UT Khader
ಯು ಟಿ ಖಾದರ್
Updated on

ಬೆಂಗಳೂರು: ರಾಜ್ಯದಲ್ಲಿ ಸುಮಾರು 7 ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‍ಐವಿ ಸೋಂಕು ತಗುಲಿದೆ ಅನ್ನೋ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೇ ರಾಜ್ಯ ಸರ್ಕಾರ ಕಾಲೇಜುಗಳಲ್ಲಿ ಹೆಚ್‍ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ ಎಂದು ಸುದ್ದಿ ಹಬ್ಬಿತ್ತು. ಇದೀಗ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಹೆಚ್‌ಐವಿ ಕೇಸ್ ವಿಚಾರದಲ್ಲಿ ನ್ಯಾಕ್ ಸಂಸ್ಥೆ ನೀಡಿರುವ ಮಾಹಿತಿಯನ್ನು ನಾನು ಒಪ್ಪಲ್ಲ ಎಂದು ಖಾದರ್‌ ತಿಳಿಸಿದ್ದಾರೆ. 56 ಸಾವಿರ ಕೇಸ್ ಇವೆ ಎಂದು ಸಂಸ್ಥೆ ತಿಳಿಸಿದೆ. ಆ ವಿಚಾರಕ್ಕೆ ಸಂಬಂದಿಸಿದಂತೆ ಕ್ಲಾರಿಟಿ ನೀಡಿ ಎಂದು ಪತ್ರ ಬರೆಯಲು ಆರೋಗ್ಯ ಇಲಾಖೆ ಸಿದ್ಧವಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 2004 ರಿಂದ ಇಲ್ಲಿಯವರೆಗೂ 39,028 ಸೋಂಕಿತರು ರಾಜ್ಯದಲ್ಲಿದ್ದಾರೆ. 18 ರಿಂದ 35 ವರ್ಷದೊಳಗಿನವರು ಚಿಕಿತ್ಸೆ ಪಡೆಯುತ್ತಿದ್ದಾರೆ. ‌ಎರಡು ಬಗೆಯಲ್ಲಿ ಮಾತ್ರ HIV ಪರೀಕ್ಷೆ ಮಾಡಿಸಲಾಗುತ್ತಿದೆ. ಹೆರಿಗೆ ವೇಳೆ, ರಕ್ತ ನೀಡುವಾಗ ಮಾತ್ರ HIV ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ HIV ಸೋಂಕಿತರ ಪ್ರಮಾಣ ನಿಯಂತ್ರಣದಲ್ಲಿದೆ. ಕಳೆದ ಮೂರು ತಿಂಗಳಲ್ಲಿ 3091 HIV ಸೋಂಕಿತರು ಪತ್ತೆಯಾಗಿದ್ದಾರೆ. 5,53,453 ಜನರ ಪೈಕಿ 3091 ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ 2,81,742 ಗರ್ಭಿಣಿಯರನ್ನ HIV ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

UT Khader
'ಕಾಲೇಜು ವಿದ್ಯಾರ್ಥಿಗಳಿಗೆ HIV ಪರೀಕ್ಷೆ ಕಡ್ಡಾಯವಲ್ಲ': 7,000 ವಿದ್ಯಾರ್ಥಿಗಳಿಗೆ ಸೋಂಕು; ವದಂತಿಗಳನ್ನು ತಳ್ಳಿಹಾಕಿದ KSAPS!

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ರಾಜ್ಯದಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಭವಿಷ್ಯದಲ್ಲಿ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಕೇಂದ್ರದ ನ್ಯಾಕೋ ಜನಸಂಖ್ಯೆ ಆಧಾರವಾಗಿ ವಿಚಾರವನ್ನು ತಿಳಿಸಿದೆ. ಕೆಲ ಮಾಹಿತಿಗಳು ತಪ್ಪಾಗಿವೆ. ಹೆಚ್​​ಐವಿ ಪಾಸಿಟಿವ್ ಪ್ರಕರಣಗಳ ತಪ್ಪು ಮಾಹಿತಿ‌ ಇಲ್ಲ, ಆದರೆ, HIV ಪರೀಕ್ಷೆ ಕಡ್ಡಾಯವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com