

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಲವು ಹಿರಿಯ ನಾಯಕರನ್ನು ಕೈಬಿಡಲಾಗಿದೆ.
ಸಿದ್ದರಾಮಯ್ಯ ಸಂಪುಟದ ಒಟ್ಟು 12 ನಾಯಕರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಸಚಿವ ಸ್ಥಾನ ಕಳೆದುಕೊಂಡವರ ಪಟ್ಟಿಯಲ್ಲಿ ಹಿರಿಯ ನಾಯಕರು ಹಾಗೂ ಹಲವು ಪ್ರಭಾವಿ ಸಚಿವರು ಸೇರಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಂಪುಟ ಪುನಾರಚನೆಯ ಮೂಲಕ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಹಾಗೂ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಡಾ. ಹೆಚ್.ಸಿ. ಮಹದೇವಪ್ಪ
ಕೆ.ಎನ್. ರಾಜಣ್ಣ
ಶಿವಾನಂದ ಪಾಟೀಲ್
ಕೆ. ವೆಂಕಟೇಶ್
ಡಾ. ಎಂ.ಸಿ. ಸುಧಾಕರ್
ಶರಣಬಸಪ್ಪ ದರ್ಶನಾಪುರ
ಆರ್.ಬಿ. ತಿಮ್ಮಾಪುರ
ರಹೀಮ್ ಖಾನ್
ಡಿ. ಸುಧಾಕರ್
ಎನ್.ಎಸ್. ಭೋಸರಾಜು
ಲಕ್ಷ್ಮಿ ಹೆಬ್ಬಾಳ್ಕರ್
ದಿನೇಶ್ ಗುಂಡೂರಾವ್
ಸಚಿವ ಸ್ಥಾನದಿಂದ ವಂಚಿತರಾಗಿದ್ದು, ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭೂಗಿಲೇಳುವ ಮುನ್ಸೂಚನೆ ನೀಡುತ್ತಿದೆ.
ಇದೀಗ ಸಚಿವ ಸ್ಥಾನ ವಂಚಿತರಾದ ನಾಯಕರ ಮುಂದಿನ ರಾಜಕೀಯ ನಡೆ ಏನಿರಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಮತ್ತೊಂದೆಡೆ, ಹೊಸ ಸಚಿವರ ನೇಮಕದ ಮೂಲಕ ಪಕ್ಷದ ಸಂಘಟನೆ ಹಾಗೂ ಸರ್ಕಾರದ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆ ಎಂದು ಹೇಳಲಾಗುತ್ತಿದೆ.
ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರದ ಬಳಿಕ ಖಾತೆ ಹಂಚಿಕೆ ಹಾಗೂ ಸಂಪುಟದ ಪೂರ್ಣ ಚಿತ್ರಣ ಹೊರಬೀಳಲಿದ್ದು, ಸಚಿವ ಸ್ಥಾನ ಕೈತಪ್ಪಿದ ನಾಯಕರಿಗೆ ಪಕ್ಷ ಯಾವ ಜವಾಬ್ದಾರಿಗಳನ್ನು ನೀಡಲಿದೆ ಎಂಬುದೂ ಮುಂದಿನ ದಿನಗಳಲ್ಲಿ ಸ್ಪಷ್ಟವಾಗುವ ಸಾಧ್ಯತೆ ಇದೆ.