ವಿಧಾನಸೌಧದಲ್ಲಿ ಆ.15 ರಂದು ʻಫ್ರೀಡಂ ಹಬ್ಬʼದ ಸಂಭ್ರಮ: ಏನೆಲ್ಲಾ ಕಾರ್ಯಕ್ರಮ ಇದೆ..?ಇಲ್ಲಿದೆ ಕಂಪ್ಲೀಟ್ ಮಾಹಿತಿ..

ಈ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸ್ವಾತಂತ್ರ್ಯೋತ್ಸವದ ಈ ಸಂಭ್ರಮದ ಹಬ್ಬಕ್ಕೆ ಎಲ್ಲರಿಗೂ ಆತ್ಮೀಯ ಆಹ್ವಾನ ನೀಡಿದ್ದಾರೆ.
vidhana soudha
ವಿಧಾನಸೌಧ
Updated on

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಆಗಸ್ಟ್‌ 15ರಂದು ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಫ್ರೀಡಂ ಹಬ್ಬ’ ಆಯೋಜಿಸಲಾಗಿದೆ.

ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಆಹಾರ ಹಾಗೂ ವೈವಿಧ್ಯಮಯ ಪರಂಪರೆಗಳ ಸಂಗಮವಾಗಿರುವ ʻಫ್ರೀಡಂ ಹಬ್ಬʼದಲ್ಲಿ ಶಾಸನಸಭೆ ವೀಕ್ಷಣೆ ಹಾಗೂ ಅಪರೂಪದ ಸಂವಿಧಾನಾತ್ಮಕ ದಾಖಲೆಗಳ ವೀಕ್ಷಣೆಗೂ ಅವಕಾಶವಿದೆ.

ಈ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸ್ವಾತಂತ್ರ್ಯೋತ್ಸವದ ಈ ಸಂಭ್ರಮದ ಹಬ್ಬಕ್ಕೆ ಎಲ್ಲರಿಗೂ ಆತ್ಮೀಯ ಆಹ್ವಾನ ನೀಡಿದ್ದಾರೆ.

ಮಕ್ಕಳ ಮೇಳ: ಸಂವಾದಾತ್ಮಕ ಆಟಗಳು, ಕಥೆ ಹೇಳುವಿಕೆ, ಕಲೆ, ಕರಕುಶಲ ವಸ್ತುಗಳ ಮಾರಾಟ,ಸೃಜನ ಶೀಲ ಕಾರ್ಯಾಗಾರ, ಕೌಟುಂಬಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಫ್ರೀಡಂ ಸಂತೆ: ಕರಕುಶಲ ವಸ್ತುಗಳು, ಜೈವಿಕ ಉಡುಪುಗಳು, ಆಟಿಕೆಗಳು, ಜವಳಿ ಮತ್ತು ಆಹಾರ ಮಳಿಗೆಗಳು

ಫ್ರೀಡಂ ಪರೇಡ್: ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮೈಲಿಗಲ್ಲುಗಳನ್ನು ಮರುಸೃಷ್ಟಿಸುವ ವಾಕ್ ಥ್ರೂ ಮ್ಯೂಸಿಯಂ, ನಾಟಕ, ಸಾಂಸ್ಕೃತಿಕ , ಸ್ಥಳೀಯ ಸಂಪ್ರದಾಯಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಬೆಂಗಳೂರು ಕಲೆಕ್ಟಿವ್ ಗಿಗ್: ಸಂಗೀತಗಾರರು ಮತ್ತು ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಸಂಗೀತ ಕಚೇರಿ, ಸಾರ್ವಜನಿಕ ಸಾಮೂಹಿಕ ಗಾಯನ, ಸಂವಿಧಾನ ರಚನಾ ಸಭೆಯ ಗ್ಯಾಲರಿ ಹಾಗೂ ಅಪರೂಪದ ಸಂವಿಧಾನಾತ್ಮಕ ದಾಖಲೆಗಳ ವೀಕ್ಷಣೆ, ದಿನವಿಡೀ ಪ್ರಸ್ತಾವನೆಯ ಸಮೂಹ ವಾಚನದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಕಿರಿಯ ವೀಕ್ಷಕರು ಮತ್ತು ಅವರ ಕುಟುಂಬದವರು ತರಬೇತಿ ಪಡೆದ ಸ್ವಯಂ ಸೇವಕರ ನೇತೃತ್ವದಲ್ಲಿ ಶಾಸನಸಭೆಯನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com