ಕೇಸ್‌ಗಳು ಯಾರ ಮೇಲಿಲ್ಲ ಹೇಳ್ರಿ: HDK ಜಾಮೀನು ಪಡೆದುಕೊಂಡಿಲ್ಲವೇ; ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಡಿಕೆಶಿ ತಿರುಗೇಟು

ದೇಶದಲ್ಲಿ ಯಾರ ಮೇಲೆ ಕೇಸ್‌ಗಳಿಲ್ಲ? ಹೆಚ್.ಡಿ. ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿಲ್ಲವೇ? ದೇಶದಲ್ಲಿ ಎಷ್ಟು ಜನ ಸಚಿವರಾದವರು ಜಾಮೀನು ಮೇಲೆ ಇಲ್ಲ ಎಂದು ಪ್ರಶ್ನಿಸಿದರು.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ದೇಶದಲ್ಲಿ ಯಾರ ಮೇಲೆ ಕೇಸ್‌ಗಳಿಲ್ಲ ಎಂದು ಪ್ರಶ್ನಿಸುವ ಮೂಲಕ ಬಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಬೆಳವಣಿಗೆಗಳು, ನಾಯಕರ ಮೇಲಿನ ಪ್ರಕರಣಗಳು, ವಿಧಾನ ಪರಿಷತ್ ಸಭಾಪತಿ ರಾಜೀನಾಮೆ ಹಾಗೂ ಸಂಪುಟ ಪುನಾರಚನೆ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದರು

ದೇಶದಲ್ಲಿ ಯಾರ ಮೇಲೆ ಕೇಸ್‌ಗಳಿಲ್ಲ? ಹೆಚ್.ಡಿ. ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿಲ್ಲವೇ? ದೇಶದಲ್ಲಿ ಎಷ್ಟು ಜನ ಸಚಿವರಾದವರು ಜಾಮೀನು ಮೇಲೆ ಇಲ್ಲ ಎಂದು ಪ್ರಶ್ನಿಸಿದರು.

ನಾಗೇಂದ್ರ ಅವರು ಕರ್ನಾಟಕದಿಂದ ಹೊರಗೆ ಹೋಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನೇ ಇದ್ದರೂ ಅದನ್ನು ಪರಿಶೀಲಿಸುತ್ತೇವೆ. ವಿಪಕ್ಷಗಳಿಗೆ ಚರ್ಚಿಸಲು ವಿಷಯಗಳು ಬೇಕು, ಹಾಗಾಗಿ ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ ಎಂದು ತಿರುಗೇಟು ನೀಡಿದರು.

DK Shivakumar
'ನನ್ನ ಮೇಲೂ ಪ್ರಕರಣಗಳಿವೆ, ಆದರೂ ಸಿಎಂ ಆದೆ': ಸಂಪುಟಕ್ಕೆ ಬಿ. ನಾಗೇಂದ್ರ ಸೇರ್ಪಡೆ ಸಮರ್ಥಿಸಿಕೊಂಡ ಶಿವಕುಮಾರ್!

ಬಸವರಾಜ ಹೊರಟ್ಟಿ ಅವರೇ ಸ್ವತಃ ನನ್ನ ಬಳಿ ಬಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಅವರು ಗೌರವಯುತವಾಗಿ ನೀಡಿದ ರಾಜೀನಾಮೆಯನ್ನು ಒಪ್ಪಿಕೊಳ್ಳಲಾಗಿತ್ತು. ಹೊರಟ್ಟಿ ಅವರೇ ಸ್ವತಃ ಟೈಪ್ ಮಾಡಿ ರಾಜೀನಾಮೆ ಪತ್ರ ನೀಡಿದ್ದಾರೆ, ಇಲ್ಲದಿದ್ದರೆ ನಾವು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೆವು ಎಂದರು.

ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ ಎಂದು ವಿಪಕ್ಷಗಳು ರಾಜ್ಯಪಾಲರಿಗೆ ದೂರು ನೀಡಿ ಕಾನೂನು ತೊಡಕು ಸೃಷ್ಟಿಸಲು ಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಯು.ಟಿ. ಖಾದರ್ ಹಾಗೂ ನಾನು ರಾಜ್ಯಪಾಲರನ್ನು ಭೇಟಿಯಾಗಿ ಸಂಪೂರ್ಣ ವಿವರಣೆ ನೀಡಿದ್ದೇವೆ. ಬಿಜೆಪಿ ತನ್ನದೇ ಪಕ್ಷದ ಹಿರಿಯ ನಾಯಕರಿಗೆ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಹೈಕಮಾಂಡ್ ಹಾಗೂ ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಸಂಪುಟದಲ್ಲಿ ಪ್ರಸ್ತುತ ಒಂದೇ ಒಂದು ಸ್ಥಾನ ಖಾಲಿ ಇದ್ದು, ಆ ಸ್ಥಾನವನ್ನು ಮಹಿಳೆಗೆ ನೀಡಲಾಗುವುದು. ಇದಕ್ಕೆ ಯಾವುದೇ ಆತುರವಿಲ್ಲ. ತೆ ಹಂಚಿಕೆ ನಾಳೆಯೇ ಆಗಬೇಕು ಎಂದೇನೂ ಇಲ್ಲ. ಸಚಿವರು ಈಗಾಗಲೇ ವಿವಿಧ ಜಿಲ್ಲೆಗಳಿಗೆ ತೆರಳಿ ಬರ ಪರಿಸ್ಥಿತಿಯ ಪ್ರವಾಸ ಮಾಡಿ ವರದಿ ಸಲ್ಲಿಸಿದ್ದಾರೆ. ಅಗತ್ಯ ಬಿದ್ದರೆ ನಾನೊಬ್ಬನೇ ಪ್ರತಿಯೊಂದಕ್ಕೂ ಉತ್ತರ ನೀಡಲು ಸಮರ್ಥನಾಗಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com