ಕೊಡಗಿನಲ್ಲಿ ಕರುಳು ಹಿಂಡುವ ಘಟನೆ: ತಾಯಿಯ ಅಕ್ರಮ ಸಂಬಂಧಕ್ಕೆ ನಾಲ್ಕು ವರ್ಷದ ಮಗು ಬಲಿ

ಮೃತ ಮಗುವನ್ನು ಚರಣ್ ಎಂದು ಗುರುತಿಸಲಾಗಿದ್ದು, ಬಾಲಕನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರತಾಪ ಎಂಬ ವ್ಯಕ್ತಿ ಬಡಿಗೆಯಿಂದ ಮನಸೋ ಇಚ್ಛೆ ಹೊಡೆದಿದ್ದಾನೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.
Representational image
ಸಾಂದರ್ಭಿಕ ಚಿತ್ರonline desk
Updated on

ಕೊಡಗು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕದನೂರಿನ ಲೈನ್ ಮನೆಯೊಂದರಲ್ಲಿ ಕರುಳು ಹಿಂಡುವ ಅಮಾನವೀಯ ಘಟನೆ ನಡೆದಿದ್ದು, ತಾಯಿಯ ಅಕ್ರಮ ಸಂಬಂಧಕ್ಕೆ ನಾಲ್ಕು ವರ್ಷದ ಮಗುವೊಂದು ಬಲಿಯಾಗಿದೆ.

ಮೃತ ಮಗುವನ್ನು ಚರಣ್ ಎಂದು ಗುರುತಿಸಲಾಗಿದ್ದು, ಬಾಲಕನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರತಾಪ ಎಂಬ ವ್ಯಕ್ತಿ ಬಡಿಗೆಯಿಂದ ಮನಸೋ ಇಚ್ಛೆ ಹೊಡೆದಿದ್ದಾನೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಬಾಲಕನ ತಾಯಿ ಸುಚಿತ್ರಾ, ಆಕೆಯ ಸಹೋದರ ಸಂಬಂಧಿ ಅಕ್ಕನ ಗಂಡ ಪ್ರತಾಪನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕದನೂರಿನವಳಾದ ಸುಚಿತ್ರಾ ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಪಂಪನಗೌಡ ಎಂಬುವರನ್ನು ಪ್ರೀತಿಸಿ ಮದುವೆ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಹುಟ್ಟಿದ್ದರು. ಅದರಲ್ಲಿ ಕಿರಿಯ ಮಗನೇ ಚರಣ್. ಕೂಲಿ ಮಾಡಿದ್ದರೂ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಯುತಿತ್ತು.

Representational image
ಎಂಗೇಜ್ಮೆಂಟ್ ಮಾಡಿಕೊಂಡಿದ್ದ, SBI ಉದ್ಯೋಗಿಗಳಾಗಿದ್ದ ಯುವ ಜೋಡಿ ಕರ್ನಾಟಕ-ಕೇರಳದಲ್ಲಿ ಶವವಾಗಿ ಪತ್ತೆ; ಕೊಲೆಯೋ, ಆತ್ಮಹತ್ಯೆಯೋ?

ಆದರೆ ಇತ್ತಿಚೀಗೆ ಸುಚಿತ್ರಾ ತನ್ನ ಸೋದರ ಸಂಬಂಧಿ ಅಕ್ಕನ ಗಂಡ ಪ್ರತಾಪನೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡಿದ್ದಳು. ಈ ವಿಚಾರ ತಿಳಿದ ಪಂಪನಗೌಡ ಇವರ ಸಹವಾಸವೇ ಬೇಡ ಎಂದು ದೂರವಾಗುವುದಕ್ಕೆ ಶುರುಮಾಡಿದ್ದ. ಆರು ತಿಂಗಳ ಹಿಂದೆ ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಎಂದು ಬೆಂಗಳೂರಿನಿಂದ ಕೊಡಗಿಗೆ ಬಂದಿದ್ದ ಸುಚಿತ್ರಾ ವಿರಾಜಪೇಟೆಯಲ್ಲಿರುವ ತನ್ನ ಸಹೋದರ ಸಂಬಂಧಿ ಅಕ್ಕನ ಮನೆಯಲ್ಲಿಯೇ ಪರ್ಮನೆಂಟ್ ಆಗಿ ಉಳಿದಿದ್ದಳು. ಇದರಿಂದ ಬೇಸರಗೊಂಡ ಸುಚಿತ್ರಾ ಗಂಡ ಪಂಪನಗೌಡ ಬೆಂಗಳೂರು ಬಿಟ್ಟು ರಾಯಚೂರಿಗೆ ಹೋಗಿದ್ದ.

ಸುಚಿತ್ರಾ, ಆಕೆಯ ಬಾವ ಪ್ರತಾಪ್ ಹಾಗೂ ಆತನ ಪತ್ನಿ ಸೇರಿದಂತೆ ಮೂವರು ವಿರಾಜಪೇಟೆಯ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಲೈನ್ ಮನೆಯೊಂದರಲ್ಲಿ ವಾಸವಾಗಿದ್ದರು. ಮದ್ಯಕ್ಕೆ ದಾಸರಾಗಿದ್ದ ಸುಚಿತ್ರಾ ಹಾಗೂ ಪ್ರತಾಪ್ ನಡುವೆ ಇರುವ ಅಕ್ರಮ ಸಂಬಂಧದ ವಿಷಯಕ್ಕೆ ಆಗಿಂದ್ದಾಗೆ ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಇದೇ ವಿಚಾರವಾಗಿ ಗುರುವಾರವೂ ಕೂಡ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಪಾಪಿ ಪ್ರತಾಪ್ ಸುಚಿತ್ರಾಳ ಮೇಲೆ ಹಲ್ಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕೆ ಸದ್ಯ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಗಲಾಟೆ ವೇಳೆ ಜೊತೆಯಲ್ಲಿಯೇ ಇದ್ದ ನಾಲ್ಕು ವರ್ಷದ ಮಗು ಚರಣ್, ಮಗು ಎನ್ನುವುದನ್ನು ನೋಡದೆ ಬಡಿಗೆಯಿಂದ ಯದ್ವಾತದ್ವಾ ಹೊಡೆದಿದ್ದಾನೆ. ತೀವ್ರಪೆಟ್ಟು ತಿಂದ ಬಾಲಕ ನೋವು ತಾಳಲಾರದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ವಿರಾಜಪೇಟೆ ನಗರ ಠಾಣೆ ಪೊಲೀಸರು ಪಾಪಿ ಪ್ರತಾಪ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com