ಬಸ್‌ನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವೃದ್ಧನಿಗೆ ಥಳಿತ; Video Viral

ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ (KA-51-F-4452)ನಲ್ಲಿ ಈ ಘಟನೆ ನಡೆದಿದೆ.
KSRTC bus
ಕೋಲಾರದಲ್ಲಿ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಘಟನೆ
Updated on

ಕೋಲಾರ: ಬಸ್‌ನಲ್ಲಿ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನಿಗೆ ಮಹಿಳೆ ಥಳಿಸಿರುವ ಘಟನೆ ನಡೆದಿದೆ. ಬಳಿಕ ವ್ಯಕ್ತಿ ಬಸ್‌ನಿಂದ ಇಳಿದು ಪರಾರಿಯಾಗಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ (KA-51-F-4452)ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಮಹಿಳೆಯ ಕೈಯನ್ನು ಮುಟ್ಟಿದ್ದಲ್ಲದೆ, ಆಕೆಯ ಕೈಗೆ ಮುತ್ತು ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಆತನ ವರ್ತನೆಯನ್ನು ಕೆಲಕಾಲ ಸಹಿಸಿಕೊಂಡ ಮಹಿಳೆ, ಬಳಿಕ ಸಿಟ್ಟಿನಿಂದ ಎದ್ದು ಆತನಿಗೆ ಬಸ್‌ನಲ್ಲೇ ಸರಿಯಾಗಿ ಥಳಿಸಿದ್ದಾರೆ. ಮಹಿಳೆ ಥಳಿಸುತ್ತಿದ್ದ ವೇಳೆ ವ್ಯಕ್ತಿ, “ನನಗೂ ಹೆಂಡತಿ, ಮಕ್ಕಳಿದ್ದಾರೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ” ಎಂದು ಅಂಗಲಾಚಿದ್ದಾನೆ ಎನ್ನಲಾಗಿದೆ.

ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರೂ ಮಧ್ಯಪ್ರವೇಶಿಸಿ ಆ ವ್ಯಕ್ತಿಗೆ ಥಳಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ವ್ಯಕ್ತಿ ಬಳಿಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾನೆ.

ನಂತರ ಆತ ಬಸ್‌ನಿಂದ ಕೆಳಗಿಳಿದು ಪರಾರಿಯಾಗಿದ್ದಾನೆ. ಕೆಜಿಎಫ್‌ನಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಬಸ್‌ನಲ್ಲಿ ಮಹಿಳೆ ವ್ಯಕ್ತಿಗೆ ಥಳಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಪ್ರಕರಣ ದಾಖಲಾಗಿಲ್ಲ.

KSRTC bus
ಮಣಿಪಾಲದಲ್ಲಿ ಇದೆಂಥಾ ಅಸಹ್ಯ: ರಸ್ತೆಯಲ್ಲೇ ರೊಮ್ಯಾನ್ಸ್; ಉತ್ತರ ಭಾರತ ಜೋಡಿಗೆ ಕನ್ನಡದಲ್ಲೇ ಉಗಿದ ಸ್ಥಳೀಯರು, Video!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com