

ಮಣಿಪಾಲ: ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರುವುದಿಲ್ಲ ಅಂತಾರೆ. ಕೆಲವು ಪ್ರೇಮಿಗಳು ಈ ಮಾತನ್ನು ಆಗಾಗ್ಗೆ ನಿಜ ಮಾಡಿ ತೋರಿಸುತ್ತಾರೆ. ಇಂತಹದ್ದೇ ಒಂದು ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದಲ್ಲಿ ಉತ್ತರ ಭಾರತದ ಯುವ ಜೋಡಿಯೊಂದು ರಸ್ತೆಯಲ್ಲೇ ಸಾರ್ವಜನಿಕವಾಗಿ ಪರಸ್ಪರ ಕಿಸ್ ಮಾಡುವ ಮೂಲಕ ಅತ್ಯಂತ ಅಸಭ್ಯ ವರ್ತನೆ ತೋರಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಕನ್ನಡದಲ್ಲೇ ಉಗಿದಿದ್ದು, ಇದು ಪಿಡಿಎ ಅಲ್ಲ ಎಂದು ಹೇಳಿದ್ದಾರೆ.
ಸ್ಥಳೀಯರೊಬ್ಬರು ಕನ್ನಡದಲ್ಲಿ ಬೈಯುತ್ತಿದ್ದರೆ ಆ ಯುವಕ ಹಿಂದಿಯಲ್ಲಿ ಮಾತನಾಡಿ ಎಂದು ಕೇಳುತ್ತಾನೆ. ಆದರೆ ಹಿಂದಿಯಲ್ಲಿ ಮಾತನಾಡಲು ಆ ವ್ಯಕ್ತಿ ನಿರಾಕರಿಸುತ್ತಾರೆ. ಸ್ವಲ್ಪ ಸಮಯದ ಇಬ್ಬರೂ ಅಲ್ಲಿಂದ ಹೊರಟು ಹೋಗುತ್ತಾರೆ.
ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋ, ಸಭ್ಯತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳ ಕಲ್ಪನೆ ಹಾಗೂ ಸಾಮಾನ್ಯ ಸ್ಥಳಗಳಲ್ಲಿ ಪ್ರೇಮಿಗಳ ನಡವಳಿಕೆಯ ಮಿತಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Advertisement