
ಬೆಂಗಳೂರು: ಹಾಡಹಗಲೇ ಪ್ರೇಮಿಗಳಿಬ್ಬರು ಪಾರ್ಕ್ ಬೆಂಚ್ ಮೇಲೆ ಕುಳಿತು ಪರಸ್ಪರ ಚುಂಬಿಸುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರಿನ ಮಲ್ಲೇಶ್ವರಂ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪಾರ್ಕ್ ನ ಬೆಂಚ್ ಮೇಲೆ ಕುಳಿತ ಇಬ್ಬರು ಪ್ರೇಮಿಗಳು ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
@gjkannada ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು, ವೃದ್ದರು ಬರುವ ಇಂತಹ ಸ್ಥಳದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಈ ವಿಡಿಯೋಗೆ ಸುಮಾರು 997 ಮಂದಿ ಲೈಕ್ ಮಾಡಿದ್ದು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
ಕ್ಯಾಮೆರಾ ನೋಡಿಯೂ ಎಚ್ಚೆತ್ತುಕೊಳ್ಳದ ಪ್ರೇಮಿಗಳು
ಇನ್ನು ಸ್ಥಳೀಯರೊಬ್ಬರು ತಮ್ಮ ವಿಡಿಯೋ ಸೆರೆ ಹಿಡಿಯುತ್ತಿದ್ದಾರೆ ಎಂದು ನೋಡಿದರೂ ಎಚ್ಚೆತ್ತುಕೊಳ್ಳದ ಪ್ರೇಮಿಗಳು ಸ್ಥಳೀಯರಿಗೂ ಕ್ಯಾರೆ ಎನ್ನದೇ ತಮ್ಮ ಕಾರ್ಯದಲ್ಲಿ ತಾವು ತೊಡಗಿದ್ದಾರೆ.
ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಅದೇ ಪಾರ್ಕ್ ನಲ್ಲಿ ಪುಟ್ಟ ಮಕ್ಕಳು ಆಟವಾಡುತ್ತಿದ್ದಾರೆ. ಮಕ್ಕಳು ಇಂತಹವುಗಳನ್ನು ನೋಡಿದರೆ ಅವೂ ಕೂಡ ಹಾದಿ ತಪ್ಪುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
Advertisement