ಮಂಗಳೂರು-ಬೆಂಗಳೂರು ಖಾಸಗಿ ಬಸ್ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು, 20 ಮಂದಿಗೆ ಗಾಯ; Video

ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಟೋಲ್​ ಬಳಿ ಅಳವಡಿಸಿದ್ದ ಸೈನ್ ಬೋರ್ಡ್​​ಗೆ ಡಿಕ್ಕಿ ಹೊಡೆದಿದೆ.
Bus accident
ಬಸ್ ಅಪಘಾತದಲ್ಲಿ ಗಾಯಗೊಂಡವರು
Updated on: 

ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಐಷಾರಾಮಿ ಸುಗಮ ಟ್ರಾವೆಲ್ಸ್ ಬಸ್ ನಾಗಮಂಗಲದ ಲಾಂಕೋ ಟೋಲ್ ಗೇಟ್ ಸಮೀಪ ಹೆದ್ದಾರಿಯ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಬೆಂಗಳೂರಿನ ಓರ್ವ ಪ್ರಯಾಣಿಕ ಹಾಗೂ ಬಸ್ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ 20ಕ್ಕೂ ಹೆಚ್ಚು ಪ್ರಯಾಣಿಕರನ್ನು ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ಸಾವು, ಬಸ್​ನಲ್ಲಿದ್ದ 20 ಮಂದಿಗೆ ಗಾಯ

ಮಂಗಳೂರು-ಬೆಂಗಳೂರು ಹೈವೇಯಲ್ಲಿ ಈ ದುರ್ಘಟನೆ ನಡೆದಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಟೋಲ್​ ಬಳಿ ಅಳವಡಿಸಿದ್ದ ಸೈನ್ ಬೋರ್ಡ್​​ಗೆ ಡಿಕ್ಕಿ ಹೊಡೆದಿದೆ. ಬಸ್​ನಲ್ಲಿ ಓರ್ವ ಪ್ರಯಾಣಿಕರು ಹಾಗೂ ಬಸ್ ಕ್ಲೀನರ್​ ಮೃತಪಟ್ಚಿದ್ದಾರೆ.

Bus accident
ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು

ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ

ಅತೀ ವೇಗವಾಗಿ ಬರ್ತಿದ್ದ ಖಾಸಗಿ ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಬೆಂಗಳೂರಿನ ನಿವಾಸಿ ಕಸ್ತೂರಿ ಶಾನ್ ಬಾಗ್ (64ವ), ಬಸ್ ಕ್ಲೀನರ್ ಅಶೋಕ್ (25ವ) ಮೃತಪಟ್ಟಿದ್ದಾರೆ. ಬಸ್​​ನಲ್ಲಿದ್ದ 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಬೆಳ್ಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com