2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರಕಟ!

ರಾಜ್ಯದ ವಿವಿಧ ಜಿಲ್ಲೆಗಳಿಂದ ರಂಗಭೂಮಿಗೆ ಗಣನೀಯ ಕೊಡುಗೆ ನೀಡಿದ 25 ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Mukhyamantri Chandru
ಡಾ. ಮುಖ್ಯಮಂತ್ರಿ ಚಂದ್ರು
Updated on

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಿರಿಯ ಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು ಅವರು ಜೀವಮಾನ ರಂಗಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ನಟರಾಜ ವಿಗ್ರಹ, ಫಲಕವನ್ನು ಒಳಗೊಂಡಿದೆ.

25 ಸಾಧಕರಿಗೆ ವಾರ್ಷಿಕ ಪ್ರಶಸ್ತಿ: ಇನ್ನೂ ರಾಜ್ಯದ ವಿವಿಧ ಜಿಲ್ಲೆಗಳಿಂದ ರಂಗಭೂಮಿಗೆ ಗಣನೀಯ ಕೊಡುಗೆ ನೀಡಿದ 25 ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ (ಧಾರವಾಡ)

ರಮೇಶ ತಿಪ್ಪಣ್ಣ ಚಿತ್ರಗಾರ (ಇಳಕಲ್, ಬಾಗಲಕೋಟೆ)

ಶಿವಾನಂದ ತಗಡೂರು (ಬೆಂಗಳೂರು)

ಆರ್. ರಾಮಕೃಷ್ಣ (ಚನ್ನಯ್ಯ) (ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ)

ಶ್ರೀಮತಿ ಅನುಸೂಯ ರೇವಣಸಿದ್ದಯ್ಯ ಹೊಸೂರುಮಠ (ಲಕ್ಕುಂಡಿ)

ಅಯ್ಯಣ್ಣ ಸ್ವಾಮಿ ಹಿರೇಮಠ (ಕಲಬುರಗಿ)

ಶ್ರೀಮತಿ ಫಜೀಯಮ್ಮ ಹೆಚ್.ಎಸ್. (ಸಾಗರ)

ಮಲ್ಲಪ್ಪ ಭರಮಪ್ಪ ಕುರಿ (ಕೊಪ್ಪಳ)

ಕೆ.ಬಿ. ಸ್ವಾಮಿ (ಮಂಡ್ಯ)

ಶ್ರೀಮತಿ ಸುಶೀಲಾ ಹೆಗಡೆ ಮೂಡೇರು (ಸಿದ್ಧಾಪುರ, ಉತ್ತರ ಕನ್ನಡ)

ರಾಜಕುಮಾರ್ ಎಸ್. (ಬೆಂಗಳೂರು ನಗರ)

ಡಾ. ಎಂ. ಗಣೇಶ್ ಬೇಗೂರು (ಸಾಗರ)

ಪ್ರದೀಪ್ ಚಂದ್ರ ಕುತ್ಪಾಡಿ (ಉಡುಪಿ)

ಎನ್.ಟಿ. ಕೃಷ್ಣಪ್ಪ (ಬೆಂಗಳೂರು ನಗರ)

ಪುರುಷೋತ್ತಮ ಹಂಡ್ಯಾಳ್ (ಬಳ್ಳಾರಿ)

ಡಾ. ಎಸ್.ವಿ. ಸುಷ್ಮಾ (ಬೆಂಗಳೂರು ನಗರ)

ಶ್ರೀಮತಿ ನಂದಾ ಹಳೆಮನೆ (ಮೈಸೂರು)

ಶ್ರೀನಿವಾಸ್ (ರಾಮನಗರ)

ಶ್ರೀಮತಿ ವೈ.ಎನ್. ಉಮಾ (ಯಲಹಂಕ, ಬೆಂಗಳೂರು ನಗರ)

ಗದಿಗೆಯ್ಯ ಬಿ. ಹಿರೇಮಠ (ಬೈಲಹೊಂಗಲ)

ಶ್ರೀಮತಿ ಜಿ. ಭಾರತಿ (ಹೊಸ್ಲಿಗಿ, ವಿಜಯನಗರ)

ಶ್ರೀಮತಿ ಬಿ. ಸಾವಿತ್ರಮ್ಮ (ದಾವಣಗೆರೆ)

ಎಂ.ಸಿ. ಶಿವರುದ್ರಪ್ಪ (ತುಮಕೂರು)

ವೇಣುಗೋಪಾಲ್ ಕೆ. (ಬೆಂಗಳೂರು ನಗರ)

ಎನ್.ಎಂ. ಲಕ್ಷ್ಮಯ್ಯ (ಮಾಲೂರು, ಕೋಲಾರ)

ದತ್ತಿ ಪುರಸ್ಕಾರ ಪುರಸ್ಕೃತರ ಪಟ್ಟಿ ಹೀಗಿದೆ:

ಎಸ್. ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ: ಬಿ.ಜಿ. ಶ್ರೀಧರ್ (ಬೆಂಗಳೂರು ನಗರ)

ಇ. ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರ: ಅಶ್ಫಾಕ್ ಹುಸೇನ್ ಹಾ. ಜಾಗೀರದಾರ್ (ವಿಜಯಪುರ)

ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಡಾ. ಎಂ. ಚಂದ್ರಪ್ಪ (ಟಿ. ನರಸೀಪುರ, ಮೈಸೂರು)

ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ: ದಯಾನಂದ ಚ ಬೆಳಗಿ (ಗದಗ)

ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ: ಗಂಗಾಧರ ರೆಡ್ಡಿ ಬಿ.ಆರ್. (ಕುಣಿಗಲ್, ತುಮಕೂರು)

ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ: ವೈ.ಎನ್. ಶಿವಣ್ಣ (ತುಮಕೂರು)

ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ: ಚಂದ್ರಮ್ಮ (ಸಾಣೇಹಳ್ಳಿ, ಚಿತ್ರದುರ್ಗ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com