70ರ ದಶಕದಲ್ಲಿ ಸಮೃದ್ಧವಾಗಿತ್ತು ಹುಲಿ ಸಂತತಿ: ಕಿಷ್ಕಿಂದೆಯಲ್ಲಿದೆ ವ್ಯಾಘ್ರ ಬೇಟೆಯ ಐತಿಹ್ಯ; ಈಗ ಎಲ್ಲಿಂದ ಬಂತು ಎಂಬುದೇ ಚಿದಂಬರ ರಹಸ್ಯ!

ಈ ಹುಲಿಗಳನ್ನು ರಾಜಮನೆತನದ ಸದಸ್ಯರು ಬೇಟೆಯಾಡುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಬೇಟೆಗಾರರಿಂದ ಬೇಟೆಯಾಡಿಸುತ್ತಿದ್ದರು. 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾನೂನು ಜಾರಿಗೆ ಬಂದ ನಂತರ, ಈ ಪ್ರದೇಶಗಳಲ್ಲಿ ಅಂತಹ ಯಾವುದೇ ಬೇಟೆ ವರದಿಯಾಗಿಲ್ಲ.
Archive show the tiger hunting events organised by Sandur royal family in 1970s
ಸಂಡೂರು ರಾಜ ವಂಶಸ್ಥರಿಂದ ಹುಲಿ ಬೇಟೆExpress Photo
Updated on

ಕೊಪ್ಪಳ: ಗಂಗಾವತಿ ತಾಲ್ಲೂಕಿನ ತೆಂಬಾ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಸಂಚರಿಸುತ್ತ ಸುತ್ತಲಿನ ಜನರಲ್ಲಿ ಆತಂಕ ಮೂಡಿಸಿರುವ ಕಾಡಿನ ರಾಜ ‘ಹುಲಿ’ ಈಗ ಜಿಲ್ಲೆಯ ಜನರ ಕುತೂಹಲ ಕೆರಳಿಸಿದ್ದಾನೆ. ಆದರೆ ಐತಿಹಾಸಿಕ ದಾಖಲೆಗಳು ಮತ್ತು ಜಿಲ್ಲಾ ದಾಖಲೆಗಳು ಕೊಪ್ಪಳ ಮತ್ತು ಬಳ್ಳಾರಿ ಕಾಡುಗಳಲ್ಲಿ ಹುಲಿಗಳು ಮತ್ತು ಇತರ ಮಾಂಸಾಹಾರಿಗಳ ಪ್ರಾಣಿಗಳು ಸಮೃದ್ಧವಾಗಿ ಓಡಾಡಿಕೊಂಡಿದ್ದವು ಎಂಬುದನ್ನು ಸಾಬೀತುಪಡಿಸುತ್ತವೆ.

1950 ರ ದಶಕದ ಅಂತ್ಯದಲ್ಲಿ, ತುಂಗಭದ್ರಾ ಅಣೆಕಟ್ಟು ನಿರ್ಮಾಣದ ನಂತರ, ಶ್ರೀಶೈಲಂ ಮತ್ತು ಶಿವಮೊಗ್ಗವನ್ನು ಸಂಪರ್ಕಿಸುವ ಪೂರ್ವ ಕಾರಿಡಾರ್‌ನಿಂದ ಪಶ್ಚಿಮ ಕಾರಿಡಾರ್ ನಡುವೆ ಇದ್ದ ಹುಲಿ ಸಂಪರ್ಕ ಕಡಿತಗೊಂಡಿತು. ಮುಂದಿನ ಎರಡು ದಶಕಗಳವರೆಗೆ ಕೊಪ್ಪಳ ಮತ್ತು ಸಂಡೂರಿನಲ್ಲಿ ಹುಲಿಗಳ ಸಂಖ್ಯೆಯು ಸಣ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಲೇ ಇತ್ತು.

ಈ ಹುಲಿಗಳನ್ನು ರಾಜಮನೆತನದ ಸದಸ್ಯರು ಬೇಟೆಯಾಡುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಬೇಟೆಗಾರರಿಂದ ಬೇಟೆಯಾಡಿಸುತ್ತಿದ್ದರು. 1972 ರಲ್ಲಿ ವನ್ಯಜೀವಿ ಸಂರಕ್ಷಣಾ ಕಾನೂನು ಜಾರಿಗೆ ಬಂದ ನಂತರ, ಈ ಪ್ರದೇಶಗಳಲ್ಲಿ ಅಂತಹ ಯಾವುದೇ ಬೇಟೆ ವರದಿಯಾಗಿಲ್ಲ. ಈ ಪ್ರದೇಶದ ಕೊನೆಯ ಹುಲಿಯನ್ನು ಕೊಪ್ಪಳದ ಸನಾಪುರ ಬಳಿಯ ಎಲುಗುಡ್ಡ ಪ್ರದೇಶದಲ್ಲಿ ಬೇಟೆಯಾಡುವ ಸಮಯದಲ್ಲಿ ಗುಂಡು ಹಾರಿಸಿ ಕೊಲ್ಲಲಾಯಿತು.

The flat savanna of Hesaru village where current day Tungabhadra dam stands
ಇಂದಿನ ತುಂಗಭದ್ರಾ ಅಣೆಕಟ್ಟು ಇರುವ ಹೆಸರಾರು ಗ್ರಾಮದ ಸಮತಟ್ಟಾದ ಸವನ್ನಾExpress Photo

ಕೊಪ್ಪಳದ ಡೆಕ್ಕನ್ ಕನ್ಸರ್ವೇಶನ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಗಜೇಂದ್ರಘಡ ಮತ್ತು ಸಂಡೂರಿನ ಘೋರ್ಫಡೆ ಕುಲದ ಸದಸ್ಯ ಇಂದ್ರಜಿತ್ ಘೋರ್ಪಡೆ, ಬೇಟೆಯಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ, ಇತರ ಪ್ರಾಂತ್ಯಗಳಿಂದ ರಾಜಮನೆತನದ ಅತಿಥಿಗಳು ಬೇಟೆಯಾಡಲು ಸಂಡೂರು ಮತ್ತು ಗಂಗಾವತಿಗೆ ಭೇಟಿ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ ಈಗ ಕಂಡುಬಂದಿರುವ ಗಂಡು ಹುಲಿ ಎಲ್ಲಿಂದ ಬಂದಿತು ಎನ್ನುವುದೇ ಚಿದಂಬರ ರಹಸ್ಯವಾಗಿದೆ ಎಂದಿದ್ದಾರೆ.

Archive show the tiger hunting events organised by Sandur royal family in 1970s
ಐದು ದಶಕಗಳ ಬಳಿಕ ಹಂಪಿ ಸಮೀಪ ಹುಲಿ ಪ್ರತ್ಯಕ್ಷ: ವಿಡಿಯೋ ವೈರಲ್; ಸುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರ!

ನಮ್ಮ ಕುಟುಂಬವು ಆಟಗಳನ್ನು ಆಯೋಜಿಸುತ್ತಿತ್ತು, ಅಲ್ಲಿ ಬೇರೆ ಬೇರ ಅರಮನೆಗಳಿಂದ ಅತಿಥಿಗಳು ಬರುತ್ತಿದ್ದರು. ನಾನು ಚಿಕ್ಕ ಹುಡುಗನಾಗಿದ್ದಾಗ ಅನೇಕ ಬೇಟೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಬ್ರಿಟಿಷರಂತೆ ಬೇಟೆಯಾಡಲು ತರಬೇತಿ ಪಡೆದ ಬೀಟರ್‌ಗಳ ಸಹಾಯವನ್ನು ಬೇಟೆಗಾರರು ಪಡೆಯುತ್ತಿದ್ದರು. 1971 ರವರೆಗೆ ವನ್ಯಜೀವಿ ಬೇಟೆಯ ಮೇಲೆ ಯಾವುದೇ ನಿಷೇಧವಿರಲಿಲ್ಲ. ಕೊಲ್ಲಾಪುರದ ರಾಜಶ್ರೀ ಶಾಹು ಮಹಾರಾಜರು ನಮ್ಮ ಕುಟುಂಬವು ಆಯೋಜಿಸಿದ ಬೇಟೆ ಕಾರ್ಯಕ್ರಮಕ್ಕೆ ತಮ್ಮ ಸಾಕುಪ್ರಾಣಿ ಚಿರತೆಯೊಂದಿಗೆ ಸಂಡೂರಿಗೆ ಬರುತ್ತಿದ್ದರು ಎಂದು ಘೋರ್ಫಡೆ ಹೇಳಿದರು.

'ಹೆಸರು' ಎಂಬ ಹಳ್ಳಿಯೊಂದು ತುಂಗಭದ್ರಾ ಅಣೆಕಟ್ಟಿನ ನೀರಿನಲ್ಲಿ ಮುಳುಗಿ ಹೋಯಿತು. ಅದು ಆಫ್ರಿಕಾದ ಸವನ್ನಾದಂತಹ ಸಮತಟ್ಟಾದ ಪ್ರದೇಶವಾಗಿತ್ತು, ಅಲ್ಲಿ ಹುಲಿಗಳು ಮತ್ತು ಹಲವಾರು ಪ್ರಾಣಿಗಳು ಸಹಬಾಳ್ವೆ ನಡೆಸುತ್ತಿದ್ದವು. ಪ್ರಾಣಿ ಸಂರಕ್ಷಣಾ ಕಾನೂನುಗಳು ಜಾರಿಗೆ ಬರುವ ಮೊದಲೇ ರಾಜಮನೆತನವು ಸಂಡೂರು ಬೆಟ್ಟಗಳಲ್ಲಿ ಸಾಂಬಾರ್ ಜಿಂಕೆಗಳನ್ನು ಪರಿಚಯಿಸಿತ್ತು. ಸಂಡೂರಿನಲ್ಲಿಯೇ 12 ಹುಲಿಗಳು ಇದ್ದವು ಎಂದು ಘೋರ್ಫಡೆ ಸ್ಮರಿಸಿದ್ದಾರೆ.

M Y Ghorphade, politician and wildlife photographer poses with a hunted tiger
ಬೇಟೆಯಾಡಿದ ಹುಲಿಯೊಂದಿಗೆ ರಾಜಕಾರಣಿ ಮತ್ತು ವನ್ಯಜೀವಿ ಛಾಯಾಗ್ರಾಹಕ ಎಂ ವೈ ಘೋರ್ಪಡೆExpress Photo

ಇಂದಿಗೂ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಅರಣ್ಯ ಅತಿಥಿ ಗೃಹವು ಚಿತ್ರದುರ್ಗದಿಂದ ಹೊಸಪೇಟೆಗೆ ಹೆದ್ದಾರಿಯಲ್ಲಿರುವ ಚಿಲಕನಟ್ಟಿ ಎಂಬ ಸ್ಥಳದಲ್ಲಿದೆ. ಅತಿಥಿಗಳು ಮತ್ತು ರಾಜಮನೆತನದ ಸದಸ್ಯರು ಬೇಟೆಯಾಡುವ ಮೊದಲು ಇಲ್ಲಿಗೆ ಬರುತ್ತಿದ್ದರು.

ಹುಲಿಗಳು ಇಂದಿನ ಮೂರು ತಾಲ್ಲೂಕುಗಳಾದ ಹೊಸಪೇಟೆ, ಸಂಡೂರು ಮತ್ತು ಗಂಗಾವತಿಯಲ್ಲಿ ಕಂಡುಬರುತ್ತಿದ್ದವು. ಮುಸ್ಲಾಪುರ ಮತ್ತು ಎಲುಗುಡ್ಡದಂತಹ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳು, ಚಿರತೆಗಳು, ಕರಡಿಗಳು ಮತ್ತು ಬೇಟೆ ಪ್ರಾಣಿಗಳು ಇದ್ದವು.

ಚಳಿಗಾಲದಲ್ಲಿ ರಾಜಮನೆತನವು ಬಳ್ಳಾರಿಯಿಂದ ಕರ್ನೂಲ್‌ಗೆ ಹೋಗುವ ರಸ್ತೆಯಲ್ಲಿ ಆಟಗಳನ್ನು ನಡೆಸುತ್ತಿತ್ತು, ಅಲ್ಲಿ ವಲಸೆ ಹಕ್ಕಿಗಳು ಭೇಟಿ ನೀಡುತ್ತಿದ್ದವು ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com