ಧರ್ಮರಾಯ ದೇವಸ್ಥಾನ: ಮುಜರಾಯಿ ಅಧಿಕಾರಿಗಳ ವಿರುದ್ಧ ಚಿನ್ನ ಕಳವು, ಕಮಿಷನ್ ಬೇಡಿಕೆ ಆರೋಪ

ಧರ್ಮರಾಯ ದೇವಸ್ಥಾನ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಕೆ. ಸತೀಶ್ ಅವರು, ಕಾರ್ಯನಿರ್ವಹಣಾಧಿಕಾರಿ (EO) ನಾಗರಾಜ್ ಅವರು ದೇವಸ್ಥಾನದಿಂದ 122 ಗ್ರಾಂ ತೂಕದ ಚಿನ್ನದ ಹಾರವನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
File photo
ಧರ್ಮರಾಯ ಸ್ವಾಮಿ ದೇವಾಲಯ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಧರ್ಮರಾಯ ದೇವಸ್ಥಾನದ ಕರಗ ಮತ್ತು ದೈನಂದಿನ ನಿರ್ವಹಣೆಗೆ ರಾಜ್ಯ ಸರ್ಕಾರ ನೇಮಿಸಿರುವ ಮುಜರಾಯಿ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಧರ್ಮರಾಯ ದೇವಸ್ಥಾನ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಕೆ. ಸತೀಶ್ ಅವರು, ಕಾರ್ಯನಿರ್ವಹಣಾಧಿಕಾರಿ (EO) ನಾಗರಾಜ್ ಅವರು ದೇವಸ್ಥಾನದಿಂದ 122 ಗ್ರಾಂ ತೂಕದ ಚಿನ್ನದ ಹಾರವನ್ನು ಕಳವು ಮಾಡಿದ್ದಾರೆ ಎಂದು ಮಂಗಳವಾರ ಆರೋಪಿಸಿದರು.

ಇದಲ್ಲದೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳಲ್ಲಿ ಪ್ರತಿ ರೂ.10 ಲಕ್ಷಕ್ಕೆ ರೂ.2 ಲಕ್ಷ ಕಮಿಷನ್ ಕೇಳಲಾಗುತ್ತಿದೆ ಎಂದೂ ಅವರು ದೂರಿದ್ದಾರೆ.

ಈ ಘಟನೆ ಅಕ್ಟೋಬರ್ ಮೊದಲ ವಾರದಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆರ್‌ಟಿಐ ಮೂಲಕ ಪಡೆಯಲು ಎರಡು ತಿಂಗಳು ಸಮಯ ಬೇಕಾಯಿತು. ಆ ವಿಡಿಯೋದಲ್ಲಿ ಅಧಿಕಾರಿ ಚಿನ್ನದ ಸರವನ್ನು ಜೇಬಿನಲ್ಲಿ ಇಟ್ಟುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸತೀಶ್ ಅವರು ಹೇಳಿದ್ದಾರೆ.

ಆದರೆ ಆರೋಪ ಎದುರಿಸುತ್ತಿರುವ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಅವರು, ಆಭರಣವನ್ನು ‘ಪರೀಕ್ಷೆ’ಗಾಗಿ ದೇವಸ್ಥಾನದ ಹೊರಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಿದ್ದು, ತಾನು ನಿರ್ದೋಷಿ ಎಂದು ಹೇಳಿದ್ದಾರೆ.

ಈ ಕುರಿತು ಮುಜರಾಯಿ ಆಯುಕ್ತ ಶರತ್ ಬಿ. ಅವರು ಪ್ರತಿಕ್ರಿಯಿಸಿ, ಸಂಬಂಧಿತ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ದೂರುದಾರರಿಂದ ಆರೋಪಗಳಿಗೆ ಪೂರಕ ಸಾಕ್ಷ್ಯಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಎಲ್ಲ ಆರೋಪಗಳನ್ನೂ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

File photo
ಐತಿಹಾಸಿಕ ಬೆಂಗಳೂರು ಕರಗ: ಇಂದು, ನಾಳೆ ಈ ಮಾರ್ಗದಲ್ಲಿ ಸಂಚಾರ, ಪಾರ್ಕಿಂಗ್ ನಿರ್ಬಂಧ; ಪರ್ಯಾಯ ಮಾರ್ಗ ಹೀಗಿದೆ...

ಮುಜರಾಯಿ ಇಲಾಖೆಯೊಳಗೆ ಕೆಲ ಅಧಿಕಾರಿಗಳು ಒಂದೇ ಘಟಕದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ತಹಶೀಲ್ದಾರ್ ಅರವಿಂದ್ ಬಾಬು, ಹೆಚ್ಚುವರಿ ಉಪ ಆಯುಕ್ತ ಜಗದೀಶ್, ಮಾಜಿ ಕಾರ್ಯನಿರ್ವಹಣಾಧಿಕಾರಿ ನವೀನ್ ಹಾಗೂ ಸಹಾಯಕ ಆಯುಕ್ತ ಪುರುಷೋತ್ತಮ್ ಎಲ್ಲರೂ ಸೇರಿ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಕೆಲಸ ಮಾಡಿಸುತ್ತಿದ್ದಾರೆಂದು ಸತೀಶ್ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅರವಿಂದ್ ಬಾಬು, ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ಬೆಂಗಳೂರು ಕರದ ಅನುದಾನದ ವಿಷಯದಲ್ಲೂ ವಿವಾದ ತೀವ್ರಗೊಂಡಿದೆ.

ಕಳೆದ ಎರಡು ವರ್ಷಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕರಗ ಹಬ್ಬಕ್ಕೆ ರೂ.1.5 ಕೋಟಿ ಅನುದಾನ ನೀಡುತ್ತಿತ್ತು. ಕಳೆದ 10 ವರ್ಷಗಳಿಂದ ದೇವಸ್ಥಾನ ಮುಜರಾಯಿ ಇಲಾಖೆಯ ವಶದಲ್ಲಿದೆ. ಈಗ ಆ ಹಣದ ಮೇಲೂ ಇಲಾಖೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಸತೀಶ್ ಆರೋಪಿಸಿದ್ಜಾರೆ.

ಹಬ್ಬದ ವೇಳೆ ದೇವಾಲಯಕ್ಕೆ ಸೇವೆ ಒದಗಿಸಿದ ವ್ಯಾಪಾರಿಗಳಿಗೆ ಹಣ ಪಾವತಿಯಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಹೂ ಸರಬರಾಜು ಮಾಡಿದ ರವಿಚಂದ್ರನ್ ಮತ್ತು ವಿದ್ಯುತ್ ಅಲಂಕಾರ ವ್ಯವಸ್ಥೆ ಒದಗಿಸಿದ ಸುಜಾತಾ ಸೇರಿದಂತೆ ಹಲವು ವಿತರಕರಿಗೆ ಅಧಿಕಾರಿಗಳು ಕಮಿಷನ್ ಬೇಡುತ್ತಿದ್ದಾರೆ. ಬೇಡಿಕೆ ಈಡೇರದಿದ್ದರೆ ಕೆಲಸ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಸತೀಶ್ ಆರೋಪಿಸಿದ್ದಾರೆ. ಈ ಆರೋಪಗಳಿಗೆ ಮುಜರಾಯಿ ಇಲಾಖೆ ಸ್ಪಷ್ಟನೆ ನೀಡಿದೆ.

ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, BBMPಯಿಂದ ಬಂದ ರೂ.60,96,879ರ ಎರಡನೇ ಕಂತಿನ ಅನುದಾನದಲ್ಲಿ ಮೂರನೇ ಭಾಗವನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೆ ನೇರವಾಗಿ ದೇವಸ್ಥಾನ ನಿರ್ವಹಣಾ ಸಮಿತಿಯ ಖಾತೆಗೆ ವರ್ಗಾಯಿಸಲಾಗಿದೆ. 2023ರಲ್ಲಿ ನಗರ ಉಪ ಆಯುಕ್ತರ ಆದೇಶದಂತೆ ಅನುದಾನ ನಿರ್ವಹಣೆ ಮುಜರಾಯಿ ಇಲಾಖೆಗೆ ವರ್ಗಾಯಿಸಲಾಗಿತ್ತು. ಸಂಬಂಧಿತ ಅನುಮತಿ ಇಲ್ಲದೆ ಹಣ ವರ್ಗಾವಣೆ ಮಾಡಿರುವುದು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾರ್ಥ ದತ್ತಿಗಳ ನಿಯಮಗಳು, 2002ರ ನಿಯಮ 33(3) ಹಾಗೂ ಕರ್ನಾಟಕ ಆರ್ಥಿಕ ಸಂಹಿತೆ, 1958ರ ಸೆಕ್ಷನ್ 14ರ ಉಲ್ಲಂಘನೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್, ಹಣವನ್ನು ನನ್ನ ವೈಯಕ್ತಿಕ ಖಾತೆಗೆ ಅಲ್ಲ, ದೇವಸ್ಥಾನ ನಿರ್ವಹಣಾ ಸಮಿತಿಯ ಖಾತೆಗೆ ಮಾತ್ರ ವರ್ಗಾಯಿಸಲಾಗಿದೆ,” ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com