ಮಾನಸಿಕ ತುರ್ತು ಪರಿಸ್ಥಿತಿ ನಿಭಾಯಿಸಲು 'ನಮ್ಮ 112' ಜತೆ ಟೆಲಿ ಮಾನಸ್ ಸಹಾಯವಾಣಿ ಲಿಂಕ್

ಮಾನಸಿಕ ಆರೋಗ್ಯ ತೊಂದರೆಯನ್ನು ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಸಕಾಲಿಕ ನೆರವು ನೀಡಲಾಗುವುದು. ಆತ್ಮಹತ್ಯೆ ಅಪಾಯ ಸೇರಿದಂತೆ ಮನೋವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ನಮ್ಮ 112 ರ ಸಮನ್ವಯದೊಂದಿಗೆ ತ್ವರಿತವಾಗಿ ನಿರ್ವಹಿಸಬಹುದು.
Bengaluru Police Commissioner Seemant Kumar Singh and Dr Pratima Murthy, Director of the National Institute of Mental Health and Neurosciences (NIMHANS)
ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ.
Updated on

ಬೆಂಗಳೂರು: ಮಾನಸಿಕ ತುರ್ತು ಪರಿಸ್ಥಿತಿಗಳಿಗೆ, ಆತ್ಮಹತ್ಯೆ ಅಪಾಯ ಸೇರಿದಂತೆ, ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಕರೆಗಳ ಸರಾಗ ವರ್ಗಾವಣೆ ಮತ್ತು ಸಮಯೋಚಿತ ಸಹಾಯ ಒದಗಿಸಲು ಪೊಲೀಸರು ಬುಧವಾರ ಟೆಲಿ ಮಾನಸ್ ಅನ್ನು ನಮ್ಮ 112ನೊಂದಿಗೆ ಸಂಯೋಜಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ಮಾನಸಿಕ ಆರೋಗ್ಯ ಪ್ರತಿಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ಟೆಲಿ ಮಾನಸ್(14416)ಗಾಗಿ ಏಕೀಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಹಮಿಕೊಂಡಿದ್ದ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (ನಮ 112) ಸಹಯೋಗದೊಂದಿಗೆ ಟೆಲಿ ಮಾನಸ್‌ (14416) ಸಂಯೋಜನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ(NIMHANS) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಸಹ ಭಾಗವಹಿಸಿದ್ದರು.

Bengaluru Police Commissioner Seemant Kumar Singh and Dr Pratima Murthy, Director of the National Institute of Mental Health and Neurosciences (NIMHANS)
ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆ: 16 ವರ್ಷದೊಳಗಿನವರಿಗೆ social media ಬಳಕೆ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ..!

ನಗರದಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

"ಮಾನಸಿಕ ಆರೋಗ್ಯ ತೊಂದರೆಯನ್ನು ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಸಕಾಲಿಕ ನೆರವು ನೀಡಲಾಗುವುದು. ಆತ್ಮಹತ್ಯೆ ಅಪಾಯ ಸೇರಿದಂತೆ ಮನೋವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ನಮ್ಮ 112 ರ ಸಮನ್ವಯದೊಂದಿಗೆ ತ್ವರಿತವಾಗಿ ನಿರ್ವಹಿಸಬಹುದು. ಆದರೆ ನಮ್ಮ 112 ಸ್ವೀಕರಿಸಿದ ಮಾನಸಿಕ ಆರೋಗ್ಯ ಸಂಬಂಧಿತ ಕರೆಗಳನ್ನು ವಿಶೇಷ ನಿರ್ವಹಣೆಗಾಗಿ ಟೆಲಿ ಮಾನಸ್(14416)ಗೆ ವರ್ಗಾಯಿಸಲಾಗುತ್ತದೆ" ಎಂದು ಪ್ರಕಟಣೆ ತಿಳಿಸಿದೆ.

‘ನಮ್ಮ 112’ಗೆ 5.22 ಲಕ್ಷ ಕರೆಗಳು

24/7 ಪೊಲೀಸ್ ಸಹಾಯವಾಣಿಯಾದ ನಮ್ಮ 112, 2025 ರಲ್ಲಿ 5,22,742 ಕರೆಗಳನ್ನು(CFS) ಸ್ವೀಕರಿಸಿದೆ, ಇದು 2024ಕ್ಕಿಂತ 80,000 ಕ್ಕೂ ಹೆಚ್ಚು CFS ಗಳ ಹೆಚ್ಚಳವಾಗಿದೆ. ಕುತೂಹಲಕಾರಿಯಾಗಿ, 5,22,742 CFS ಗಳಲ್ಲಿ, ಸುಮಾರು 1,15,000 ಮಹಿಳೆಯರು ಕರೆ ಮಾಡಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಅವರು TNIE ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com