ಸೈಬರ್ ವಂಚನೆ: ರಾಜ್ಯದಲ್ಲಿ ಮ್ಯೂಲ್ ಅಕೌಂಟ್ ಗಳ ಸ್ಥಗಿತ; 68 ಜನರ ಬಂಧನ

ರಾಜ್ಯದಾದ್ಯಂತ ಕಳೆದ ಒಂದು ವಾರದಿಂದ ಮುಂದುವರೆದಿರುವ ವಿಶೇಷ ಕಾರ್ಯಾಚರಣೆಯಲ್ಲಿ, ಸೈಬರ್ ವಂಚನೆಗೆ ಬಳಸುವ ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಒಟ್ಟುಗೂಡಿಸುತ್ತಿದ್ದ ಮ್ಯೂಲ್ ಹರ್ಡರ್ಸ್ ಗಳನ್ನು ಪತ್ತೆ ಮಾಡಲಾಗುತ್ತಿದೆ.
Mule bank accounts frozen in crackdown on cyber fraudsters in Karnataka, 68 held
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸೈಬರ್ ವಂಚನೆಯಲ್ಲಿ ಭಾಗಿಯಾಗಿರುವ ಮ್ಯೂಲ್ ಖಾತೆಗಳು(ನಕಲಿ ಖಾತೆಗಳು) ಮತ್ತು "ಮ್ಯೂಲ್ ಹರ್ಡರ್ಸ್"(ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುವವರು) ವಿರುದ್ಧ ರಾಜ್ಯಾದ್ಯಂತ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ರಾಜ್ಯ ಸೈಬರ್ ಕಮಾಂಡ್ 68 ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಕಳೆದ ಒಂದು ವಾರದಿಂದ ಮುಂದುವರೆದಿರುವ ವಿಶೇಷ ಕಾರ್ಯಾಚರಣೆಯಲ್ಲಿ, ಸೈಬರ್ ವಂಚನೆಗೆ ಬಳಸುವ ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಒಟ್ಟುಗೂಡಿಸುತ್ತಿದ್ದ ಮ್ಯೂಲ್ ಹರ್ಡರ್ಸ್ ಗಳನ್ನು ಪತ್ತೆ ಮಾಡಲಾಗುತ್ತಿದೆ.

ಡಿಸೆಂಬರ್ 2025 ಮತ್ತು ಫೆಬ್ರವರಿ 2026 ರ ನಡುವೆ ಮೂರು ತಿಂಗಳಲ್ಲಿ ಒಟ್ಟು 68 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ನವೀಕರಿಸಿದ ವರದಿಯಲ್ಲಿ ತಿಳಿಸಿದ್ದಾರೆ.

Mule bank accounts frozen in crackdown on cyber fraudsters in Karnataka, 68 held
ಮ್ಯೂಲ್ ಅಕೌಂಟ್ ಸೈಬರ್ ದಂಧೆ: ರಾಜ್ಯಾದ್ಯಂತ CID ಏಕಕಾಲಕ್ಕೆ ದಾಳಿ, 13 ಮಂದಿ ಬಂಧನ

"ಕರ್ನಾಟಕ ಸೈಬರ್ ಕಮಾಂಡ್ ರಾಜ್ಯದಾದ್ಯಂತ ಮ್ಯೂಲ್ ಖಾತೆಗಳು ಮತ್ತು ಮ್ಯೂಲ್ ಹರ್ಡರ್ಸ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಕಳೆದ ವಾರದಿಂದ ವಿಶೇಷ ಡ್ರೈವ್ ಮುಂದುವರೆದಿದೆ ಮತ್ತು ಇದು ನವೀಕರಿಸಿದ ವರದಿಯಾಗಿದೆ" ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತನಿಖೆಯು "ಮ್ಯೂಲ್ ಹರ್ಡರ್ಸ್" ಜಾಲವನ್ನು ಗುರುತಿಸಿದೆ. ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಒಟ್ಟುಗೂಡಿಸಿ ದುರುಪಯೋಗಪಡಿಸಿಕೊಳ್ಳುತ್ತಿದ್ದ ಆರೋಪಿಗಳು, ಈ ಖಾತೆಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ

ಅನುಮಾನಾಸ್ಪದ ಸಾಮಾನ್ಯ ವ್ಯಕ್ತಿಗಳಿಂದ ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿ ಅವರ ಸಂಬಂಧಿಕರ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಈ ಖಾತೆಗಳನ್ನು ವ್ಯವಹಾರದ ರೀತಿಯಲ್ಲಿ ನಿರ್ವಹಿಸಲಾಗುತ್ತಿತ್ತು ಎಂದು ಪ್ರಕಟಣೆ ತಿಳಿಸಿದೆ.

ಶಿಸ್ತುಕ್ರಮದ ಭಾಗವಾಗಿ, ಪೊಲೀಸರು ರಾಜ್ಯಾದ್ಯಂತ 60 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು 869 ನಕಲಿ ಖಾತೆಗಳನ್ನು ಪತ್ತೆ ಮಾಡಿದ್ದಾರೆ. ನ್ಯಾಯಾಲದಿಂದ ಶೋಧಾ ವಾರಂಟ್ ಪಡೆದು 35 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ದೇಶಾದ್ಯಂತ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್(NCRP)ನಲ್ಲಿ ಈ ನಕಲಿ ಖಾತೆಗಳ ವಿರುದ್ಧ ಸುಮಾರು 8,788 ದೂರುಗಳು ದಾಖಲಾಗಿವೆ ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com