

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರ್ಸನಲ್ ಸೆಕ್ರೆಟರಿ ಚಂದ್ರು ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೇಮಂತ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಪಿಎಸ್ ಆಗಿದ್ದ ಚಂದ್ರು ಬೆಂಗಳೂರಿನ ಸಂಜಯನಗರ ನಿವಾಸದಲ್ಲಿ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಕೋಣೆಯ ಬಾಗಿಲು ತೆಗೆದಾಗ ಹೇಮಂತ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಕುಟುಂಬಸ್ಥರೆಲ್ಲರೂ ತಿರುಪತಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು.
ಶುಕ್ರವಾರ ಹೇಮಂತ್‌ನ ತಂಗಿಗೆ ಆಭರಣ ಕೊಡಿಸಲಾಗಿತ್ತು. ಈ ಸಂಬಂಧ ತಾಯಿ ಜೊತೆ ಹೇಮಂತ್ ಜಗಳ ಮಾಡಿಕೊಂಡಿದ್ದನು. ತಂಗಿಗೆ ಕೇಳಿದ್ದೆಲ್ಲಾ ಕೊಡಿಸ್ತೀರಾ, ನನಗೇನೂ ಕೊಡಿಸಲ್ಲ ಎಂದು ಕೋಪದಲ್ಲಿ ಕೋಣೆಗೆ ಹೋಗಿದ್ದ ಹೇಮಂತ್ ಬಾಗಿಲು ಹಾಕಿಕೊಂಡಿದ್ದನು. ರಾತ್ರಿ ಊಟಕ್ಕೂ ಕರೆದ್ರೂ ಹೇಮಂತ್ ಕೋಣೆಯಿಂದ ಹೊರಗೆ ಬಂದಿರಲಿಲ್ಲ.
ರಾತ್ರಿ ಸುಮಾರು 8 ಗಂಟೆವರೆಗೂ ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ನಂತರ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದಾನೆ. ರಾತ್ರಿ ಸುಮಾರು 12 ಗಂಟೆಗೆ ಹೇಮಂತ್ ನೇಣುಬಿಗಿದುಕೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸಂಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement