ರಾಜ್ಯದಲ್ಲಿ EVM ಸಮೀಕ್ಷೆ: ಶೇ. 85 ರಷ್ಟು ಮತದಾರರ ನಂಬಿಕೆ, ರಾಹುಲ್ ವಿರುದ್ಧ ಬಿಜೆಪಿ ಕಿಡಿ; ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ನಾಗರಿಕರ ಜ್ಞಾನ, ವರ್ತನೆ ಮತ್ತು ಅಭ್ಯಾಸದ ಅಂತಿಮ ಸಮೀಕ್ಷೆಯನ್ನು ನಡೆಸಲಾಗಿದ್ದು, ಇದರಲ್ಲಿ 5,100 ಮತದಾರರು ಪಾಲ್ಗೊಂಡಿದ್ದಾರೆ.
Rahul Gandhi, Siddaramaiah
ರಾಹುಲ್ ಗಾಂಧಿ,ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣಾ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಜನರು EVM ಹಾಗೂ ವಿದ್ಯುನ್ಮಾನ ಮಂತ್ರಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ಹೊಸ ವಾಕ್ ಸಮರಕ್ಕೆ ಕಾರಣವಾಗಿದೆ.

ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರು, ಇವಿಎಂಗಳಲ್ಲಿ ಮತ ಕಳ್ಳತನವನ್ನು ನಿರಾಕರಿಸಿದ್ದಾರೆ. ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದಿಂದ ನಾಗರಿಕರ ಜ್ಞಾನ, ವರ್ತನೆ ಮತ್ತು ಅಭ್ಯಾಸದ ಅಂತಿಮ ಸಮೀಕ್ಷೆಯನ್ನು ನಡೆಸಲಾಗಿದ್ದು, ಇದರಲ್ಲಿ 5,100 ಮತದಾರರು ಪಾಲ್ಗೊಂಡಿದ್ದಾರೆ. ಸಮೀಕ್ಷೆಯಲ್ಲಿ ಜನರು EVM ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದು, ಶೇ. 85 ರಷ್ಟು ಮಂದಿ ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಯು 'ಮುಕ್ತ ಮತ್ತು ನ್ಯಾಯಯುತ'ವಾಗಿ ನಡೆದಿದೆ ಎಂದು ಹೇಳಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅವರ 'ಮತ ಚೋರಿ' ಆರೋಪ ಸುಳ್ಳು ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಕಾಂಗ್ರೆಸ್ 'ವೋಟ್ ಚೋರಿ' ನಿಲುವು ಮತ್ತೊಮ್ಮೆ ಬಟ್ಟಬಯಲಾಗಿದೆ. ಕರ್ನಾಟಕ ಸರ್ಕಾರವೇ ಪ್ರಕಟಿಸಿದ ಸಮೀಕ್ಷೆ ವರದಿಯಲ್ಲಿ ನಮ್ಮ ಬಹುಪಾಲು ಜನರು ದೇಶದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತಿವೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ. ಇದು ಪದೇ ಪದೇ ಚುನಾವಣಾ ವಿಫಲತೆ ಒಪ್ಪಿಕೊಳ್ಳಲಾಗದೆ, 'ವೋಟ್ ಚೋರಿ' ನಿರೂಪಣೆ ಆವಿಷ್ಕರಿಸಲು ಮತ್ತು ಚುನಾವಣಾ ಆಯೋಗದ ಮೇಲೆ ಅನುಮಾನ ಬರುವ ಅಜಾಗರೂಕ ಪ್ರಚಾರವನ್ನು ಪ್ರಾರಂಭಿಸಿದ ರಾಹುಲ್ ಗಾಂಧಿಗೆ ನೇರ ಹೊಡೆತವಾಗಿದೆ ಎಂದು ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಆದಾಗ್ಯೂ, ಕಾಂಗ್ರೆಸ್ ತನ್ನ ಆಡಳಿತ ಮತ್ತು ಸಮೀಕ್ಷೆಯ ನಡುವಿನ ಯಾವುದೇ ಸಂಬಂಧವನ್ನು ನಿರಾಕರಿಸಿದೆ. ಮೊದಲಿಗೆ ಇದನ್ನು ರಾಜ್ಯ ಸರ್ಕಾರ ಮಾಡಿಲ್ಲ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗವನ್ನು ಕೇಳಿಕೊಂಡಿತ್ತು. ಬಾಲಕೃಷ್ಣನ್ ಅಥವಾ ಬಾಲಸುಬ್ರಮಣಿಯನ್ ಅವರು ನಡೆಸುತ್ತಿರುವ ಎನ್‌ಜಿಒ ನೆರವನ್ನು ಕೋರಿದ್ದರು. ಪ್ರಧಾನಿಯ ಪುಸಕ್ತದ ಲೇಖಕರು ಮತ್ತು ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡುವವರು ತಪ್ಪು ಮಾಡದಿದ್ದರೆ "ನೀವು ಏನು ನಿರೀಕ್ಷಿಸುತ್ತೀರಿ?" ಅವರು ಕೇಳಿದರು.

ಸಮೀಕ್ಷೆಯ ವಿನ್ಯಾಸ ಮತ್ತು ಚೌಕಟ್ಟು ಮತ್ತು ಡೇಟಾ ಪ್ರಮಾಣವನ್ನು ಪ್ರಶ್ನಿಸಿದರು. 110ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 5000 ಜನರು ಮಾತ್ರ ಇದ್ದಾರೆಯೇ ಅಥವಾ ಬೇರೆ ಏನಾದರೂ ಆಗಿದೆಯೇ ಎಂದು ಕೇಳಿದರು.

2023ರ ಕರ್ನಾಟಕ ಮತ್ತು 2024ರ ಲೋಕಸಭೆ ಚುನಾವಣೆಗೂ ಮುನ್ನ ಮತದಾರರ ಹೆಸರು ಡಿಲೀಟ್ ಮಾಡಲು ಚುನಾವಣಾ ಆಯೋಗ ಮತ್ತು ಬಿಜೆಪಿ ಕೈಜೋಡಿಸಿವೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ದತ್ತಾಂಶ ಆಧಾರಿತ ಹೇಳಿಕೆಗಳನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಕಲಬುರಗಿ ಮತ್ತು ಆಳಂದದಲ್ಲಿನ ‘ವೋಟ್ ಚೋರಿ’ಯನ್ನು ಬಿಜೆಪಿ ವಿವರಿಸಬೇಕಿದೆ ಎಂದರು.

ಆಳಂದ ಉತ್ತರ ಕರ್ನಾಟಕದ ಕಲಬುರಗಿಯಲ್ಲಿದ್ದು, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಕ್ಷೇತ್ರವನ್ನು ಪ್ರತಿನಿಧಿಸುವ ಹಿರಿಯ ಶಾಸಕ ಬಿಆರ್ ಪಾಟೀಲ್ ಅವರ ತವರು ಕ್ಷೇತ್ರವಾಗಿದೆ. ಸುಮಾರು 7,000 ದುರ್ಬಲ ಸಮುದಾಯಗಳ ಮತದಾರರ ಹೆಸರನ್ನು ಅಳಿಸಲಾಗಿದೆ. ಈ ಸಂಬಂಧ ಪುರಾವೆಗಳು ನಮ್ಮ ಬಳಿ ಇವೆ ಎಂದು ಪಾಟೀಲ್ ಮತ್ತು ಖರ್ಗೆಯವರು ಹೇಳಿಕೊಂಡ ನಂತರ 'ಮತ ಚೋರಿ' ವಿವಾದ ಹೊರಗೆ ಬಂದಿತ್ತು. ಅಲ್ಲದೇ ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು.

Rahul Gandhi, Siddaramaiah
Watch | ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕೆನ್ನುವ ಕಾಲವೂ ಬರಲಿದೆ...: Mallikarjun Kharge

ಕಾಂಗ್ರೆಸ್ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸ ಮೂಲಗಳ ಪ್ರಕಾರ, ಮತದಾರರ ಪಟ್ಟಿಯಿಂದ ನಿರ್ದಿಷ್ಠ ಸಂಖ್ಯೆಯ ಮತದಾರರ ಹೆಸರನ್ನು ಡಿಲೀಟ್ ಮಾಡಲು ಡೇಟಾ ಎಂಟ್ರಿ ತಂಡಕ್ಕೆ ಲಕ್ಷಾಂತರ ರೂ. ಪಾವತಿಸಲಾಗಿದೆ. ಇದರಲ್ಲಿ ಆರು ಮಂದಿ ಭಾಗಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಒಬ್ಬ ಮತದಾರರ ಹೆಸರನ್ನು ಡಿಲೀಟ್ ಮಾಡಲು 80 ರೂ. ಪಾವತಿ ಮಾಡಲಾಗಿದ್ದು, 2023ರ ವಿಧಾನಸಭಾ ಚುನಾವಣೆಗೂ ಮುನ್ನಾ ಸುಮಾರು 7,000 ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ವರದಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com