

ಬೆಂಗಳೂರು: ಮೆಜೆಸ್ಟಿಕ್‌ನಿಂದ ಮಲ್ಲೇಶ್ವರದ ಮಂತ್ರಿಮಾಲ್‌ವರೆಗಿನ ರಸ್ತೆಗೆ ವೈಟ್ ಟ್ಯಾಪಿಂಗ್ ನಡೆಯಲಿರುವ ಕಾರಣ ಮೂರು ತಿಂಗಳು ಬಂದ್ ಆಗಲಿದೆ. ಇದು ಮುಖ್ಯರಸ್ತೆಯಾಗಿರುವ ಕಾರಣ ತುಂಬಾ ಮಂದಿಗೆ ಓಡಾಟಕ್ಕೆ ಸಮಸ್ಯೆಯಾಗಲಿದೆ.
ಬಿ ಸ್ಮೈಲ್ ಕಡೆಯಿಂದ ವೈಟ್ ಟ್ಯಾಪಿಂಗ್ ಕಾಮಗಾರಿ ಕೈಗೊಂಡಿದ್ದು ಮುಂದಿನ ಮೂರು ತಿಂಗಳು ರಸ್ತೆ ಬಂದ್ ಆಗಲಿದೆ. ಬಂದ್ ಆಗಿರುವುದರಿಂದ ಮೆಜೆಸ್ಟಿಕ್‌ನಿಂದ ಬರುವ ವಾಹನಗಳು ಓಕುಳಿಪುರಂ ಅಂಡರ್ ಪಾಸ್ ಸುಜಾತ್ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರಂ ಪ್ರವೇಶ ಮಾಡಬೇಕಿದೆ ಹೀಗಾಗಿ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಸ್ತಿ ಆಗಲಿದೆ.
ಮೊದಲು ಮೆಜೆಸ್ಟಿಕ್‌ನಿಂದ ಮಂತ್ರಿಮಾಲ್ ಮಾರ್ಗವಾಗಿ ಕೇವಲ 10 ನಿಮಿಷದಲ್ಲಿ ಮಲ್ಲೇಶ್ವರಂ ಪ್ರವೇಶ ಮಾಡಬಹುದಿತ್ತು. ಆದರೆ ರಸ್ತೆ ಬಂದ್ ಆಗಿರುವ ಕಾರಣ ಪೀಕ್ ಅವಧಿಯಲ್ಲಿ ಮಲ್ಲೇಶ್ವರಂಗೆ ಬರಲು ಕನಿಷ್ಠ 30 ರಿಂದ 1 ಗಂಟೆ ಸಮಯ ಬೇಕಾಗಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ.
Advertisement