ಬೆಂಗಳೂರು: ಆಟೋ ಚಾಲಕರ 'ಡಿಸ್ ಪ್ಲೇ ಕಾರ್ಡ್' ಪ್ರದರ್ಶನ ಕಡ್ಡಾಯ; ಮತ್ತೆ ಕಟ್ಟುನಿಟ್ಟಾಗಿ ಜಾರಿ!

ನಗರ ಸಂಚಾರ ಪೊಲೀಸರು ಹಳೆಯ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಆಟೋರಿಕ್ಷಾಗಳಲ್ಲಿ ಡಿಸ್ ಪ್ಲೇ ಕಾರ್ಡ್ ಪ್ರದರ್ಶನ ಕಡ್ಡಾಯವಾಗಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಗಲಾಟೆ ನಿತ್ಯ ಎಂಬಂತಾಗಿದೆ. ಚಾಲಕರು ಸಾರ್ವಜನಿಕರಿಂದ ನಿಗದಿಗಿಂತ ಅಧಿಕ ಪ್ರಯಾಣ ದರ ವಸೂಲಿ, ಕರೆದ ಜಾಗಕ್ಕೆ ಬಾರದೆ ಉದ್ಧಟತನಿಂದ ವರ್ತಿಸುತ್ತಿದ್ದಾರೆ.

ಈ ವಿಚಾರವಾಗಿ ಸಾಕಷ್ಟು ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಹಳೆಯ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಆಟೋರಿಕ್ಷಾಗಳಲ್ಲಿ ಡಿಸ್ ಪ್ಲೇ ಕಾರ್ಡ್ ಪ್ರದರ್ಶನ ಕಡ್ಡಾಯವಾಗಿದೆ.

ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್ ರೆಡ್ಡಿ, ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ಆಟೋ ರಿಕ್ಷಾ ಚಾಲಕರು ತಮ್ಮ ಭಾವಚಿತ್ರಗಳನ್ನು ಒಳಗೊಂಡ ಡಿಸ್ ಪ್ಲೇ ಕಾರ್ಡ್ ಪ್ರದರ್ಶನ ಮಾಡುವುದು ಕಡ್ಡಾಯವಾಗಿದೆ. ಡಿಸ್ ಪ್ಲೇ ಅಳವಡಿಸದೇ ಇರುವ ಆಟೋ ಚಾಲಕರ ವಿರುದ್ಧ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಆಟೋ ಡ್ರೈವರ್ ಗಳು ಸಮವಸ್ತ್ರ ಧರಿಸದಿರುವುದು, ದುಬಾರಿ ದರಗಳು, ಬಾಡಿಗೆಗೆ ಹೋಗಲು ನಿರಾಕರಣೆ ಮತ್ತು ಡಿಸ್ ಪ್ಲೇ ಕಾರ್ಡ್ ಪ್ರದರ್ಶನ ಮಾಡದ ದೂರುಗಳ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯ ಭಾವವನ್ನು ಸೃಷ್ಟಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಈ ನಿಯಮ ಹೊಸದಲ್ಲ, ಆದರೆ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈಗ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕಾರ್ತಿಕ್ ರೆಡ್ಡಿ ಹೇಳಿದ್ದಾರೆ. ಇತರ ಜಿಲ್ಲೆಗಳ ನಿರ್ವಾಹಕರು ಸೇರಿದಂತೆ ಪರ್ಮಿಟ್‌ಗಳಿಲ್ಲದ ಆಟೋಗಳ ಕಾರ್ಯಾಚರಣೆಯನ್ನು ತಡೆಯಲು ಈ ಕ್ರಮ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಹೊಸ ಕಾರ್ಡ್ ಗಳ QR ಕೋಡ್ ಗಳ ಮೂಲಕ ASTraM ಆ್ಯಪ್ ನಲ್ಲಿ ಚಾಲಕನ ವಿವರಗಳನ್ನು ಪರಿಶೀಲಿಸಬಹುದು. ಇದು ಹೊಣೆಗಾರಿಕೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುತ್ತದೆ. 2025 ರಲ್ಲಿ BTP ಬಾಡಿಗೆಗೆ ಹೋಗಲು ನಿರಾಕರಿಸಿದ್ದಕ್ಕಾಗಿ 4,669 ಪ್ರಕರಣಗಳು ಮತ್ತು ದುಬಾರಿ ಶುಲ್ಕ ಕೇಳಿದ್ದಕ್ಕೆ 4,023 ಪ್ರಕರಣಗಳನ್ನು ದಾಖಲಿಸಿತ್ತು ಎಂದು ಹೇಳಿದರು. ಆದರೆ, ಉಚಿತವಾಗಿ ನೀಡಬೇಕಾದ ಡಿಸ್ಪ್ಲೇ ಕಾರ್ಡ್‌ಗಳಿಗೆ ಹಣ ನೀಡುವಂತೆ ಕೆಲವರು ಕೇಳುತ್ತಾರೆ ಎಂದು ಅನೇಕ ಆಟೋ ಚಾಲಕರು ಆರೋಪಿಸಿದರು.

Casual Images
ಬೆಂಗಳೂರು: ಪ್ರಯಾಣ ದರ ಹೆಚ್ಚಿಸಿ, ಜಗಳಕ್ಕೆ ಕಡಿವಾಣ ಹಾಕಿ- ಆಟೋ ಚಾಲಕರ ಸಲಹೆ!

ಆಟೋರಿಕ್ಷಾ ಚಾಲಕರ ಒಕ್ಕೂಟದ (ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ ಡಿ.ರುದ್ರಮೂರ್ತಿ ಮಾತನಾಡಿ, ಯಾವುದೇ ಶುಲ್ಕವನ್ನು ಸಂಗ್ರಹಿಸುವಂತಿಲ್ಲ. ಯಾರಾದರೂ ಹಣ ವಸೂಲಿ ಮಾಡುತ್ತಿದ್ದರೆ ಚಾಲಕರು ದೂರು ದಾಖಲಿಸಿಕೊಳ್ಳಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com