

ಶಿವಮೊಗ್ಗ: ಬಟ್ಟೆ ತೊಳೆಯಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಅರಬಿಳಚಿ ಕ್ಯಾಂಪ್ ಬಳಿ ನಡೆದಿದೆ. ಬಟ್ಟೆ ತೊಳೆಯಲು ಭದ್ರಾ ನಾಲೆಗೆ ಇಳಿದಿದ್ದಾಗ ಒಬ್ಬರು ಕಾಲು ಜಾರಿ ನಾಲೆಗೆ ಬಿದ್ದಿದ್ದರು. ಅವರನ್ನು ರಕ್ಷಿಸಲು ಇನ್ನೊಬ್ಬರು, ಮತ್ತೊಬ್ಬರು ನೀರಿಗೆ ಇಳಿದರು. ಹೀಗೆ ನಾಲ್ವರು ನೀರುಪಾಲಾಗಿದ್ದಾರೆ. ಮೃತರನ್ನು ನೀಲಾಬಾಯಿ, ಮಗ ರವಿಕುಮಾರ್, ಮಗಳು ಶ್ವೇತಾ ಹಾಗೂ ಅಳಿಯ ಪರಶುರಾಮ ಎಂದು ಗುರುತಿಸಲಾಗಿದೆ.
Advertisement