

ಬೆಂಗಳೂರು: ಮಕ್ಕಳು ಬೇಕು, ಮಕ್ಕಳು ಬೇಕು ಎಂದು ಕೇಳುತ್ತಿದ್ದ ಪತ್ನಿಯನ್ನು ಕೊಂದು ಹಾರ್ಟ್ ಆಟ್ಯಕ್ ಆಗಿದೆ ಎಂದು ಕಥೆ ಕಟ್ಟಿದ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನೇಗಿನಹಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
21 ವರ್ಷದ ರಾಜೇಶ್ವರಿ ಫಕ್ಕಿರಪ್ಪ ಗಿಲಕ್ಕನವರ್ ಅವರನ್ನು ಉಸಿರುಗಟ್ಟಿಸಿ ಸಾಯಿಸಿ ಬಳಿಕ ಹಾರ್ಟ್ ಆಟ್ಯಕ್' ಕಥೆ ಕಟ್ಟಿದ ಪತಿ ಫಕ್ಕಿರಪ್ಪ ಗಿಲಕ್ಕನವರ್, ಆಕೆಯ ಅಂತ್ಯಸಂಸ್ಕಾರಕ್ಕಾಗಿ ಕುಟುಂಬಸ್ಥರಿಗೆಲ್ಲಾ ಸುದ್ದಿ ಮುಟ್ಟಿಸಿದ್ದ.
ಮೂರು ವರ್ಷಗಳ ಹಿಂದಷ್ಟೇ ರಾಜೇಶ್ವರಿ ಮದುವೆಯಾಗಿತ್ತು. ಆದರೆ ಮಕ್ಕಳಿಲ್ಲದ ಕಾರಣ ದಂಪತಿ ನಡುವೆ ಜಗಳ ನಡೆಯುತಿತ್ತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಕೋಪದ ಭರದಲ್ಲಿ ಕೋಪದ ಭರದಲ್ಲಿ ಗಿಲಕ್ಕನವರ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ರಾಜೇಶ್ವರಿ ಅವರ ಪೋಷಕರು ಅಂತ್ಯಕ್ರಿಯೆಗೆ ಆಗಮಿಸಿದಾಗ ಆಕೆಯ ಕತ್ತಿನ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ್ದು, ನಿಜವಾಗಿಯೂ ಹಾರ್ಟ್ ಆಟ್ಯಕ್ ನಿಂದ ಸತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ರಾಜೇಶ್ವರಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ತಿಳಿದುಬಂದಿದೆ.
ವಿಚಾರಣೆ ವೇಳೆ ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ರಾಜೇಶ್ವರಿ ಶವವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
Advertisement