ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ.. ನಿರ್ಮಲಾ ಸೀತಾರಾಮನ್; ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ: ಪ್ರದೀಪ್ ಈಶ್ವರ್

ನಿನ್ನೆ ಸದನದಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೆರಿಗೆ ವಿಚಾರದಲ್ಲಿ ಟೀಕಿಸುವಾಗ ಬಿಗ್ ಬಾಸ್ ನಟ ಗಿಲ್ಲಿಯ ಹೆಸರು ಪ್ರಸ್ತಾಪ ಮಾಡಿದ್ದಾರೆ.
ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ.. ನಿರ್ಮಲಾ ಸೀತಾರಾಮನ್; ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ: ಪ್ರದೀಪ್ ಈಶ್ವರ್
Updated on

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12 ಮತ್ತು ಅದರ ಟ್ರೋಫಿ ವಿನ್ನರ್ ಗಿಲ್ಲಿ ನಟ ಸಾಕಷ್ಟು ಸುದ್ದಿ ಮಾಡಿದ್ದು ಸುಳ್ಳಲ್ಲ. ಈ ವಿಷಯ ಈಗ ವಿಧಾನಸಭೆಯಲ್ಲಿ ಕೂಡ ಪ್ರಸ್ತಾಪವಾಗಿದೆ.

ನಿನ್ನೆ ಸದನದಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೆರಿಗೆ ವಿಚಾರದಲ್ಲಿ ಟೀಕಿಸುವಾಗ ಬಿಗ್ ಬಾಸ್ ನಟ ಗಿಲ್ಲಿಯ ಹೆಸರು ಪ್ರಸ್ತಾಪ ಮಾಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ ಅಸಲಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂದಿದ್ದಾರೆ.

ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ.. ನಿರ್ಮಲಾ ಸೀತಾರಾಮನ್; ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ: ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್- ಪ್ರತಾಪ್ ಸಿಂಹ ವಾಕ್ಸಮರ ವಿಷಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಎಂಟ್ರಿ; ಯುವ ನಾಯಕರಿಗೆ ಸಚಿವೆ ಹೇಳಿದ್ದೇನು?

ಬಿಗ್‌ ಬಾಸ್‌‌ ವಿನ್ನರ್‌ ಗಿಲ್ಲಿ ಅಲ್ಲ ಎಂದ ಪ್ರದೀಪ್‌ ಈಶ್ವರ್‌!

ಹೌದು, ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಅಲ್ಲ, ನಿಜಕ್ಕೂ ವಿನ್ನರ್‌‌ ನಿರ್ಮಲಾ ಸೀತಾರಾಮನ್‌ ಎಂದಿದ್ದಾರೆ. 50 ಲಕ್ಷಕ್ಕೆ 18% ಜಿಎಸ್‌ಟಿ, 13% ಇನ್‌ಕಮ್ ಟ್ಯಾಕ್ಸ್, 4% ಸೆಸ್ ಸೇರಿ ಸುಮಾರು 52% ತೆರಿಗೆ ಹೋಗುತ್ತದೆ. ಗಿಲ್ಲಿಗೆ 35 ಲಕ್ಷ ಮಾತ್ರ ಸಿಗುತ್ತದೆ ಎಂದು ಪ್ರದೀಪ್‌ ಈಶ್ವರ್‌ ಹೇಳಿ, ಇದರಿಂದ ಕೇಂದ್ರದ ತೆರಿಗೆ ನೀತಿಯನ್ನು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಶ್ರೀರಾಮಚಂದ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಬಡ ಜನರ ಹೊಟ್ಟೆ ತುಂಬಿಸುತ್ತಿದ್ದಾರೆ. ನನ್ನ ಪಾಲಿನ ಶ್ರೀರಾಮಚಂದಿರ ಅವರು. ರಾಮಮಂದಿರ ನಿರ್ಮಾಣ ಮಾಡಿದರೆ ದೇಶಪ್ರೇಮ ಎನಿಸಿಕೊಳ್ಳುವುದಿಲ್ಲ. ಬಡವರ ಹೊಟ್ಟೆ ತುಂಬಿಸುವುದು ಕೂಡ ದೇಶಪ್ರೇಮ. ಆ ಕೆಲಸವನ್ನು ನಮ್ಮ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com