

ಮಡಿಕೇರಿ: ಕಾಫಿ ನಾಡು ಕೊಡಗಿನಲ್ಲಿ ಮತ್ತೊಂದು ಕಾಡಾನೆ ದುರಂತ ಸಂಭವಿಸಿದ್ದು, ಎಸ್ಟೇಟ್ ನಲ್ಲಿ ಸುತ್ತಾಡುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ದಿಢೀರ್ ಎದುರಾದ ಕಾಡಾನೆ ಅವರನ್ನು ತುಳಿದು ಕೊಂದು ಹಾಕಿದೆ.
ಕೊಡಗಿನನ ಸಿದ್ದಾಪುರ ಬಳಿಯ ಬಡಗ-ಬಣಂಗಾಲ ಗ್ರಾಮದಲ್ಲಿ ಈ ನಡೆದಿದ್ದು, ಎಸ್ಟೇಟ್‌ನ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಹುಂಡ್ಲಿಯ ನಿವಾಸಿ ಅಬ್ದುಲ್ ಲತೀಫ್ (72) ಗುರುವಾರ ಮಧ್ಯಾಹ್ನ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಊಟದ ಸಮಯದಲ್ಲಿ, ಲತೀಫ್ ಎಸ್ಟೇಟ್‌ನಲ್ಲಿ ಸುತ್ತಾಡುತ್ತಿದ್ದಾಗ ಕಾಡಾನೆಯೊಂದು ಎದುರಾಯಿತು. ಈ ವೇಳೆ ನೋಡ ನೋಡುತ್ತಲೇ ಕಾಡಾನೆ ಆತನ ಮೇಲೆ ದಾಳಿ ಮಾಡಿ ತುಳಿದು ಹಾಕಿದೆ. ಇತರೆ ಕೆಲವು ಕಾರ್ಮಿಕರು ದಾಳಿಯಿಂದ ಪಾರಾಗಿದ್ದಾರೆ.
ಬಳಿಕ ಆನೆ ದೂರಾದ ಬಳಿಕ ಲತೀಫ್‌ನನ್ನು ಸಿದ್ದಾಪುರ ಆರೋಗ್ಯ ರಕ್ಷಣಾ ಕೇಂದ್ರಕ್ಕೆ ಕರೆದೊಯ್ಯುವಾಗ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ವಿರಾಜಪೇಟೆ ಆರ್‌ಎಫ್‌ಒ ಕೆ.ವಿ. ಶಿವರಾಮ್ ಸೇರಿದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಏತನ್ಮಧ್ಯೆ, ಈ ಕಾಫಿ ಋತುವಿನಲ್ಲಿ ಹಲವಾರು ಆನೆಗಳು ಎಸ್ಟೇಟ್‌ಗಳಲ್ಲಿ ಓಡಾಡುತ್ತಿವೆ ಎಂದು ಸ್ಥಳೀಯರು ಹಂಚಿಕೊಂಡರು ಮತ್ತು ಅದೇ ಆನೆ ಈ ಹಿಂದೆ ಮತ್ತೊಬ್ಬ ಎಸ್ಟೇಟ್ ಕೆಲಸಗಾರನ ಮೇಲೆ ದಾಳಿ ಮಾಡಿತ್ತು. ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.
ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಡು ಆನೆಗಳಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿದರು. ಈ ಮಧ್ಯೆ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಆನೆಗಳನ್ನು ಮತ್ತೆ ಕಾಡಿಗೆ ಓಡಿಸಲು ಕಾರ್ಯಾಚರಣೆ ನಡೆಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಹಾರ ವಿತರಣೆ
ಅರಣ್ಯ ಇಲಾಖೆಯು ಲತೀಫ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರದ ಚೆಕ್ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಪದೇ ಪದೇ ದಾಳಿ ನಡೆಯುತ್ತಿರುವುದರಿಂದ ಒಂಟಿ ಆನೆಯನ್ನು ಸೆರೆಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದರು.
Advertisement