'ಬೆಂಗಳೂರು ಸಿಟಿ ದುಬಾರಿ, ನನ್ನ ಮೇ ತಿಂಗಳ ಖರ್ಚು ನೋಡಿ' ಎಂದು ವಿಡಿಯೊ ಮಾಡಿ ಹಾಕಿದ ಟೆಕ್ಕಿ ಯುವತಿ': Viral Video

ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಅಂಜಲಿ ತಮ್ಮ ಮಾಸಿಕ ಖರ್ಚಿನ ವಿವರವನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ.
Bengaluru techie Anjali
ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ ಬೆಂಗಳೂರು ಟೆಕ್ಕಿ ಅಂಜಲಿ
Updated on

ಬೆಂಗಳೂರು: ಭಾರತದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ, ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವ ವೃತ್ತಿಪರರಿಗೆ ಮನೆ ಬಾಡಿಗೆ, ದೈನಂದಿನ ಖರ್ಚು- ವೆಚ್ಚ, ಸಂಚಾರ ಮತ್ತು ಜೀವನಶೈಲಿಯ ಖರ್ಚುಗಳು ತಿಂಗಳ ಬಜೆಟ್ ನ್ನು ಹೆಚ್ಚಿಸುತ್ತಿವೆ. ಈ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಕಥೆಗಳನ್ನು ಹಂಚಿಕೊಳ್ಳುವುದನ್ನು ನೋಡುತ್ತೇವೆ.

ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಅಂಜಲಿ ತಮ್ಮ ಮಾಸಿಕ ಖರ್ಚಿನ ವಿವರವನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಅವರು ಮೇ ತಿಂಗಳಲ್ಲಿ ಬಾಡಿಗೆ, ಆಹಾರ, ಶಾಪಿಂಗ್, ಪ್ರವಾಸ ಮತ್ತು ಇತರ ಜೀವನಶೈಲಿಯ ವೆಚ್ಚಗಳಿಗೆ ಒಟ್ಟು 71,000 ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, Atlassianನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅಂಜಲಿ, ಬೆಂಗಳೂರಲ್ಲಿ ವಾಸಿಸುವ ಕಾರ್ಪೊರೇಟ್ ಯುವತಿ ಎಂದು ತಮ್ಮನ್ನು ಪರಿಚಯಿಸಿಕೊಂಡು ತಮ್ಮ ಮಾಸಿಕ ಬಜೆಟ್‌ನ ಸಂಪೂರ್ಣ ವಿವರ ನೀಡಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ವಯಸ್ಕರು ಜೀವನ ನಡೆಸಲು 71,000 ರೂಪಾಯಿ ತಿಂಗಳಿಗೆ ವೆಚ್ಚ ಮಾಡುವುದು ಅಷ್ಟೇನೂ ಹೆಚ್ಚಲ್ಲ ಎಂದು ಅವರು ಹೇಳಿದ್ದಾರೆ.

ಅವರ ಪ್ರಕಾರ, ಅತಿ ದೊಡ್ಡ ವೆಚ್ಚವೆಂದರೆ 1BHK ಅಪಾರ್ಟ್‌ಮೆಂಟ್‌ನ ಬಾಡಿಗೆ ಮತ್ತು ನಿರ್ವಹಣಾ ಶುಲ್ಕವಾಗಿದ್ದು, ಇದಕ್ಕೆ ತಿಂಗಳಿಗೆ 28,000 ರೂಪಾಯಿ ವೆಚ್ಚವಾಗುತ್ತದೆ. ನೀರು ಮತ್ತು ವಿದ್ಯುತ್ ಬಿಲ್‌ಗೆ ಹೆಚ್ಚುವರಿಯಾಗಿ 1,000 ರೂಪಾಯಿ ಖರ್ಚಾಗುತ್ತದೆ.

ಕಚೇರಿಯಲ್ಲಿ ವಾರದ ಕೆಲಸದ ದಿನಗಳಲ್ಲಿ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ಉಚಿತವಾಗಿ ದೊರೆಯುವುದರಿಂದ ಆಹಾರದ ವೆಚ್ಚ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ರಾತ್ರಿ ಊಟ ತಯಾರಿಸಲು ಅಡುಗೆ ಮಾಡುವವರಿಗೆ ತಿಂಗಳಿಗೆ 3,000 ರೂಪಾಯಿ ನೀಡಲಾಗುತ್ತದೆ. ದಿನಸಿ ಸಾಮಾನುಗಳಿಗೆ 3,000 ರೂಪಾಯಿಗಳಿಂದ 4,000 ರೂಪಾಯಿ ವೆಚ್ಚವಾಗುತ್ತದೆ.

Bengaluru techie Anjali
ಬೆಂಗಳೂರು: 500 ರೂ ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

ಕಂಪನಿಯೇ ಕಚೇರಿ ಕ್ಯಾಬ್ ಸೌಲಭ್ಯ ಒದಗಿಸುವುದರಿಂದ ಸಂಚಾರ ವೆಚ್ಚ ಕಡಿಮೆ ಇದೆ. ಜಿಮ್ ಸದಸ್ಯತ್ವ, ವೈ-ಫೈ, ಆರ್‌ಒ ನೀರಿನ ಸೇವೆ ಮತ್ತು ವಿವಿಧ ಸಬ್‌ಸ್ಕ್ರಿಪ್ಷನ್‌ಗಳಿಗೆ ಒಟ್ಟಾರೆ ತಿಂಗಳಿಗೆ ಸುಮಾರು 3,000 ರೂಪಾಯಿ ಖರ್ಚು ಮಾಡುತ್ತಾರೆ.

ಇದರ ಜೊತೆಗೆ ಹೊರಗೆ ಊಟ, ವಾರಾಂತ್ಯದ ಮನರಂಜನೆ ಮತ್ತು ಶಾಪಿಂಗ್‌ಗೆ 12,000 ರೂಪಾಯಿಗಳಿಂದ 15,000 ರೂಪಾಯಿ ವೆಚ್ಚವಾಗುತ್ತದೆ. ಬೆಂಗಳೂರಿನಿಂದ 3-4 ದಿನಗಳ ಪ್ರವಾಸ ಕೈಗೊಳ್ಳಲು ಮತ್ತಷ್ಟು 15,000 ದಿಂದ 20,000 ರೂಪಾಯಿ ಖರ್ಚಾಗುತ್ತದೆ.

ಈ ಎಲ್ಲ ವೆಚ್ಚಗಳನ್ನು ಸೇರಿಸಿದಾಗ ಮೇ ತಿಂಗಳಲ್ಲಿ ತಮ್ಮ ಒಟ್ಟು ಖರ್ಚು ಸುಮಾರು 71,000 ರೂಪಾಯಿ ಆಗಿದೆ ಎಂದು ಅಂಜಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಈ ವೆಚ್ಚವನ್ನು ಅತಿಯಾದದ್ದು ಎಂದು ಟೀಕಿಸಿದರೆ, ಇನ್ನೂ ಕೆಲವರು ಬೆಂಗಳೂರಿನ ಜೀವನ ವೆಚ್ಚವನ್ನು ಪರಿಗಣಿಸಿದರೆ ಇದು ಸಹಜ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಬ್ಬರು, ಪ್ರೀಮಿಯಂ ಬ್ರ್ಯಾಂಡ್‌ಗಳ ಶಾಪಿಂಗ್ ಮತ್ತು ಐಷಾರಾಮಿ ಜೀವನಶೈಲಿಯಂತಹ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ, ಮನೆ, ಜಮೀನು, ಅಮೆರಿಕದ ಷೇರುಗಳು ಅಥವಾ ಮೌಲ್ಯಯುತ ಪ್ರಮಾಣಪತ್ರಗಳಲ್ಲಿ ಹೂಡಿಕೆ ಮಾಡಿ. 40ರ ನಂತರ ನಿಮ್ಮ ಇಂದಿನ ನಿರ್ಧಾರಕ್ಕೆ ನೀವೇ ಧನ್ಯವಾದ ಹೇಳುತ್ತೀರಿ ಎಂದು ಸಲಹೆ ನೀಡಿದ್ದಾರೆ.

ಮತ್ತೊಬ್ಬರು, 71,000 ರೂಪಾಯಿ ಎನ್ನುವುದು ಬೆಂಗಳೂರಿನ ಹಲವರ ತಿಂಗಳ ಸಂಬಳವೇ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು, ಬೆಂಗಳೂರಿನಲ್ಲಿ ತಿಂಗಳಿಗೆ 71,000 ಖರ್ಚಾ? ನಾನು ಇನ್ನೂ 10,000ದಲ್ಲೇ ಜೀವನ ನಡೆಸುತ್ತಿದ್ದೇನೆ ಎಂದು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರ, ನಾನು ಬೆಂಗಳೂರಿನಲ್ಲಿ ವಾಸಿಸಿದ್ದೇನೆ. ಈ ವೆಚ್ಚ ನ್ಯಾಯಸಮ್ಮತವಾಗಿದೆ. ಕಾಮೆಂಟ್ ಮಾಡುತ್ತಿರುವವರಿಗೆ ಬೆಂಗಳೂರಿನ ಬಾಡಿಗೆಯ ಬಗ್ಗೆ ಅರಿವು ಇಲ್ಲದಂತಿದೆ. ಉತ್ತಮ ಪ್ರದೇಶದಲ್ಲಿ ₹8,000 ರೂಪಾಯಿ ಬಾಡಿಗೆ ಸಾಮಾನ್ಯ. ನಾನು ಈಗ ಮೂರನೇ ಹಂತದ ನಗರದಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದರೂ ನನ್ನ ವೈಯಕ್ತಿಕ ವೆಚ್ಚ ತಿಂಗಳಿಗೆ ಸುಮಾರು 50,000 ರೂಪಾಯಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com